ಅಯೋಧ್ಯೆ ರಾಮನ ದರ್ಶನಪಡೆದ 15 ‘ಕೈ’ ಶಾಸಕರು

KannadaprabhaNewsNetwork |  
Published : Apr 16, 2026, 02:00 AM IST
ಅಯೋಧ್ಯೆ | Kannada Prabha

ಸಾರಾಂಶ

ದೆಹಲಿ ಪ್ರವಾಸದಲ್ಲಿರುವ ಕರ್ನಾಟಕ ಕಾಂಗ್ರೆಸ್‌ನ ಹಿರಿಯ ಶಾಸಕರು ಅಯೋಧ್ಯೆಯ ರಾಮಮಂದಿರಕ್ಕೆ ತೆರಳಿ, ರಾಮಲಲ್ಲಾನ ದರ್ಶನ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ನವದೆಹಲಿ

ದೆಹಲಿ ಪ್ರವಾಸದಲ್ಲಿರುವ ಕರ್ನಾಟಕ ಕಾಂಗ್ರೆಸ್‌ನ ಹಿರಿಯ ಶಾಸಕರು ಅಯೋಧ್ಯೆಯ ರಾಮಮಂದಿರಕ್ಕೆ ತೆರಳಿ, ರಾಮಲಲ್ಲಾನ ದರ್ಶನ ಪಡೆದಿದ್ದಾರೆ.

ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಭೇಟಿ ಸಾಧ್ಯವಾಗದ ಕಾರಣ 15 ಮಂದಿ ಶಾಸಕರು ಬುಧವಾರ ಬೆಳಗ್ಗೆ 8 ಗಂಟೆಗೆ ವಿಮಾನದ ಮೂಲಕ ಅಯೋಧ್ಯೆಗೆ ತೆರಳಿ, ದೇವರ ದರ್ಶನ ಪಡೆದರು. ದರ್ಶನ ಮುಗಿಸಿ ಮತ್ತೆ ದೆಹಲಿಗೆ ವಾಪಸ್‌ ಆದರು.

ಬಳಿಕ ದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಟಿ.ಬಿ.ಜಯಚಂದ್ರ, ನಾವು 15 ಮಂದಿ ಶಾಸಕರು ಅಯೋಧ್ಯೆಯ ಶ್ರೀರಾಮನ ದರ್ಶನ ಪಡೆದಿದ್ದೇವೆ. ಅಯೋಧ್ಯೆಯ ಶ್ರೀರಾಮನಿಗೂ, ಕರ್ನಾಟಕದ ಹನುಮಾನನಿಗೂ ಹತ್ತಿರದ ಸಂಬಂಧವಿದೆ. ಅಯೋಧ್ಯೆಯ ರಾಮನ ವಿಗ್ರಹ ಕೆತ್ತಿದ್ದು, ನಮ್ಮ ಕನ್ನಡಿಗ ಅರುಣ್‌ ಯೋಗಿರಾಜ್ ಎಂದರು.ಹೈ ಭೇಟಿ ವಿಶ್ವಾಸ:

ಗುರುವಾರ ಮತ್ತಷ್ಟು ಶಾಸಕರು ದೆಹಲಿಗೆ ಬರುವವರಿದ್ದಾರೆ. ರಾಹುಲ್‌ ಗಾಂಧಿ, ಕೆ.ಸಿ.ವೇಣುಗೋಪಾಲ ಸೇರಿ ಹೈಕಮಾಂಡ್‌ ನಾಯಕರ ಭೇಟಿಗೆ ಕಾಯುತ್ತಿದ್ದೇವೆ. ಭೇಟಿಗೆ ಅವಕಾಶ ಸಿಗುವ ವಿಶ್ವಾಸವಿದೆ.

-ಟಿ.ಬಿ.ಜಯಚಂದ್ರ, ಶಾಸಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಂಬಾಚಾರಕ್ಕೆ ಮತ್ತೊಂದು ಹೆಸರೇ ವಚನಾನಂದ ಸ್ವಾಮೀಜಿ: ಮಹೇಶ ಹಾವೇರಿ
ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದರೆ ಕಠಿಣ ಕ್ರಮ