ಮಿಲಿಟರಿಯಿಂದ ಶಿಸ್ತು ಬದ್ದ ಜೀವನ ಸಾಧ್ಯ

KannadaprabhaNewsNetwork |  
Published : Sep 11, 2026, 01:45 AM IST
10ಎಚ್ಎಸ್ಎನ್15  : | Kannada Prabha

ಸಾರಾಂಶ

ಇತಿಹಾಸ ತಜ್ಞರಾದ ವಿರೇಂದ್ರ ರವರು ಜನಿವಾರ ಊರಿನ ಹಿನ್ನಲೆಯ ಇತಿಹಾಸವನ್ನು ಪೂರ್ಣವಾಗಿ ವಿವರಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಭಾಕರ್ ಅವರು ಶ್ರವಣಬೆಳಗೊಳದಲ್ಲಿ ಕೆಲಸ ಮಾಡಿದ್ದರೂ ನಾನು ಇಂತಹ ಪ್ರತಿಭಾನ್ವಿತರ ಪರಿಚಯ ನನಗೆ ಇರಲಿಲ್ಲ ಈ ಕಾರ್ಯಕ್ರಮದಿಂದ ನನಗೆ ಹಲವಾರು ಪ್ರತಿಭಾನ್ವಿತರ ಪರಿಚಯವಾಯಿತು. ಕಾರ್ಯಕ್ರಮ ತುಂಬಾ ಉತ್ತಮವಾಗಿ ನಡೆದುಕೊಂಡು ಬರುತ್ತಿದೆ. ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ ಆಗಸ್ಟಿನ್ ಅವರ ನಿತ್ಯದ ಬದುಕು ಶಿಸ್ತುಪಾಲನೆ ಸಮಯಪಾಲನೆ ಇವುಗಳನ್ನು ನಾವು ಹತ್ತಿರದಿಂದ ಕಂಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಸಹೃದಯ ಸಾಹಿತ್ಯ ಬಳಗದ ವತಿಯಿಂದ ತಾಲೂಕಿನ ಶ್ರವಣಬೆಳಗೊಳದ ಸಾಹಿತ್ಯಸೌಧದಲ್ಲಿ ೫೨ನೇ ಮಾಸದ ನೆನಪಲ್ಲಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸೈನಿಕ ಅಗಸ್ಟಿನ್ ರವರು ಮಿಲಿಟರಿಗೆ ಸೇರಿದ ಯಶೋಗಾಥೆಯನ್ನು ವಿವರಿಸಿದರು. ನನ್ನ ಜೀವನದಲ್ಲಿ ಉತ್ತಮ ಅವಕಾಶ ಹೇಗೆ ಸಿಕ್ಕಿತು ಎಂಬುದನ್ನು ಹೇಳುತ್ತಾ ಮಿಲಿಟರಿಯಲ್ಲಿನ ಊಟ ತಿಂಡಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ತರಬೇತಿಯ ವಿಚಾರವನ್ನು ತಿಳಿಸಿದರು. ಮಿಲಿಟರಿಗೆ ಸೇರುವುದಾದರೆ ವಿಶೇಷ ಶಾಲೆಗಳಿಗೆ ಸೇರಬೇಕು. ವಿದ್ಯಾಭ್ಯಾಸದ ಮೇಲೆ ನಮ್ಮ ಅರ್ಹತೆಗೆ ತಕ್ಕಂತೆ ವೃತ್ತಿ ನೀಡುತ್ತಾರೆ. ನಾನು ರೈತನ ಮಗನಾದರೂ ಕೂಡ ನನಗೆ ಆಸಕ್ತಿ ಇದ್ದರಿಂದ ಮಿಲಿಟರಿಗೆ ಹೋದೆ. ನನಗೆ ಅಲ್ಲಿ ಸೇವೆ ಸಲ್ಲಿಸಿದ ಬಗ್ಗೆ ಹೆಮ್ಮೆ ಇದೆ ಹಾಗೂ ಯಾವ ಪ್ರದೇಶದಲ್ಲಿ ನಮ್ಮನ್ನು ಕೆಲಸಕ್ಕೆ ಹಾಕುತ್ತಾರೋ ಅಲ್ಲಿಯ ಮಣ್ಣಿನ ಬಣ್ಣದ ಬಟ್ಟೆಗಳನ್ನು ತೊಡಬೇಕಾಗುತ್ತದೆ. ಶತ್ರುದೇಶಗಳ ಇತರರಿಗೆ ಕಾಣದಂತೆ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕು ಎಂದರು. ಹಾಗೂ ಮಾಂಸವನ್ನು ತಿನಲೇಬೇಕೆಂಬ ಖಡ್ಡಾಯವಿಲ್ಲ ತಿನ್ನದಿರುವವರಿಗೆ ಬೇರೆ ಬೇರೆ ಆಹಾರವಿರುತ್ತದೆ ಎಂದರು.ಇದೇ ಸಂದರ್ಭದಲ್ಲಿ ಬಳಗದ ಪ್ರಶಾಂತ್ ಕುಮಾರ್ ಅವರ ಚೊಚ್ಚಲ ಕವನ ಸಂಕಲನ ಬಿಡುಗಡೆಯಾಯಿತು. ಮುನ್ನುಡಿ ಬರೆದ ಪ್ರೇಮಪ್ರಶಾಂತ್ ರವರು ಮಾತನಾಡಿ ಪುಸ್ತಕದ ಹಿನ್ನಲೆ ಹೊರಬಂದ ಬಗೆಯನ್ನು ತಿಳಿಸಿದರು. ಹೇಮಲತಾ, ಗಿರೀಶ್ ಚುಟುಕು ವಾಚಿಸಿದರೆ ಕುಮಾರಣ್ಣ ಭಕ್ತಿಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು. ಜಯಲಕ್ಷ್ಮಿ ಭಕ್ತಿಗೀತೆ ಹಾಡಿದರೆ ಚಾರ್ವಿ, ಯಾಶ್ಮಿತ ಹಾಡು ಹೇಳಿದರು. ಇತಿಹಾಸ ತಜ್ಞರಾದ ವಿರೇಂದ್ರ ರವರು ಜನಿವಾರ ಊರಿನ ಹಿನ್ನಲೆಯ ಇತಿಹಾಸವನ್ನು ಪೂರ್ಣವಾಗಿ ವಿವರಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಭಾಕರ್ ಅವರು ಶ್ರವಣಬೆಳಗೊಳದಲ್ಲಿ ಕೆಲಸ ಮಾಡಿದ್ದರೂ ನಾನು ಇಂತಹ ಪ್ರತಿಭಾನ್ವಿತರ ಪರಿಚಯ ನನಗೆ ಇರಲಿಲ್ಲ ಈ ಕಾರ್ಯಕ್ರಮದಿಂದ ನನಗೆ ಹಲವಾರು ಪ್ರತಿಭಾನ್ವಿತರ ಪರಿಚಯವಾಯಿತು. ಕಾರ್ಯಕ್ರಮ ತುಂಬಾ ಉತ್ತಮವಾಗಿ ನಡೆದುಕೊಂಡು ಬರುತ್ತಿದೆ. ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ ಆಗಸ್ಟಿನ್ ಅವರ ನಿತ್ಯದ ಬದುಕು ಶಿಸ್ತುಪಾಲನೆ ಸಮಯಪಾಲನೆ ಇವುಗಳನ್ನು ನಾವು ಹತ್ತಿರದಿಂದ ಕಂಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.ಸಾಧಕರಾದ ನಿರ್ಮಲಾ ಮತ್ತು ಡಾ. ವೃಷಬೇಂದ್ರ ಕುಮಾರ್ ರವರಿಗೆ ಬಳಗದಿಂದ ಸನ್ಮಾನ ಮಾಡಲಾಯಿತು. ಅವರ ಪರಿಚಯವನ್ನು ಸಂಜಯ್ ಮತ್ತು ವೃಷಬೇಂದ್ರ ಕುಮಾರ್ ಅವರು ಮಾಡಿಕೊಟ್ಟರು. ಸನ್ಮಾನಿತರು ಮಾತನಾಡುತ್ತಾ ಹ?ವನ್ನು ವ್ಯಕ್ತಪಡಿಸಿದರು. ಹಾಗೂ ಹಾಸ್ಯ ಕಥೆಯನ್ನು ಹೇಳುವುದರ ಮೂಲಕ ವೃ?ಬೇಂದ್ರ ರವರು ಎಲ್ಲರನ್ನು ರಂಜಿಸಿದರು.ಪ್ರಜ್ಞಾ ಪ್ರಣತಿ ಮ್ಯಾಜಿಕ್ ಮೊಬೈಲ್ ನಂಬರ್ ಕಂಡುಹಿಡಿದು ಅದರ ರಹಸ್ಯವನ್ನು ತಿಳಿಸಿದರು. ಕನಕ ಪ್ರಶಸ್ತಿಗೆ ಭಾಜನರಾದ ಶಂಕರಾಚಾರ್ಯರಿಗೆ ವೇದಿಕೆಯಿಂದ ಸನ್ಮಾನ ಮಾಡಲಾಯಿತು. ಇದೇ ಸಮಯದಲ್ಲಿ ಕುಮಾರ್, ಅಪೋಲಿಯ, ಸಂಜಯ್ ಶೆಟ್ಟಿ, ನಿವೃತ್ತ ಶಿಕ್ಷರಾದ ರಾಜಬಾನ್ ಮತ್ತಿತರರು ಉಪಸ್ಥಿತರಿದ್ದರು.ಪ್ರಣಮ್ಯ ಜೈನ್ ನಿರೂಪಣೆ, ಜಯಂತಿ ಸ್ವಾಗತ, ಶೋಭಾ ಪ್ರಾರ್ಥನೆ, ಆಶಾ ಪ್ರಾಸ್ತಾವಿಕ ನುಡಿ, ಪ್ರಶಾಂತ್ ಕುಮಾರ್ ವಂದನಾರ್ಪಣೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲುಷಿತ ನೀರು ಸೇವನೆ: ಮೊರಾರ್ಜಿ ವಸತಿ ಶಾಲೆಯ 43 ಮಕ್ಕಳು ಅಸ್ವಸ್ಥ
ಬೆಳೆ ನಷ್ಟದ ಸಂಕಷ್ಟಕ್ಕೆ ರೈತ ಬಲಿ