ಅಂಕೋಲಾ: ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿದ ಅಪರೂಪದ ಘಟನೆ ತಾಲೂಕಿನ ಬಾಳೆಗುಳಿಯ ಗಜಾನನ ಶೆಟ್ಟಿ ಎಂಬವರ ಮನೆಯಲ್ಲಿ ಇತ್ತೀಚೆಗೆ ನಡೆದಿದೆ.ಸಾಮಾನ್ಯವಾಗಿ ಹಸು ಒಂದು ತಪ್ಪಿದರೆ ಎರಡು ಕರುವಿಗೆ ಜನ್ಮ ನೀಡಿರುವುದನ್ನು ಕೇಳಿದ್ದೇವೆ. ಆದರೆ ಗಜಾನನ ಶೆಟ್ಟಿಯವರ ಹಸು ತೀರಾ ಅಪರೂಪವೆಂಬಂತೆ ಮೂರು ಕರುಗಳಿಗೆ ಜನ್ಮ ನೀಡಿದೆ. ಇದರಲ್ಲಿ ಒಂದು ಒಂದು ಗಂಡುಕರು ಮತ್ತು ಎರಡು ಹೆಣ್ಣುಕರುಗಳಿವೆ. ಎಲ್ಲವೂ ಆರೋಗ್ಯದಿಂದ ಓಡಾಡಿಕೊಂಡಿವೆ.ವಿಡಿಯೋ ಕಾಲ್ ಮೂಲಕ ₹1 ಲಕ್ಷ ವಂಚನೆ: ದೂರು
ಭಟ್ಕಳ: ಬ್ಯಾಟರಿ ಮಾರಾಟ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ಆನ್‌ಲೈನ್ ಮೋಸಗಾರರೊಬ್ಬರು ವಿಡಿಯೋ ಕಾಲ್ ಮಾಡಿ ಬ್ಯಾಂಕ್ ಖಾತೆಯಲ್ಲಿದ್ದ ₹೧ ಲಕ್ಷವನ್ನು ಎಗರಿಸಿ ಮೋಸ ಮಾಡಿದ್ದಾನೆ.ಮಾರುಕೇರಿಯ ಕೋಟಖಂಡ ಕಲ್ಲಬ್ಬೆ ನಿವಾಸಿ ಗೋವಿಂದ ಹೆಗಡೆ ಅವರಿಗೆ ನ. ೨೭ರಂದು ವಿಡಿಯೋ ಕಾಲ್ ಒಂದು ಬಂದಿದ್ದು, ಅದನ್ನು ಸ್ವೀಕರಿಸಿದ್ದಾರೆ. ಬ್ಯಾಟರಿ ಕಂಪನಿ ಕಡೆಯಿಂದ ಮಾತನಾಡುತ್ತಿದ್ದೇವೆ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಅವರ ವಾಟ್ಸ್‌ಆ್ಯಪ್‌ಗೆ ಕೆಲ ಲಿಂಕ್ ಕಳುಹಿಸಿದ್ದು, ಅದನ್ನು ಗೋವಿಂದ ಹೆಗಡೆ ಅವರು ಡೌನ್‌ಲೋಡ್ ಮಾಡಿದ್ದಾರೆ.ಅಲ್ಲದೇ ಆತ ಕೇವಲ ₹೨ ಆನ್‌ಲೈನ್ ಪೇಮೆಂಟ್ ಮಾಡುವಂತೆ ಕೋರಿದ್ದಾಗ ಆತನ ಫೋನ್ ಕಟ್ ಮಾಡಿದ್ದರು. ಆದರೆ ರಾತ್ರಿ ಇವರ ಮೊಬೈಲ್‌ಗೆ ಮೆಸೇಜ್ ಬಂದಿದ್ದನ್ನು ನೋಡಿದ ಇವರಿಗೆ ಶಾಕ್ ಆಗಿತ್ತು. ಎರಡು ಬಾರಿ ಇವರ ಖಾತೆಯಿಂದ ಹಣವನ್ನು ತೆಗೆಯಲಾಗಿದ್ದು, ಒಂದು ಬಾರಿ ₹೯೦ ಸಾವಿರ ಹಾಗೂ ಇನ್ನೊಂದು ಬಾರಿ ₹೧೦ ಸಾವಿರ ಒಟ್ಟು ₹೧ ಲಕ್ಷಗಳನ್ನು ಎಗರಿಸಿದ್ದಾನೆ. ಈ ಬಗ್ಗೆ ಬ್ಯಾಂಕಿಗೆ ಮಾರನೆಯ ದಿನ ಬೆಳಗ್ಗೆ ಬಂದು ವಿಚಾರಿಸಿದಾಗ ಇವರ ಬ್ಯಾಂಕ್ ಖಾತೆಯಿಂದ ಹಣ ಎಗರಿಸಿರುವುದು ಖಚಿತಗೊಂಡಿದ್ದು, ತಕ್ಷಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ವನ್ಯಜೀವಿ ಬೇಟೆಯಾಡಿದ ಮೂವರ ಬಂಧನಕುಮಟಾ: ಕಾಡುಹಂದಿಯನ್ನು ಬೇಟೆಯಾಡಿದ ಆರೋಪದಲ್ಲಿ ಕತಗಾಲ ವಲಯದ ಅರಣ್ಯ ಅಧಿಕಾರಿಗಳು ಮೂವರನ್ನು ಮಂಗಳವಾರ ಬಂಧಿಸಿದ್ದಾರೆ.ಬಂಧಿತರನ್ನು ಅಳಕೋಡದ ಸುಬ್ಬಾ ಗೋವಿಂದ ನಾಯ್ಕ(೭೦), ಎಡತಾರೆ ಗ್ರಾಮದ ಗುರುಪ್ರಸಾದ ಗೌಡ(೩೦) ಹಾಗೂ ಜಯಂತ ಶಂಕರ ಗೌಡ(೪೨) ಎಂದು ಗುರುತಿಸಲಾಗಿದೆ.ಬಂಧಿತರಿಂದ ಸುಮಾರು ೪೫ ಕೆಜಿ ಕಾಡುಹಂದಿ ಮಾಂಸ, ನಾಡ ಬಂದೂಕಿನ ಗುಂಡುಗಳು, ಕಡವೆ ಕೊಂಬುಗಳು, ೩ ಬೈಕ್ ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಪ್ರೀತಿ ನಾಯ್ಕ, ಡಿಆರ್‌ಎಫ್‌ಒ ಹೂವಣ್ಣ ಗೌಡ, ಹರಿಶ್ಚಂದ್ರ ಪಟಗಾರ, ಸಿಬ್ಬಂದಿ ಮಹೇಶ ಹವಳೆಮ್ಮನವರ, ಸದಾಶಿವ ಪುರಾಣಿಕ, ಭರತಕುಮಾರ ಬಿ., ಮಾಳಪ್ಪ ಮಾಕೊಂಡ, ತಾರಾ ನಾಯ್ಕ ಪಾಲ್ಗೊಂಡಿದ್ದರು.