ಶಿವಮೊಗ್ಗ ಕ್ಯಾಟ್ ಶೋನಲ್ಲಿ ಮನಸೆಳೆದ ಮಾರ್ಜಲ

KannadaprabhaNewsNetwork |  
Published : Jan 29, 2024, 01:30 AM IST
ಪೋಟೋ: 28ಎಸ್‌ಎಂಜಿಕೆಪಿ08ಶಿವಮೊಗ್ಗ ನಗರದಲ್ಲಿ ಭಾನುವಾರ ಶಿವಮೊಗ್ಗದ ಸೆಕ್ರೆಡ್ ಹಾರ್ಟ್​ನಲ್ಲಿರುವ ಸ್ನೇಹ ಭವನದಲ್ಲಿ ಗೇಟ್ ವೇ ಕ್ಯಾಟ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಕ್ಯಾಟ್ ಶೋದಲ್ಲಿ ಕಂಡು ಬಂದ ದೃಶ್ಯ. | Kannada Prabha

ಸಾರಾಂಶ

ಶಿವಮೊಗ್ಗ ಕ್ಯಾಟ್‌ ಶೋ ನೋಡಲು ಒಳಗೆ ಹೋಗುತ್ತಿದ್ದಂತೆ ಜನರಿಗೆ ವಿವಿಧ ಜಾತಿ ಮತ್ತು ಬಣ್ಣದ ಬೆಕ್ಕುಗಳು ಕಣ್ಣಿಗೆ ಬಿದ್ದವು. ದೇಶ ಮತ್ತು ವಿದೇಶದ ವಿವಿಧ ತಳಿಯ ಬೆಕ್ಕುಗಳನ್ನು ಈ ಶೋದಲ್ಲಿ ಭಾಗವಹಿಸಿದ್ದವು. ದೇಶ ಮತ್ತು ವಿದೇಶದ ವಿವಿಧ ತಳಿಯ ಬೆಕ್ಕುಗಳು ಈ ಶೋದಲ್ಲಿ ಭಾಗವಹಿಸಿದ್ದವು.

- ಕಣ್ಮನ ಸೆಳೆದ ಬೆಕ್ಕುಗಳ ವಯ್ಯಾರ ಪ್ರದರ್ಶನದಲ್ಲಿ ಕೇರಳ, ಬೆಂಗಾಲಿ ಬೆಕ್ಕುಗಳ ಹವಾ । ₹3 ಲಕ್ಷ ಬೆಲೆಯ ಬೆಕ್ಕುಗಳತ್ತ ಎಲ್ಲರ ಚಿತ್ತ

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಶಿವಮೊಗ್ಗ ನಗರದಲ್ಲಿ ಭಾನುವಾರ ಶಿವಮೊಗ್ಗದ ಸೆಕ್ರೆಡ್ ಹಾರ್ಟ್​ನಲ್ಲಿರುವ ಸ್ನೇಹ ಭವನದಲ್ಲಿ ಗೇಟ್ ವೇ ಕ್ಯಾಟ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಕ್ಯಾಟ್ ಶೋ ನೋಡುಗರ ಗಮನ ಸೆಳೆಯಿತು. ಶೋದಲ್ಲಿ ಬೆಕ್ಕುಗಳ ವಯ್ಯಾರ ನೋಡಿದ ಮಲೆನಾಡಿಗರು ಫುಲ್ ಫಿದಾ ಆಗಿದ್ದರು. ಈ ಶೋ ನೋಡಲು ಒಳಗೆ ಹೋಗುತ್ತಿದ್ದಂತೆ ಜನರಿಗೆ ವಿವಿಧ ಜಾತಿ ಮತ್ತು ಬಣ್ಣದ ಬೆಕ್ಕುಗಳು ಕಣ್ಣಿಗೆ ಬಿದ್ದವು. ದೇಶ ಮತ್ತು ವಿದೇಶದ ವಿವಿಧ ತಳಿಯ ಬೆಕ್ಕುಗಳನ್ನು ಈ ಶೋದಲ್ಲಿ ಭಾಗವಹಿಸಿದ್ದವು. ದೇಶ ಮತ್ತು ವಿದೇಶದ ವಿವಿಧ ತಳಿಯ ಬೆಕ್ಕಗಳನ್ನು ಈ ಶೋದಲ್ಲಿ ಭಾಗವಹಿಸಿದ್ದವು.

ಶಿವಮೊಗ್ಗ, ಮೈಸೂರು, ಬೆಂಗಳೂರು ಚಿಕ್ಕಮಗಳೂರು, ಉತ್ತರಕನ್ನಡ, ದಾವಣಗೆರೆ ಜಿಲ್ಲೆ ಸೇರಿದಂತೆ ಕೇರಳದಿಂದ ಈ ಕ್ಯಾಟ್ ಗಳು ಶೋಗೆ ಬಂದಿದ್ದವು. ಇವುಗಳನ್ನು ಪ್ರೀತಿಯಿಂದ ಸಾಕಿ ಸಲುಹಿದ ಕ್ಯಾಟ್ ಮಾಲೀಕರು ಈ ಶೋದಲ್ಲಿ ತಮ್ಮ ತಮ್ಮ ಬೆಕ್ಕುಗಳ ಕರಾಮತ್ತು ತೋರಿಸಿದರು.

ಕ್ಯಾಟ್ ಶೋನಲ್ಲಿ ಸುಲ್ತಾನ್, ಶಫೇರ್, ಲೈಲಾ ಎಂಬ ಬೆಂಗಾಲಿ ಬೆಕ್ಕುಗಳು ಹವಾ ಇತ್ತು. ಕ್ಯಾಟ್ ಶೋನಲ್ಲಿ 120ಕ್ಕೂ ಹೆಚ್ಚು ಬೆಕ್ಕುಗಳು ನೋಂದಣಿಯಾಗಿದ್ದವು. ಇನ್ನು ಶೋ ದಲ್ಲಿ 7 ರೀತಿ ಬ್ರೀಡ್​ಗಳ ಪ್ರದರ್ಶನ ನಡೆಯಿತು. ಪರ್ಷಿಯನ್, ಬೆಂಗಾಲ್, ಮೇನ್ ಕೂನ್, ಬ್ರಿಟೀಷ್‌ ಶಾರ್ಟ್ ಹೇರ್‌, ಕ್ಲಾಸಿಕ್ ಲಾಂಗ್ ಹೇರ್, ಎಕ್ಸೈಟಿಕ್ ಶಾರ್ಟ್ ಹೇರ್ ಮತ್ತು ಇಂಡಿಮೋ‌ ಎಂಬ ಲೋಕಲ್ ಕ್ಯಾಟ್ ತಳಿಗಳು ಶೋದಲ್ಲಿ ಕಂಡು ಬಂದವು.

ಅದರಲ್ಲೂ ಪರ್ಶಿಯನ್​ನಿಂದ ಇಂಡಿಮೋವರೆಗೆ ಬೆಕ್ಕುಗಳು ಮೂರು ಲಕ್ಷದ ಬೆಲೆಬಾಳುವ ಬೆಕ್ಕುಗಳು ಪ್ರೇಕ್ಷಕರ ಗಮನ ಸೆಳೆದಿದ್ದವು. ಶೋದಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಮತ್ತು ದೇಶ ಮತ್ತು ವಿದೇಶಿ ತಳಿಯಿಂದ ಕೂಡಿತ್ತು. ಉದ್ದ ಉದ್ದ ಕೂದಲು. ಬೆಕ್ಕಿನ ಕಣ್ಣುಗಳೇ ಪ್ರಮುಖ ಆಕರ್ಷಣೆಯಾಗಿತ್ತು. ಇನ್ನು ಪ್ರವೇಶದ್ವಾರದಲ್ಲಿ ಕ್ಯಾಟ್ ವ್ಯಾಕ್ಸಿನೇಷನ್ ಸಹ ರಚಿಸಲಾಗಿತ್ತು. ಕ್ಲಬ್ ನ ಪ್ರೆಸಿಡೆಂಟ್ ಮಹಮದ್ ಅದ್ನಾನ್ ಎಂ. ಉತ್ತಮವಾಗಿ ಪ್ರದರ್ಶನವನ್ನು ಆಯೋಜಿಸಿದ್ದರು. ಶಿವಮೊಗ್ಗ ಮೊಹಮದ್ ಲುಕ್ಮಾನ್ ಅಹಮದ್ ಮತ್ತು ಪ್ರಸಾದ್ ಈ ಕ್ಯಾಟ್ ಪ್ರದರ್ಶನದಲ್ಲಿ ಸಾಥ್ ನೀಡಿದ್ದರು.

ಇನ್ನು ಮಕ್ಕಳು ಮತ್ತು ಕುಟುಂಬ ಸಮೇತರಾಗಿ ಈ ಕ್ಯಾಟ್ ಶೋದಲ್ಲಿ ಜನರು ಭಾಗವಹಿಸಿದ್ದರು. ಬೆಕ್ಕು ಅಂದ್ರೆ ಜನರು ಪ್ರಾಣ ಬಿಡುತ್ತಾರೆ, ಸದಾ ತಮ್ಮ ಮನೆ ಯೊಳಗೆ ಇದ್ದು ಎಲ್ಲರ ಪ್ರೀತಿ ಪಾತ್ರಕ್ಕೆ ಸಾಕು ಬೆಕ್ಕು ಆಗಿರುತ್ತದೆ. ಹೀಗೆ ಕ್ಯಾಟ್ ಶೋದಲ್ಲಿ ವಿವಿಧ ತಳಿಯ ಕ್ಯಾಟ್ ಗಳನ್ನು ಪ್ರೇಕ್ಷಕರ ಗಮನ ಸೆಳೆದವು.ಇನ್ನು ಮಕ್ಕಳು ಮತ್ತು ಕುಟುಂಬ ಸಮೇತರಾಗಿ ಈ ಕ್ಯಾಟ್ ಶೋದಲ್ಲಿ ಜನರು ಭಾಗವಹಿಸಿದ್ದರು. ಬೆಕ್ಕು ಅಂದ್ರೆ ಜನರು ಪ್ರಾಣ ಬಿಡುತ್ತಾರೆ. ಸದಾ ತಮ್ಮ ಮನೆಯೊಳಗೆ ಇದ್ದು ಎಲ್ಲರ ಪ್ರೀತಿ ಪಾತ್ರಕ್ಕೆ ಸಾಕು ಬೆಕ್ಕು ಆಗಿರುತ್ತದೆ. ಹೀಗೆ ಕ್ಯಾಟ್ ಶೋದಲ್ಲಿ ವಿವಿಧ ತಳಿಯ ಕ್ಯಾಟ್ ಗಳನ್ನು ಪ್ರೇಕ್ಷಕರ ಗಮನ ಸೆಳೆದವು.

ಮೈಸೂರು ಸುಲ್ತಾನ್‌ಗೆ ಪ್ರಶಸ್ತಿ: ಮೈಸೂರಿನ ಹಮೀದ್ ಸುಲ್ತಾನ್‌ನನ್ನು ಸಾಕಿದ್ದಕ್ಕೆ ಪ್ರಶಸ್ತಿ ಬಂದಿದೆ. ಹಮೀದ್ ಸುಲ್ತಾನ್ ಬ್ರೀಡು ಯಾವುದೇ ಆಕ್ರಮಣ ಶಾಲಿ ಬರಕ್ಕಲ್ಲ. ನೋಡಲು ಹುಲಿ ತರ ಕಾಣುತ್ತೆ. ರಷ್ಯಾದಲ್ಲಿ ಮಹಿಳೆಯ ಒಬ್ಬಳು ಬೆಂಗಾಲ್ ಬ್ರೀಡ್ ಕಂಡಿಹಿಡಿದಿದ್ದಾರೆ. ಅದೇ ಬ್ರೀಡ್ ನ ಐದು ತಳಿಯ ಬೆಕ್ಕಗಳನ್ನು ಹಮೀದ್ ಪ್ರದರ್ಶನಕ್ಕೆ ತಂದಿದ್ದರು. ಹೀಗೆ ಒಂದರಕ್ಕಿಂತ ಒಂದು ಬೆಕ್ಕುಗಳು ವಿಭಿನ್ನ ಮತ್ತು ಆಕರ್ಷಣೆಯಿಂದ ಕೂಡಿದ್ದವು.------------------------------- 28ಎಸ್‌ಎಂಜಿಕೆಪಿ08: ಶಿವಮೊಗ್ಗ ನಗರದಲ್ಲಿ ಭಾನುವಾರ ಶಿವಮೊಗ್ಗದ ಸೆಕ್ರೆಡ್ ಹಾರ್ಟ್​ನಲ್ಲಿರುವ ಸ್ನೇಹ ಭವನದಲ್ಲಿ ಗೇಟ್ ವೇ ಕ್ಯಾಟ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಕ್ಯಾಟ್ ಶೋದಲ್ಲಿ ಕಂಡು ಬಂದ ದೃಶ್ಯ.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌