ಕಾನೂನಿನ ಅರಿವಿನಿಂದ ಸುಸಂಸ್ಕೃತ ಸಮಾಜ: ಸದಾನಂದ ನಾಗಪ್ಪ ನಾಯಕ್

KannadaprabhaNewsNetwork |  
Published : Sep 24, 2026, 02:45 AM IST
ಅರಿವಿ | Kannada Prabha

ಸಾರಾಂಶ

ಸಂಪೂರ್ಣ ಸಾಕ್ಷರತೆ, ಉತ್ತಮ ಸಂಸ್ಕಾರ ಹಾಗೂ ಕಾನೂನಿನ ಅರಿವಿನಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ. ಗ್ರಾಮಗಳನ್ನು ವಿವಾದ ಮುಕ್ತವಾಗಿಸುವ ನಿಟ್ಟಿನಲ್ಲಿ ಕಾನೂನು ಸಾಕ್ಷರತೆ, ಉಚಿತ ಕಾನೂನು ನೆರವು ಹಾಗೂ ಲೋಕ ಅದಾಲತ್ ಕುರಿತು ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಹಾಗೂ ಪುತ್ತೂರು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಸದಾನಂದ ನಾಗಪ್ಪ ನಾಯಕ್ ಹೇಳಿದರು.

ಉಳ್ಳಾಲ : ಸಂಪೂರ್ಣ ಸಾಕ್ಷರತೆ, ಉತ್ತಮ ಸಂಸ್ಕಾರ ಹಾಗೂ ಕಾನೂನಿನ ಅರಿವಿನಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ. ಗ್ರಾಮಗಳನ್ನು ವಿವಾದ ಮುಕ್ತವಾಗಿಸುವ ನಿಟ್ಟಿನಲ್ಲಿ ಕಾನೂನು ಸಾಕ್ಷರತೆ, ಉಚಿತ ಕಾನೂನು ನೆರವು ಹಾಗೂ ಲೋಕ ಅದಾಲತ್ ಕುರಿತು ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಹಾಗೂ ಪುತ್ತೂರು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಸದಾನಂದ ನಾಗಪ್ಪ ನಾಯಕ್ ಹೇಳಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪುತ್ತೂರು ತಾಲೂಕು ಕಾನೂನು ಸೇವೆಗಳ ಸಮಿತಿ, ಪುತ್ತೂರು ವಕೀಲರ ಸಂಘ, ಬೀರಿಗ ಅಂಗನವಾಡಿ, ಬನ್ನೂರು ಗ್ರಾಮ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜನ ಶಿಕ್ಷಣ ಟ್ರಸ್ಟ್‌ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಸಾಕ್ಷರತಾ ದಿನಾಚರಣೆ, ಪೋಷಣಾ ಅಭಿಯಾನ ಹಾಗೂ ಖಾಯಂ ಅದಾಲತ್ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನ್ಯಾಯಾಧೀಶೆ ರಮ್ಯಾ ಆರ್. ಅವರು ಮಕ್ಕಳ ಶಿಕ್ಷಣ, ಮಹಿಳಾ ಜಾಗೃತಿ ಹಾಗೂ ಪೌಷ್ಟಿಕ ಆಹಾರ ಪದ್ಧತಿಯ ಕುರಿತು ಮಾಹಿತಿ ನೀಡಿದರು. ನರೇಗಾ ಮಾಜಿ ಒಂಬುಡ್ಸ್‌ಮನ್ ಶೀನ ಶೆಟ್ಟಿ ಅವರು ‘ಸಂವಿಧಾನ ಓದು’ ಪುಸ್ತಕ ವಿತರಿಸಿ, ಸಂವಿಧಾನ ಮತ್ತು ಕಾನೂನು ಸಾಕ್ಷರತಾ ಅಭಿಯಾನದ ಕುರಿತು ವಿವರಿಸಿದರು.

ಪುತ್ತೂರು ವಕೀಲರ ಸಂಘದ ಕೋಶಾಧಿಕಾರಿ ಹಾಗೂ ನೋಟರಿ ವಕೀಲೆ ಭಾರತಿ ಎ. ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಕ್ಕಳ ಮತ್ತು ಮಹಿಳೆಯರ ಹಕ್ಕುಗಳು, ಕಾನೂನು ರಕ್ಷಣೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಕಾನೂನು ಮಾಹಿತಿಯನ್ನು ನೀಡಿದರು. ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಯಶೋಧ ಅವರು ಪೋಷಣಾ ಅಭಿಯಾನ ಹಾಗೂ ಪೌಷ್ಟಿಕ ಆಹಾರ ಸಪ್ತಾಹದ ಕುರಿತು ಮಾಹಿತಿ ನೀಡಿದರು.ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಉದಯಚಂದ್ರ, ಸಮುದಾಯ ಆರೋಗ್ಯ ಅಧಿಕಾರಿ ಶೃತಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕಿ ಹಾಗೂ ಬೀರಿಗ ಅಂಗನವಾಡಿ ಕಾರ್ಯಕರ್ತೆ ಅರುಣಾ ಕಾರ್ಯಕ್ರಮ ನಿರೂಪಿಸಿದರು. ಸ್ವಾತಿ ಗಣೇಶ್ ಸ್ವಾಗತಿಸಿದರು.

ಅಂಗನವಾಡಿ ಪುಟಾಣಿಗಳ ಆಶಯಗೀತೆ, ನಾಡಗೀತೆ ಹಾಗೂ ಜಾಗೃತಿ ಘೋಷಣೆಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸ್ತ್ರೀಶಕ್ತಿ ಸಂಜೀವಿನಿ ಒಕ್ಕೂಟದ ಸದಸ್ಯರು ಮನೆಗಳಲ್ಲಿ ತಯಾರಿಸಿ ತಂದಿದ್ದ ವಿವಿಧ ಪೌಷ್ಟಿಕ ಆಹಾರಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಬಳಿಕ ಸಾಮೂಹಿಕ ಸಹಭೋಜನ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶ್ವೇಶತೀರ್ಥರ ಸೇವಾ ಪ್ರಕಲ್ಪ ಪುನಶ್ಚೇತನ: ಶ್ರೀವಿಶ್ವಪ್ರಸನ್ನತೀರ್ಥರು
ಸ್ವಾವಲಂಬಿ ಬದುಕಿಗೆ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿ: ಅಶೋಕ್ ರೈ