ನಾಪೋಕ್ಲು : ಸಂಭ್ರಮದ ಈದುಲ್ ಫಿತರ್‌

KannadaprabhaNewsNetwork |  
Published : Apr 02, 2025, 01:02 AM IST
ಫಿತ್ರ್ | Kannada Prabha

ಸಾರಾಂಶ

ವಿವಿಧ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಈದುಲ್‌ ಫಿತರ್‌ ಆಚರಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಯ ಪಟ್ಟಣದ ಮೋಹಿಯದ್ದಿನ್ ಜುಮ ಮಸೀದಿ ಸೇರಿದಂತೆ ಸುತ್ತಮುತ್ತಲಿನ ಚೆರಿಯಪರಂಬು, ಹಳೆ ತಾಲೂಕು, ಎಮ್ಮೆಮಾಡು, ಕುಂಜಿಲ, ಕೊಳಕೇರಿ, ಕೊಟ್ಟಮುಡಿ, ಸೇರಿದಂತೆ ವಿವಿಧ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಈದುಲ್ ಫಿತರ್‌ ಆಚರಿಸಿದ್ದರು.

ಇಲ್ಲಿಯ ಮೋಹಿಯದ್ದಿನ್ ಜುಮ ಮಸೀದಿಯ ಕಾರ್ಯಕ್ರಮದಲ್ಲಿ ಖತೀಬ್ ಉಬೈದ್ ಸಖಾಫಿ ಅವರು ಈದ್ ಸಂದೇಶ ನೀಡಿ ಶಾಂತಿ ಸುಭಿಕ್ಷೆಗಾಗಿ ಪ್ರಾರ್ಥಿಸಿದರು. ಸಾಮೂಹಿಕ ನಮಾಜ್ ಬಳಿಕ ಎಲ್ಲರು ಪರಸ್ಪರ ಶುಭಾಶಯ ಹಂಚಿಕೊಂಡ ನಂತರ ಮರಣ ಹೊಂದಿದವರಿಗೆ ಖಬರ್ ಸ್ಥಾನದಲ್ಲಿ ಝಿಯಾರತ್ ಮತ್ತು ವಿಶೇಷ ಪ್ರಾರ್ಥನೆ ನಡೆಸಿದರು.ಈ ಸಂದರ್ಭ ಅಧ್ಯಕ್ಷರಾದ ಎಮ್.ಎಚ್ ಅಬ್ದುಲ್ ರೆಹಮಾನ್, ಉಪ ಅಧ್ಯಕ್ಷ ಪಿ ಎಮ್ ಬದ್ರುದ್ದೀನ್ , ಪಿ ಎಮ್ ಅರಫತ್, ಕಾರ್ಯದರ್ಶಿ ಪಿ ಎಮ್ ಯೂನಸ್, ಖಜಾಂಚಿ ಶಾಹಿದ್ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸದಸ್ಯರು, ಸಮುದಾಯ ಬಾಂಧವರು ಭಾಗವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌