ಸೋಮವಾರಪೇಟೆಯಲ್ಲಿ ವೈಭವದ ರಾಮನವಮಿ

KannadaprabhaNewsNetwork |  
Published : Mar 31, 2026, 03:00 AM IST
ಸೋಮವಾರಪೇಟೆಯಲ್ಲಿ ವೈಭವದ ರಾಮನವಮಿ ಆಚರಣೆ: ಗಮನ ಸೆಳೆದ ಸ್ಥ ಬ್ದ ಚಿತ್ರ ಗಳು:ಬೃಹತ್‌ ಶೋಭಾಯಾತ್ರೆ | Kannada Prabha

ಸಾರಾಂಶ

ರಾಮ ನವಮಿ ಹಬ್ಬದ ಅಂಗವಾಗಿ ಪಟ್ಟಣದ ಆಂಜನೇಯ ದೇವಾಲಯದಲ್ಲಿ ಭಕ್ತಿ ಭಾವದಿಂದ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ಜರುಗಿತು.

ಕನ್ನಡಪ್ರ ಭ ವಾರ್ತೆ ಸೋಮವಾರಪೇಟೆ

ರಾಮ ನವಮಿ ಹಬ್ಬದ ಅಂಗವಾಗಿ ಪಟ್ಟಣದ ಆಂಜನೇಯ ದೇವಾಲಯದಲ್ಲಿ ಭಕ್ತಿ ಭಾವದಿಂದ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ಜರುಗಿತು.ದೇವಾಲಯ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷ ಆಚರಣೆಗಳು ನಡೆದವು. ದೇವಾಲಯದ ಪ್ರಧಾನ ಅರ್ಚಕ ನಂಜುಂಡೇಶ್ವರ ಅವರ ಪೌರೋಹಿತ್ಯದಲ್ಲಿ ಅಭಿಷೇಕ, ಅರ್ಚನೆ ಹಾಗೂ ಮಹಾಮಂಗಳಾರತಿ ನೆರವೇರಿತು.

ಜನಪದ ಕಲಾ ತಂಡಗಳಾದ ಡೊಳ್ಳು ಕುಣಿತ, ನಂದಿ, ವೀರಗಾಸೆ, ಚೆಂಡೆ ಹಾಗೂ ಸುಗ್ಗಿ ಕುಣಿತದೊಂದಿಗೆ ಬೃಹತ್‌ ಶೋಭಾಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ನಡೆಯಿತು. ಸಾಂಪ್ರದಾಯಿಕ ವಾದ್ಯ ಗಳ ನಾದ ಮತ್ತು ಭಕ್ತರ ಘೋಷಣೆಗಳಿಂದ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ದಸರಾ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.ಈ ಸಂದರ್ಭದಲ್ಲಿ ರಾಮನವಮಿ ಆಚರಣೆ ಸಮಿತಿ ಅಧ್ಯ ಕ್ಷ ಸುಭಾಷ್ ತಿಮ್ಮ ಯ್ಯ, ಆಂಜನೇಯ ದೇವಾಲ ಸಮಿತಿ ಅಧ್ಯ ಕ್ಷ ಸಿ.ಪಿ. ಗೋಪಾಲ್, ದೇವಾಲಯ ಜೀರ್ಣೋದ್ದಾರ ಸಮಿತಿ ಅಧ್ಯ ಕ್ಷ ಸೀತಾರಾಮ್‌, ಕಾರ್ಯದರ್ಶಿ ನಂದ ಕುಮಾರ ಮತ್ತಿತರರು ಇದ್ದರು. ಎಸ್.ಎಲ್. ಸೀತಾರಾಮ್, ಕಾರ್ಯದರ್ಶಿ ಸೇರಿದಂತೆ ಹಲವು ಪ್ರಮುಖರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇವರ ನಾಡಿನಲ್ಲಿ ಮಹಾ ಸಮರಕ್ಕೆ ಅಖಾಡ ಸಿದ್ಧ
ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಅಗತ್ಯ: ಪಲ್ಲವಿ