ಬೈನೇ ಮರ ಬಿದ್ದು ಕೋಳಿಗೂಡು ಹಾನಿ

KannadaprabhaNewsNetwork |  
Published : May 06, 2026, 02:45 AM IST
ಭಾವಲಿ ಗ್ರಾಮದಲ್ಲಿ ಬಾರಿ ಮಳೆ ಗಾಳಿಗೆಬೈನೇ  ಮರಬಿದ್ದು ದೇವನ ಈರಪ್ಪಎಂಬವರಿಗೆ ಸೇರಿದ ಕೋಳಿಗೂಡುಸಂಪೂರ್ಣ ಧ್ವಂಸವಾಗಿ ನಷ್ಟ ಸಂಭವಿಸಿದೆ. | Kannada Prabha

ಸಾರಾಂಶ

ಇಲ್ಲಿಗೆ ಸಮೀಪದ ಭಾವಲಿ ಗ್ರಾಮದಲ್ಲಿ ಭಾರಿ ಮಳೆ ಗಾಳಿಗೆ ಬೈನೇ ಮರ ಬಿದ್ದು ಕೋಳಿಗೂಡು ಸಂಪೂರ್ಣ ಧ್ವಂಸವಾಗಿ ನಷ್ಟ ಸಂಭವಿಸಿದೆ.

ನಾಪೋಕ್ಲು: ಇಲ್ಲಿಗೆ ಸಮೀಪದ ಭಾವಲಿ ಗ್ರಾಮದಲ್ಲಿ ಭಾರಿ ಮಳೆ ಗಾಳಿಗೆ ಬೈನೇ ಮರ ಬಿದ್ದು ಕೋಳಿಗೂಡು ಸಂಪೂರ್ಣ ಧ್ವಂಸವಾಗಿ ನಷ್ಟ ಸಂಭವಿಸಿದೆ. ಪಾರಾಣೆ ಗ್ರಾಮ ಪಂಚಾಯಿತಿಯ ಬಾವಲಿ ಗ್ರಾಮದ ನಿವಾಸಿ ದೇವನ ಈರಪ್ಪಎಂಬವರಿಗೆ ಸೇರಿದ ಕೋಳಿ ಗೂಡಿನ ಕಟ್ಟಡದ ಮೇಲೆ ಮಂಗಳವಾರ ಸಂಜೆ ವಿಪರೀತ ಗಾಳಿ ಮಳೆಗೆ ಬೈನೇ ಮತ್ತು ಅಡಕೆ ಮರ ಬಿದ್ದಿದೆ. ಇದರಿಂದಾಗಿ ಕೋಳಿ ಗೂಡಿನ ಚಾವಣಿಗೆ ಅಳವಡಿಸಿದ್ದ ಸಿಮೆಂಟ್ ಶೀಟ್ ಗಳು ಸೇರಿದಂತೆ ಕಟ್ಟಡ ಸಂಪೂರ್ಣ ಹಾನಿಯಾಗಿ ನಷ್ಟ ಸಂಭವಿಸಿದ್ದು ಕೋಳಿಗಳ ಜೀವ ಅಪಾಯದಿಂದ ಪಾರಾಗಿವೆ.

-------------------------------------------

ದುಬಾರೆ ತೂಗುಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ ಇಂದು

ಮಡಿಕೇರಿ: ಕರ್ನಾಟಕ ಅರಣ್ಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ಸಹಯೋಗದಲ್ಲಿ ಬುಧವಾರ ಮಧ್ಯಾಹ್ನ 12 ಗಂಟೆಗೆ ದುಬಾರೆಯಲ್ಲಿ ನೂತನ ತೂಗುಸೇತುವೆ ನಿರ್ಮಾಣದ ಶಂಕು ಸ್ಥಾಪನೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಂಟ್ವಾಳದಲ್ಲಿ ಬಿಜೆಪಿ ಸಂಭ್ರಮಾಚರಣೆ
ಪುತ್ತೂರು : ಅಕ್ಷಯ ಪದವಿ ಕಾಲೇಜ್‌ ತಸ್ತ್ರೀಯ ಫುಡ್ ಫೆಸ್ಟ್