ಲಕ್ಷ್ಮೇಶ್ವರ: ಋತುಮಾನಗಳಿಗೆ ತಕ್ಕಂತೆ ನಮ್ಮ ಹಬ್ಬ-ಹುಣ್ಣಿಮೆಗಳು ಇದ್ದು, ಅವು ಪ್ರಕೃತಿಗೆ ಪೂರಕವಾಗಿವೆ ಎಂದು ಲಕ್ಷ್ಮೇಶ್ವರದ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಹೇಳಿದರು.
ಪಟ್ಟಣದ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿಯ ವತಿಯಿಂದ ಪ್ರತಿ ಹುಣ್ಣಿಮೆಯಂದು ಹಮ್ಮಿಕೊಳ್ಳಲಾಗುವ ಪುಲಿಗೆರೆ ಪೌರ್ಣಿಮೆ ಸರಣಿಯ ೩೧ನೇ ಸಂಚಿಕೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನ್ನದಾತನ ಸಂಗಾತಿಯಾದ ಎತ್ತುಗಳನ್ನು ಸಿಂಗರಿಸಿ ಸಂಭ್ರಮಿಸುವುದೇ ಕಾರಹುಣ್ಣಿಮೆಯ ವೈಶಿಷ್ಟ್ಯ ಎಂದು ಹೇಳಿದರು.ಉಪನ್ಯಾಸಕರಾಗಿ ಭಾಗವಹಿಸಿದ ಶಿಕ್ಷಕ ಬಿ.ಟಿ. ಹೆಬ್ಬಾಳ ಮಾತನಾಡಿ, ಕಾರಹುಣ್ಣಿಮೆ ಹಾಗೂ ಅಂತಾರಾಷ್ಟ್ರೀಯ ಯೋಗಾ ದಿನಾಚರಣೆ-ಒಂದು ಚಿಂತನೆ ವಿಷಯದ ಕುರಿತು ಉಪನ್ಯಾಸ ನೀಡಿ, ಮುಂಗಾರಿಗೆ ಹದಗೊಳಿಸಿದ ಹೊಲದಲ್ಲಿ ಬಿತ್ತನೆಗೆ ಸಜ್ಜಾಗಿರುವ ರೈತ ತನ್ನ ಒಡನಾಡಿ ಎತ್ತುಗಳನ್ನು ಹುರಿದುಂಬಿಸುವ ಹಬ್ಬ ಕಾರಹುಣ್ಣಿಮೆ ಹಾಗೂ ಭಾರತದ ಅಂತಾರಾಷ್ಟ್ರೀಯ ಗೌರವ ಹೆಚ್ಚಿಸಿದ ಯೋಗ ದಿನಾಚರಣೆ ಎರಡೂ ಒಂದೇ ದಿನ ಬಂದಿರುವುದು ಯೋಗಾಯೋಗ ಎಂದು ಹೇಳಿದರು.
ಶಿಕ್ಷಕ ಶೇಖಪ್ಪ ಉಪ್ಪಿನ ಕಾರ್ಯಕ್ರಮ ಉದ್ಘಾಟಿಸಿದರು. ಬಸನಗೌಡ ಪಾಟೀಲ ಮಾತನಾಡಿದರು. ಶಿವಜೋಗಪ್ಪ ಚಂದರಗಿ ಅತಿಥಿಪರ ನುಡಿಗಳನ್ನಾಡಿದರು.ಕಾರ್ಯಕ್ರಮದಲ್ಲಿ ಹಿರಿಯರಾದ ಡಿ.ಬಿ. ಬಳಿಗಾರ, ಹಾಲೆವಾಡಿಮಠ, ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳಾದ ಪರ್ಣಾಜಿ ಕರಾಟೆ, ನೀಲಪ್ಪ ಕರ್ಜಕಣ್ಣವರ, ಸುರೇಶ ರಾಚನಾಯ್ಕರ, ಸೋಮಣ್ಣ ಅಣ್ಣಿಗೇರಿ, ಎಸ್.ಎಫ್. ಆದಿ, ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಹಣಗಿ, ಎಂ.ಕೆ. ಕಳ್ಳಿಮಠ, ನಿಂಗಪ್ಪ ಗೊರವರ, ಎನ್.ಆರ್. ಸಾತಪುತೆ, ಗೋಪಾಲ ನಾಯಕ, ಎಸ್.ಎಸ್. ಬಳ್ಳೊಳ್ಳಿ, ಅಶೋಕ ನೀರಾಲೋಟಿ, ಎಚ್.ಜಿ. ದುರಗಣ್ಣವರ ಇದ್ದರು.
ಕಮಿಟಿಯ ಸಂಚಾಲಕ ಗಂಗಾಧರ ಗುಡಗೇರಿ, ನಾಗರಾಜ ಕಳಸಾಪುರ, ಸೋಮಶೇಖರ ಕೆರಿಮನಿ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಧಾನ ಕಾರ್ಯದರ್ಶಿ ಈಶ್ವರ ಮೆಡ್ಲೇರಿ ಸ್ವಾಗತಿಸಿದರು. ಜಯಪ್ರಕಾಶ ಹೊಟ್ಟಿ ಪ್ರಾರ್ಥಿಸಿದರು. ಸ್ನೇಹಾ ಮಾಲಿಗೌಡ್ರ ಕಾರ್ಯಕ್ರಮ ನಿರೂಪಿಸಿದರು. ರೇಣುಕಾ ಉಪ್ಪಿನ ವಂದಿಸಿದರು.