ಅಡುಗೆ ಮಹಾರಾಣಿಯರಿಂದ ವೈವಿಧ್ಯಮಯ ಖಾದ್ಯ ತಯಾರು । ಗಮನ ಸೆಳೆದ ಮಕ್ಕಳ ನೃತ್ಯ ಪ್ರದರ್ಶನ
ಕನ್ನಡಪ್ರಭ ವಾರ್ತೆ ಪಾಂಡವಪುರಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ನಡೆಯುತ್ತಿರುವ ಪಾಂಡವಪುರ ಸಂಭ್ರಮ ಎರಡನೇ ದಿನವೂ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.
ತಾಲೂಕಿನ ವಿವಿಧ ಶಾಲೆಯ ಮಕ್ಕಳಿಂದ ನಡೆದ ಸಾಂಸ್ಕೃತಿಕ ನೃತ್ಯ ಪ್ರದರ್ಶನ ಮೋಹಕವಾಗಿ ಮೂಡಿಬಂದಿತು. ಹೇಮಂತ್ ಮತ್ತು ಅಂಜಲಿ ಅವರ ನೇತೃತ್ವದಲ್ಲಿ ಬಾಲಕ ಮತ್ತು ಬಾಲಕಿಯರು ಪ್ರಸ್ತುತಪಡಿಸಿದ ಮಾರ್ಷಲ್ ಆರ್ಟ್ಸ್ ನೋಡುಗರನ್ನು ರೋಮಾಂಚನಗೊಳಿಸಿತು.ದೊಡ್ಡ ಬ್ಯಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಪ್ರಸ್ತುತಪಡಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಕಿರು ನಾಟಕ, ಎಚ್ಚೆಮ್ಮ ನಾಯಕ ( ಏಕಪಾತ್ರ ಅಭಿನಯ), ಭೂಮಿ ತಾಯಿ ಕಿರುನಾಟಕ ಪ್ರದರ್ಶನ ಉತ್ತಮವಾಗಿ ಮೂಡಿ ಬಂದರೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಕುರಿತ ಭಾಷಣದ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
ಮುರಳಿ ರಿದಮ್ ಸ್ಟೆಪ್ ಆಫ್ ಡ್ಯಾನ್ಸ್ ಶಾಲೆಯವರು ಪ್ರಸ್ತುತಪಡಿಸಿದ ಗಣಪತಿ ನೃತ್ಯ, ಆಂಜನೇಯ ನೃತ್ಯ, ಹೂವಿನ ಬಾಣದ ನೃತ್ಯ, ಸ್ಕೇರಾ ನೃತ್ಯ ಮತ್ತು ಶ್ರೀ ಕೃಷ್ಣ ನೀ ಬೇಗನೆ ಬಾರೋ ನೃತ್ಯ ಪ್ರದರ್ಶನ ಎಲ್ಲರ ಮನಸೂರಗೊಂಡಿತು.ಪಾಂಡವಪುರದ ಕಲಾವೃಂದ ನೃತ್ಯ ಶಾಲೆಯ ಪಿ. ಎಸ್. ಶಶಿಕಾಂತ್ ಮತ್ತು ವಿದ್ಯಾರ್ಥಿಗಳು ನಡೆಸಿಕೊಟ್ಟ ಪುಷ್ಪಾಂಜಲಿ, ನವ ದುರ್ಗೆಯರ ನೃತ್ಯ, ಗಣೇಶ ಕೃತಿ ನೃತ್ಯ ಮತ್ತು ವಿಜಯ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ್ದ ಅಪ್ಪು ಮಿಕ್ಸಿಂಗ್ ಸಾಂಗ್ ಡ್ಯಾನ್ಸ್ ಮತ್ತು ಫ್ಯಾಶನ್ ಶೋ ಆಕರ್ಷಣೀಯವಾಗಿತ್ತು.
ಪಾಂಡವಪುರದ ಪಿಇಎಸ್ ಬಾಲಕಿಯರ ಶಾಲೆ ವಿದ್ಯಾರ್ಥಿಗಳು ಪ್ರದರ್ಶಿಸಿದ ಕಂಸಾಳೆ ನೃತ್ಯ, ಭರತನಾಟ್ಯ, ಮಿಮಿಕ್ರಿ, ಭರತನಾಟ್ಯ, ಗಾಯನ ಕಾರ್ಯಕ್ರಮ ಎಲ್ಲರನ್ನೂ ರಂಜಿಸಿದವು.ಅಡುಗೆ ಮಹಾರಾಣಿ ಸ್ಪರ್ಧೆಯಲ್ಲಿ 7 ಜನ ಮಹಿಳೆಯರು ಪಾಲ್ಗೊಂಡು ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಿ ತಮ್ಮ ಪಾಕ ಪ್ರತಿಭೆಯನ್ನು ಪ್ರದರ್ಶಿಸಿದರು.
ಎರಡನೇ ದಿನ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.ಸಾವಯವ ಕೃಷಿ ಕ್ಷೇತ್ರದಿಂದ ಸುಂಕತೊಣ್ಣೂರು ದೇವೇಗೌಡ, ಲಕ್ಷ್ಮಿಸಾಗರ ಮಲ್ಲೇಶ್, ಕುರಟ್ಟಿ ಲೋಕೇಶ್, ಬ್ಯಾಟೆ ತಿಮ್ಮನ ಕೊಪ್ಪಲು ಎಂ.ಬಿ. ಸೋಮೇಗೌಡ, ಶ್ಯಾದನಹಳ್ಳಿ ಚೆಲುವರಾಜು, ಸಂಗಾಪುರ ರಾಮೇಗೌಡ. ಸಮಾಜ ಸೇವೆಯಿಂದ ಪಾಂಡವಪುರದ ಡಾ. ಮಣಿಕರ್ಣಿಕ, ಸಾಹಿತ್ಯ ಕ್ಷೇತ್ರದಿಂದ ಹಳೇಬೀಡು ಜಯಕುಮಾರಿ, ಹರವು ಎಚ್. ವಿ. ಶಿಲ್ಪಶ್ರೀ, ಶಿಕ್ಷಣ ಕ್ಷೇತ್ರದಿಂದ ಖ್ಯಾತನಹಳ್ಳಿ ಕೆ.ವಿ. ಬಸವರಾಜು, ನ್ಯಾಮನಹಳ್ಳಿಯ ಮುರಳಿ, ಸಹಕಾರ ಕ್ಷೇತ್ರದಿಂದ ಶಂಭೂನಹಳ್ಳಿ ಗುರುಸ್ವಾಮಿ, ಪಾಂಡವಪುರದ ಡಾ.ಮಾಯಿ ಗೌಡ, ಪಟ್ಟ ಸೋಮನಹಳ್ಳಿ ಕೆ ಸೋಮೆಗೌಡ, ಶ್ಯಾದನಹಳ್ಳಿ ಚೆಲುವರಾಜು, ಪಟ್ಟ ಸೋಮನಹಳ್ಳಿ ನಿಂಗೇಗೌಡ ಅವರನ್ನು ಸನ್ಮಾನಿಸಲಾಯಿತು.
ಆಹಾರ ಮೇಳದಲ್ಲಿ ಮೇಲುಕೋಟೆ ಪುಳಿಯೋಗರೆಗೆ ಜನರು ಫಿದಾ ಆಗಿದ್ದರು. ಮೇಲುಕೋಟೆಯ ನಂದಿನಿ ಅವರು ತಮ್ಮ ಸ್ಟಾಲ್ ನಲ್ಲಿ ಪುಳಿಯೋಗರೆ ಸಕ್ಕರೆ ಪೊಂಗಲ್, ಬೆಲ್ಲದ ಪೊಂಗಲ್ ತಿನಿಸುಗಳನ್ನು ನೀಡಿ ಜನರನ್ನು ಸೆಳೆಯುತ್ತಿದ್ದದ್ದು ಕಂಡುಬಂದಿತು.----------23ಕೆಎಂಎನ್ ಡಿ38 ರಿಂದ 44
ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ನಡೆಯುತ್ತಿರುವ ಪಾಂಡವಪುರ ಸಂಭ್ರಮದ ಆಹಾರ ಮೇಳದಲ್ಲಿ ಮೇಲುಕೋಟೆ ಪುಳಿಯೋಗರೆ ಮಳಿಗೆ.---
ಅಡುಗೆ ಮಹಾರಾಣಿ ಸ್ಪರ್ಧೆಯಲ್ಲಿ ಮಹಿಳೆಯರು ಪಾಲ್ಗೊಂಡು ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಿ ಪ್ರತಿಭೆ ಪ್ರದರ್ಶಿಸಿದರು.--ಖಾದ್ಯಗಳನ್ನು ತಯಾರಿಸಿ ಮಾಹಿತಿ ನೀಡುತ್ತಿರುವುದು., ಮಹಿಳೆಯರಿಗೆ ಬಹುಮಾನ ವಿತರಿಸುತ್ತಿರುವುದು.--
ಆಹಾರ ಮೇಳದಲ್ಲಿ ಗಮನ ಸೆಳೆದ ವಿವಿಧ ಖಾದ್ಯಗಳ ಪ್ರದರ್ಶನ.------