- ಮಸೀದಿಗಳಲ್ಲಿ ಪ್ರವಚನ । ಮೊಹಲ್ಲಾಗಳಲ್ಲಿ ಪಾನಕ, ತಿಂಡಿ - - - ಹರಿಹರ: ಮೊಹಮ್ಮದ್ ಪೈಗಂಬರ್ ಜಯಂತಿ ಅಂಗವಾಗಿ ನಗರದಲ್ಲಿ ಮುಸ್ಲಿಂ ಸಮಾಜದವರು ಸೋಮವಾರ ಈದ್ ಮಿಲಾದ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಬೆಳಗ್ಗೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಹಲವು ಮಸೀದಿಗಳಲ್ಲಿ ವಿಶೇಷ ಪ್ರವಚನಗಳನ್ನು ಆಯೋಜಿಸಲಾಗಿತ್ತು. ನಗರದ ನಾನಾ ಮುಸ್ಲಿಂ ಮೊಹಲ್ಲಾಗಳಲ್ಲಿ ಪಾನಕ, ತಿಂಡಿ ವಿತರಿಸಲಾಯಿತು.
ಸಾವಿರಾರು ಜನರಿದ್ದ ಮೆರವಣಿಗೆಯಲ್ಲಿ ಯುವಕರು ಪೈಗಂಬರ್ ಗುಣಗಾಣ ಮಾಡುವ ಘೋಷಣೆಗಳನ್ನು ಕೂಗಿದರು. ಹೈಸ್ಕೂಲ್ ಬಡಾವಣೆಯ ಆಜಂ ಮಸೀದಿಯಲ್ಲಿ ಪ್ರಾರ್ಥನೆಯ ನಂತರ ಮೌಲಾನಾ ಖಾಜಿ ಸೈಯದ್ ಶಂಷುದ್ದೀನ್ ಬರ್ಕಾತಿ ಅವರು ಸಂವಿಧಾನ ಪೀಠಿಕೆ ಪ್ರತಿಜ್ಞಾವಿಧಿ ಬೋಧಿಸಿದರು. ಯುವಕರು ಕೆಲವೆಡೆ ಬೈಕ್ ರ್ಯಾಲಿ ನಡೆಸಿದರು.
ಮೌಲಾನಾ ಖಾಜಿ ಸೈಯದ್ ಶಂಷುದ್ದೀನ್ ಬರ್ಕಾತಿ, ಅಂಜುಮನ್ ಎ ಇಸ್ಲಾಮಿಯ ಸಂಸ್ಥೆ ಅಧ್ಯಕ್ಷ ಸೈಯದ್ ಎಜಾಜ್, ಕಾರ್ಯದರ್ಶಿ ಆಸಿಫ್ ಜುನೈದಿ, ನಿರ್ದೇಶಕರಾದ ಬಿ.ಮೊಹ್ಮದ್ ಸಿಬ್ಗತ್ ಉಲ್ಲಾ, ಎಂ.ಆರ್. ಸೈಯದ್ ಸನಾಉಲ್ಲಾ, ರೋಷನ್ ಜಮೀರ್, ನೂರುಲ್ಲಾ ಎಚ್., ಸೈಯದ್ ರಹಮಾನ್, ಸೈಯದ್ ಬಶೀರ್ ಬಿ., ಸಾದಿಕ್ ಉಲ್ಲಾ ಎಸ್.ಎಂ, ಅಫ್ರೋಜ್ ಖಾನ್, ಹಾಜಿ ಅಲಿ, ಸರ್ಫರಾಜ್ ಅಹ್ಮದ್ ಕೆ., ಗೌಸ್ ಪೀರ್., ನಗರಸಭಾ ಸದಸ್ಯರಾದ ಬಿ.ಅಲ್ತಾಫ್, ಎಂ.ಆರ್.ಮುಜಮ್ಮಿಲ್, ಆರ್.ಸಿ. ಜಾವಿದ್, ಭಾನುವಳ್ಳಿ ದಾದಾಪೀರ್, ಜಾಕೀರ್, ಇಬ್ರಾಹಿಂ ಖುರೇಷಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಶಾಮೀರ್ ಆಲಂ ಖಾನ್, ಮುಖಂಡರಾದ ಬಿ.ಕೆ.ಸೈಯದ್ ರಹಮಾನ್, ಅನ್ವರ್ ಪಾಷಾ, ಡಾ.ಬಿಸ್ಮಿಲ್ಲಾ ಖಾನ್, ಆಸಿಫ್ ಕನವಳ್ಳಿ ಇದ್ದರು.ಮಾಜಿ ಶಾಸಕ ಎಚ್.ಎಸ್.ಶಿವಶಂಕರ್, ನಗರಸಭಾ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಜಂಬಣ್ಣ, ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಸಿ.ಎನ್.ಹುಲಿಗೇಶ್ ಮೆರವಣಿಗೆ ಸ್ಥಳಕ್ಕೆ ಆಗಮಿಸಿ ಶುಭಾಷಯ ಕೋರಿದರು.
- - - -17ಎಚ್‍ಆರ್‍ಆರ್2:ಹರಿಹರದಲ್ಲಿ ಸೋಮವಾರ ಈದ್ ಮಿಲಾದ್ ಹಬ್ಬದ ನಿಮಿತ್ತ ಮುಸ್ಲಿಂ ಬಾಂಧವರು ಮೆರವಣಿಗೆ ನಡೆಸಿದರು.