ಕನ್ನಡಪ್ರಭ ವಾರ್ತೆ ಕೆಜಿಎಫ್ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆಯೊಂದಿಗೆ ಮೂಲಭೂತ ಹಕ್ಕುಗಳ, ಕರ್ತವ್ಯವನ್ನೂ ನೀಡಿದೆ ಸಂವಿಧಾನವೇ ದೊಡ್ಡ ಬಲ. ನಮ್ಮ ಸಂವಿಧಾನವು ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನಾಗಿದೆ ಎಂದು ಕೆಜಿಎಫ್‌ನ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸವಿಲ್ ನ್ಯಾಯಾಧೀಶರಾದ ವಿನೋದ್‌ಕುಮಾರ್.ಎಂ ತಿಳಿಸಿದರು.ಕೆಜಿಎಫ್ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಡಾ.ಕೆಂಗಲ್ ಹನುಮಂತಯ್ಯ ಕಾನೂನು ವಿದ್ಯಾಲಯ ಡಾ.ಟಿ.ತಿಮ್ಮಯ್ಯ ತಾಂತ್ರಿಕ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಂವಿಧಾನ ಕುರಿತು ಮಾಹಿತಿ
ಎಲ್ಲರ ಹಿತ ಕಾಯುವ ಸಂವಿಧಾನ
ಸಂವಿಧಾನದ ಕರಡುನ್ನು ೧೯೪೯ ನವೆಂಬರ್ ೨೬ ರಂದು ಸಲ್ಲಿಸಲಾಯಿತು, ನಮ್ಮ ಸಂವಿಧನದಲ್ಲಿ ಎಲ್ಲ ವರ್ಗಗಳ, ಎಲ್ಲ ಸ್ತರದ ಜನರ ಹಿತವಿದೆ, ಜೊತೆಗೆ ನಮ್ಮ ದೇಶದ ಪ್ರಜಾಪ್ರಭುತ್ವದ ಭದ್ರ ಬುನಾದಿಯೂ ನಮ್ಮ ಸಂವಿಧಾನದಲ್ಲಿ ಅಡಿಗಿರುವುದಾಗಿ ತಿಳಿಸಿದರು.ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ರಾಜಗೋಪಾಲಗೌಡ ಮಾತನಾಡಿ, ಭಾರತದ ಸಂವಿಧಾನ ಪ್ರತಿ ವರ್ಷ ನ.೨೬ರಂದು ಭಾರತದ ಸಂವಿದಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ, ಸರಕಾರಿ ಕಚೇರಿಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಈ ದಿನವನ್ನು ಆಚರಣೆ ಮಾಡಿ ಯುವ ಜನತೆಗೆ ಸಂವಿಧಾನ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ, ಪ್ರಮುಖವಾಗಿ ನಮ್ಮ ದೇಶದ ರಾಜಕೀಯ ಹಾಗೂ ಎಲ್ಲ ಜನರಿಗೂ ಸಮಾನತೆ ಸಾರಿ ಹೇಳುವ ಸಂವಿಧಾನ ಗ್ರಂಥವನ್ನು ಅಂಬೇಡ್ಕರ್ ಕೈಯಲ್ಲಿ ಬರೆದಿರುವುದು ವಿಶೇಷವಾಗಿದೆ ಎಂದರು.ದೇಶಕ್ಕೆ ಸಂವಿಧಾನವೇ ಶ್ರೇಷ್ಠಡಾ.ಟಿ.ತಿಮ್ಮಯ್ಯ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಸೈಯದ್ ಅರೀಫ್ ಮಾತನಾಡಿ, ಹಿಂದೂಗಳಿಗೆ ಭಗವದ್ಗೀತೆ, ಅಲ್ಪಸಂಖ್ಯಾತರಿಗೆ ಕುರಾನ್, ಕ್ರಿಶ್ಚಿಯನ್ ಸಮುದಾಯಕ್ಕೆ ಬೈಬಲ್‌ನಂತೆ ದೇಶಕ್ಕೆ, ದೇಶದ ಜನತೆಗೆ ಸಂವಿಧಾನವೇ ಧರ್ಮ ಗ್ರಂಥವಾಗಿದೆ ಎಂದರು.ಕಾನೂನು ಕಾಲೇಜಿನ ಪ್ರಾಂಶುಪಾಲ ಮ್ಯಾಥ್ಯಸ್, ವಕೀಲರ ಸಂಘದ ಉಪಾಧ್ಯಕ್ಷ ಮಣಿವಣ್ಣನ್, ಕಾರ್‍ಯದರ್ಶಿ ಕೆ.ಸಿ.ನಾಗರಾಜ್, ಡಾ.ತಿಮ್ಮಯ್ಯ ಕಾಲೇಜಿನ ಕಾರ್‍ಯದರ್ಶಿ ಕೃಷ್ಣಕುಮಾರ್, ಕಾನೂನು ಕಾಲೇಜಿನ ಉಪ ಪ್ರಾಂಶುಪಾಲ ಪ್ರಸನ್ನ ಕುಮಾರ್, ಡಾ.ಶಣೈ ಇದ್ದರು.