ಹೊಸಕೋಟೆ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವಿನ ಜಗಳದಲ್ಲಿ ಕಾರಿನ ಗಾಜು ಪುಡಿಪುಡಿ ಮಾಡಿ, ಮನೆಯಲ್ಲಿರುವ ಪೀಠೋಪಕರಣಗಳನ್ನು ಧ್ವಂಸ ಮಾಡಿರುವ ಘಟನೆ ತಾಲೂಕಿನ ನಂದಗುಡಿ ಗ್ರಾಮದಲ್ಲಿ ನಡೆದಿದೆ.
ನಂದಗುಡಿ ಕಾಲೇಜು ಮೈದಾನದ ಬಳಿ ರೋಹಿತ್ ಹಾಗು ಧನುಷ್ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಪ್ರಾರಂಭವಾಗಿ ಧನುಷ್ ಎಂಬಾತ ರೋಹಿತ್ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಸ್ಥಳಕ್ಕಾಗಮಿಸಿದ ರೋಹಿತ್ ಮಾವ ರಾಜ್‌ಕುಮಾರ್ ಧನುಷ್‌ನನ್ನು ಪ್ರಶ್ನಿಸಿದರು. ಧನುಷ್‌ನ ಸ್ನೇಹಿತರಾದ ಪ್ರಜ್ವಲ್, ಪ್ರಭು ಏಕಾಏಕಿ ಹಲ್ಲೆ ಮಾಡಿ, ಕಾರಿನ ಗಾಜು ಪುಡಿಪುಡಿ ಮಾಡಿದ್ದಾರೆ. ಹಲ್ಲೆಗೊಳಗಾದ ರಾಜ್‌ಕುಮಾರ್ ನಂದಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಠಾಣೆ ಆವರಣದಲ್ಲೆ ಹಲ್ಲೆ:
ರಾಜ್‌ಕುಮಾರ್‌ಗೆ ಗಾಯವಾಗಿರುವ ವಿಷಯ ತಿಳಿದ ಪತ್ನಿ ರೂಪ ಪೊಲೀಸ್ ಠಾಣೆ ಬಳಿ ಬಂದಾಗ ಹಲ್ಲೆ ಮಾಡಿದ್ದ ಪ್ರಜ್ವಲ್, ಪ್ರಭು ಅವರ ತಂದೆ ಡಿಂಗ್ರಿ ನಾಗರಾಜ್ ಕೂಡ ಠಾಣೆ ಬಳಿ ಬಂದಿದ್ದು, ದೂರನ್ನು ವಾಪಸ್ ಪಡೆಯುವಂತೆ ರಾಜ್‌ಕುಮಾರ್ ಹಾಗೂ ಪತ್ನಿಗೆ ಮನ ಬಂದಂತೆ ಥಳಿಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ರೂಪಾ ಕೆನ್ನೆಗೆ ಬಲವಾಗಿ ಗುದ್ದಿದ್ದಾನೆ.ಪೀಠೋಪಕರಣ ಧ್ವಂಸ:
ಠಾಣೆ ಬಳಿ ಹಲ್ಲೆ ಮಾಡಿದ ಡಿಂಗ್ರಿ ನಾಗರಾಜ್, ಬಳಿಕ ರಾಜ್ ಕುಮಾರ್ ಹಾಗೂ ಅವರ ತಮ್ಮ ಅನಿಲ್ ಮನೆಗೆ ತೆರಳಿ ರಾಜ್ ಕುಮಾರ್ ಅವರ ಬುಲೆಟ್ ಜಖಂಗೊಳಿಸಿ, ಅನಿಲ್ ಮನೆಯಲ್ಲಿದ್ದ ಟಿ.ವಿ. ಫ್ರಿಡ್ಜ್, ಗೃಹ ಬಳಕೆ ವಸ್ತುಗಳನ್ನು ಧ್ವಂಸ ಮಾಡಿ 3 ಲಕ್ಷ ಹಣ ಕದ್ದೊಯ್ದಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾರೆ. ನಂದಗುಡಿ ಠಾಣೆಯಲ್ಲಿ ದೂರು, ಪ್ರತಿದೂರುಗಳನ್ನು ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಫೋಟೋ: 24 ಹೆಚ್‌ಎಸ್‌ಕೆ 1, 2, 3 ಮತ್ತು 4
1: ನಂದಗುಡಿಯಲ್ಲಿ ಅನಿಲ್ ಮನೆಗೆ ನುಗ್ಗಿ ಪೀಠೋಪಕರಣ ದ್ವಂಸ ಮಾಡಿರುವ ಡಿಂಗ್ರಿ ನಾಗರಾಜ್.ಫೋಟೋ: 24 ಹೆಚ್‌ಎಸ್‌ಕೆ 33: ಬುಲೆಟ್ ದ್ವಂಸ ಮಾಡಿರುವುದು.
ಫೋಟೋ: 24 ಹೆಚ್‌ಎಸ್‌ಕೆ 44: ಕಾರಿನ ಗಾಜು ಪುಡಿ ಮಾಡಿರುವ ಪ್ರಭು, ಪ್ರಜ್ವಲ್.