ಶಿರಸಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ೨ ಗುಂಪುಗಳ ನಡುವೆ ಮಾರಾಮಾರಿ

KannadaprabhaNewsNetwork |  
Published : Dec 24, 2024, 12:45 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಕಸ್ತೂರಬಾ ನಗರದ ಶಿವು ಗಣಪತಿ ದೇವಾಡಿಗ, ಶ್ರೀಕಾಂತ ಗಣಪತಿ ದೇವಾಡಿಗ, ಶಾರೂಕ್ ಹಾಗೂ ಎಸಳೆಯ ದರ್ಶನ ತಡಕನಳ್ಳಿ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.

ಶಿರಸಿ: ಇಲ್ಲಿನ ಹುಬ್ಬಳ್ಳಿ ರಸ್ತೆಯ ಗಾಯತ್ರಿ ವೈನ್ಸ್ ಎದುರುಗಡೆ ಕ್ಷುಲ್ಲಕ ಕಾರಣಕ್ಕೆ ಭಾನುವಾರ ೨ ಗುಂಪುಗಳ ನಡುವೆ ಮಾರಾಮಾರಿ ನಡೆದು ಜೀವ ಬೆದರಿಕೆ ಹಾಕಿದ ಕುರಿತು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇಲ್ಲಿನ ಕಸ್ತೂರಬಾ ನಗರದ ಶಿವು ಗಣಪತಿ ದೇವಾಡಿಗ, ಶ್ರೀಕಾಂತ ಗಣಪತಿ ದೇವಾಡಿಗ, ಶಾರೂಕ್ ಹಾಗೂ ಎಸಳೆಯ ದರ್ಶನ ತಡಕನಳ್ಳಿ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.ಕಸದಗುಡ್ಡೆಯ ವಿಶ್ವನಾಥ ಮಲ್ಲೇಶಪ್ಪ ಹುಲ್ಯಾಳ, ಕಸ್ತೂರಬಾನಗರದ ಪ್ರವೀಣ ಚೀಮಪ್ಪ ಬಾರಕೇರ, ಗಂಧದ ಕ್ಲಾಂಪೆಕ್ಸ್‌ನ ಶ್ರೀಕಾಂತ ಬಸಪ್ಪ ಹೆಬ್ಬಾಳ, ಕಸ್ತೂರಬಾನಗರದ ಪರಶುರಾಮ ಭೀಮಪ್ಪ ಬಾರಕೇರ ಹಲ್ಲೆಗೊಳಗಾದ ವ್ಯಕ್ತಿಗಳಾಗಿದ್ದಾರೆ.ಘಟನೆ ಹಿನ್ನೆಲೆ:

ಭಾನುವಾರ ಹುಬ್ಬಳ್ಳಿ ರಸ್ತೆಯ ಗಾಯತ್ರಿ ವೈನ್ಸ್ ಎದುರುಗಡೆ ಕ್ಷುಲ್ಲಕ ಕಾರಣಕ್ಕಾಗಿ ಶಿವು ದೇವಾಡಿಗ ಮತ್ತು ವಿಶ್ವನಾಥ ಹುಲ್ಯಾಳ ಎಂಬವರ ಗುಂಪಿನ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ಆಗ ಶಿವು ದೇವಾಡಿಗ ಪ್ರವೀಣ ಎಂಬಾತನ ಹೊಟ್ಟೆಗೆ ಬಿಯರ್‌ ಬಾಟಲಿಯಿಂದ ಚುಚ್ಚಲು ಯತ್ನಿಸಿದ್ದಾನೆ. ಪ್ರವೀಣ ತಪ್ಪಿಸಿಕೊಂಡು ಚೀರಿದ್ದಾನೆ.

ನಂತರ ಶಿವು ಗಣಪತಿ ದೇವಾಡಿಗ, ಶ್ರೀಕಾಂತ ಗಣಪತಿ ದೇವಾಡಿಗ, ಶಾರೂಕ್ ಹಾಗೂ ಎಸಳೆಯ ದರ್ಶನ ತಡಕನಳ್ಳಿ ಎಂಬವರು ಸೇರಿಕೊಂಡು ವಿಶ್ವನಾಥ ಮಲ್ಲೇಶಪ್ಪ ಹುಲ್ಯಾಳ, ಪ್ರವೀಣ ಚೀಮಪ್ಪ ಬಾರಕೇರ, ಶ್ರೀಕಾಂತ ಬಸಪ್ಪ ಹೆಬ್ಬಾಳ, ಪರಶುರಾಮ ಭೀಮಪ್ಪ ಬಾರಕೇರ ಎಂಬವರ ಮೇಲೆ ಮೇಲೆ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ.

ಈ ಕುರಿತು ವಿಶ್ವನಾಥ ಮಲ್ಲೇಶಪ್ಪ ಹುಲ್ಯಾಳ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪಿಎಸ್‌ಐ ರತ್ನಾ ಕುರಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ನದಿಬಾಗ ಶಾಲೆಯಲ್ಲಿ ಮನರಂಜನಾ ಕಾರ್ಯಕ್ರಮ

ಅಂಕೋಲಾ: ತಾಲೂಕಿನ ನದಿಬಾಗ ಸಕಿಪ್ರಾ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮಕ್ಕಳ ಮನರಂಜನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ್ ಮಾತನಾಡಿ, ಈ ಶಾಲೆಗೆ ಹೊಸ ಕಟ್ಟಡದ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು. ಅಂಕೋಲಾ ಪುರಸಭೆ ಮಾಜಿ ಅಧ್ಯಕ್ಷ ಅರುಣ ನಾಡಕರ್ಣಿ, ರಮೇಶ ಎನ್. ನಾಯ್ಕ ಹಾಗೂ ರಫೀಕ್ ಶೇಖ್ ಶಾಲೆಯ ಅಭಿವೃದ್ಧಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಸಹಾಯ ಮಾಡುವುದಾಗಿ ತಿಳಿಸಿದರು.ಬಿಇಒ ಮಂಗಳಲಕ್ಷ್ಮೀ ಹಾಗೂ ಗಣ್ಯರನ್ನು, ಶಾಲೆಯ ಶಿಕ್ಷಕರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಮತ್ತು ಹಳೆ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.ಸ್ಥಳೀಯ ಗ್ರಾಂಪಂ ಅಧ್ಯಕ್ಷ ಚಂದ್ರಕಾಂತ ನಾಯ್ಕ, ಸಿಆರ್‌ಪಿ ಜ್ಯೋತಿ ನಾಯ್ಕ, ವೆಂಕಪ್ಪ ನಾಯ್ಕ, ಮುಖ್ಯಾಧ್ಯಾಪಕ ಸಿ.ಡಿ. ಗಾಂವಕರ, ಸಹ ಶಿಕ್ಷಕಿ ಎಂ.ಎ. ಶೇಖ್, ಶಿವಾ ನಾಯ್ಕ, ಕನ್ನಡಪ್ರಭ ಪತ್ರಿಕೆಯ ವಿತರಕ ಪಾಂಡುರಂಗ ನಾಯ್ಕ, ಶಾರದಾ ಬಂಟ್, ಲಿಂಗಪ್ಪ ನಾಯ್ಕ, ಮಂಜುನಾಥ ನಾಯ್ಕ, ಜ್ಞಾನೇಶ್ವರ ನಾಯ್ಕ, ರೋಷನ್ ಖಾರ್ವಿ, ಸದಾನಂದ ನಾಯ್ಕ, ಆಡಳಿತ ಮಂಡಳಿಯವರು, ಹಳೆಯ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಪದಾಧಿಕಾರಿಗಳು, ಊರನಾಗರಿಕರು ಉಪಸ್ಥಿತರಿದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ