ಡಿಜಿಟಲ್ ಲೈಬ್ರರಿ ಗುಣಮಟ್ಟದಮಾಹಿತಿ ನೀಡುವ ಜ್ಞಾನಕೇಂದ್ರ

KannadaprabhaNewsNetwork |  
Published : Aug 21, 2026, 01:30 AM IST
ಚಿತ್ರ 20ಬಿಡಿಆರ್54 | Kannada Prabha

ಸಾರಾಂಶ

ಇಂದಿನ ಡಿಜಿಟಲ್ ಯುಗದಲ್ಲಿ ಗ್ರಂಥಾಲಯಗಳ ಪಾತ್ರವು ಕೇವಲ ಪುಸ್ತಕಗಳ ಸಂಗ್ರಹ ಮತ್ತು ವಿತರಣೆಗೆ ಸಿಮೀತವಾಗದೆ, ಈ ಪುಸ್ತಕಗಳು ಈ ಜರನಲ್ಗಳು ಆನಲೈನ್ ಡಾಟಾ ಬೇಸ್‌ಗಳು, ಡಿಜಿಟಲ್ ಗ್ರಂಥಾಲಯಗಳು ಗುಣಮಟ್ಟದ ಮಾಹಿತಿ ನೀಡುವ ಜ್ಞಾನಕೇಂದ್ರಗಳಾಗಿವೆ ಎಂದು ನೌಬಾದ್‌ ಸರ್ಕಾರಿ ಪದವಿ ಮಹಾವಿದ್ಯಾಲಯದ ಗ್ರಂಥಪಾಲಕರಾದ ಡಾ.ಪ್ರಕಾಶ ವಾಗ್ಮಾರೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್

ನಗರದ ಕರ್ನಾಟಕ ಪದವಿ ಮಹಾವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಿಂದ ಡಾ.ಎಸ್.ಆರ್.ರಂಗನಾಥನ್ ಜಯಂತಿ ನಿಮಿತ್ತ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಲ್ಲಿ ಪಾಲ್ಗೊಂಡು ‘ಡಿಜಿಟಲ್ ಸಂಪನ್ಮೂಲಗಳ ಮೂಲಕ ಶೈಕ್ಷಣಿಕತೆಯನ್ನು ಹೆಚ್ಚಿಸುವುದು ಗ್ರಂಥಾಲಯಗಳ ಪಾತ್ರ’ ಎಂಬ ವಿಷಯದ ಬಗ್ಗೆ ಮಾತನಾಡಿದರು.

ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಸೋಮನಾಥ ಬಿರಾದರ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಬಳಕೆಯ ಮಹತ್ವ ತಿಳಿಸಿ ಜಾಗೃತಿ ಮೂಡಿಸಿದರು.

ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕ ಡಾ.ಸೋಮೇಶ್ವರಿ ಮುದ್ದಾ, ಉಪನ್ಯಾಸಕರಾದ ಶ್ರೀಕಾಂತ ದೊಡ್ಡಮನಿ, ಡಾ.ಶಶಿಧರ ಪಾಟೀಲ, ಅಶೋಕ ಹುಡೆದ, ಡಾ.ಜೀವನಕುಮಾರ, ಶೃತಿ ಮಲ್ಲಯ್ಯಾ ಸ್ವಾಮಿ, ಡಾ.ಸೋಮನಾಥ ಮುದ್ದಾ, ಡಾ.ದಿಲೀಪ ಮಾಲೆ, ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಡಕೆ ತೋಟದ ಹಳ್ಳಕ್ಕೆ ನುಗ್ಗಿದ ಖಾಸಗಿ ಬಸ್
ಹತ್ತಿ ಬೆಳೆಗೆ ಮುಟುರು ರೋಗ ಗಿಡಹೇನು ಬಾಧೆ: ರೈತರ ಆತಂಕ