ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಪಟ್ಟಣದಲ್ಲಿ ಪಟ್ಟಸಾಲಿ ನೇಕಾರ ಸಮಾಜ ಮಹಿಳಾ ಘಟಕ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಸಮಾಜದಲ್ಲಿ ಮಹಿಳೆ ಪುರುಷರಿಗೆ ಸಮಾನವಾಗಿ ನಿಂತಿದ್ದಾಳೆ. ಹೆಣ್ಣು ಮಕ್ಕಳಲ್ಲಿ ಅಗಾಧವಾದ ಶಕ್ತಿ ಅಡಗಿದೆ. ಮಹಿಳೆಯರಿಗೆ ತಾಳ್ಮೆ, ಸಹನೆ, ಪ್ರೀತಿ ಹೆಚ್ಚು. ದೈಹಿಕವಾಗಿ, ಮಾನಸಿಕವಾಗಿ ಮಹಿಳೆಯರು ಹೆಚ್ಚು ಸಬಲರಾಗಿರುತ್ತಾರೆ ಎಂದರು.
ಬಸವೇಶ್ವರ ಕಾಲೇಜು ಉಪನ್ಯಾಸಕಿ ಡಾ.ವೀಣಾ ಕಲ್ಮಠ ಮಾತನಾಡಿ, ಜವಾಬ್ದಾರಿಯುತ ಮೌಲ್ಯ ಮಕ್ಕಳಲ್ಲಿ ಮೂಡಿಸಬೇಕು. ಮಾನಸಿಕವಾಗಿ ಸಿದ್ಧರನ್ನಾಗಿಸಬೇಕು. ಮುಂದಿನ ತಲೆಮಾರಿಗೆ ನಮ್ಮ ಭಾರತೀಯ ಸಂಸ್ಕೃತಿ, ಸಂಸ್ಕಾರ, ಮೌಲ್ಯ ಮಕ್ಕಳಿಗೆ ಮುಟ್ಟಿಸಬೇಕು. ಆಧುನಿಕತೆಯೊಂದಿಗೆ ಮಹಿಳೆಯರು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಶಕ್ತಿ ಸ್ವರೂಪಿಣಿಯಾದ ಮಹಿಳೆಯರು ಸಮಾಜದಲ್ಲಿ ಗೌರವಯುತ ಜೀವನ ನಡೆಸಬೇಕು. ಅಭಿವೃದ್ಧಿ, ಮೌಲ್ಯದೊಂದಿಗೆ ಹೊಸತನದತ್ತ ಮುಖ ಮಾಡಬೇಕು ಎಂದರು.ಶ್ರೀ ಜಗದ್ಗುರು ಬಸವರಾಜ ಪಟ್ಟದಾರ್ಯ ಶ್ರೀಗಳು, ಶ್ರೀಗುರುಬಸವ ದೇವರು ಸಾನ್ನಿಧ್ಯ ವಹಿಸಿದ್ದರು. ಪಟ್ಟಸಾಲಿ ಸಮಾಜದ ಅಧ್ಯಕ್ಷೆ ಗೌರಮ್ಮ ಕಲಬುರ್ಗಿ, ಕುರುಹಿನಶೆಟ್ಟಿ ಸಮಾಜದ ಲತಾ ರಾಂಪೂರ, ಜ್ಯೋತಿ ಆಲೂರ, ರುಕ್ಮಿಣಿ ಕಂಠಿ, ಡಾ.ವೀಣಾ ಕಲ್ಮಠ, ಡಾ.ಸುರೇಖಾ ಯಂಡಿಗೇರಿ ಹಾಗೂ ಸಾಲೇಶ್ವರ ಸಹಕಾರಿ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು. ಭಾಗ್ಯಾ ಉದ್ನೂರ ಅಧ್ಯಕ್ಷತೆ ವಹಿಸಿದ್ದರು.