ಎಸ್.ಆರ್.ಕಂಠಿ ಕಾಲೇಜಿಗೆ ನ್ಯಾಕ್‌ನಿಂದ ಎ ಗ್ರೇಡ್‌

KannadaprabhaNewsNetwork |  
Published : Nov 01, 2024, 12:11 AM IST
ಪೊಟೋ ಅ.31ಎಂಡಿಎಲ್ 1. ಮುಧೋಳ ಕಂಠಿ ಕಾಲೇಜಿಗೆ ನ್ಯಾಕ್ ನಿಂದ ಎ ಗ್ರೇಡ್ ಮಾನ್ಯತೆ | Kannada Prabha

ಸಾರಾಂಶ

ನ್ಯಾಕ್ ಪೀರ್ ತಂಡವು ಅ.21 ಮತ್ತು 22ರಂದು ಕಾಲೇಜಿಗೆ ಭೇಟಿ ನೀಡಿ, ವಿವಿಧ ವಿಭಾಗಗಳನ್ನು, ಶೈಕ್ಷಣಿಕ, ಸಾಂಸ್ಕೃತಿಕ, ಆಡಳಿತಾತ್ಮಕ ಚಟುವಟಿಕೆಗಳನ್ನು, ಏಳು ಕ್ರಿಟೇರಿಯಾಗಳನ್ನು ಪರಿಶೀಲಿಸಿತ್ತು

ಕನ್ನಡಪ್ರಭ ವಾರ್ತೆ ಮುಧೋಳ

ಬಾಗಲಕೋಟೆ ಬಿವ್ಹಿವ್ಹಿ ಸಂಘದ ಮುಧೋಳ ನಗರದ ಶ್ರೀ ಎಸ್.ಆರ್.ಕಂಠಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯಕ್ಕೆ 4ನೇ ಹಂತದ ನ್ಯಾಕ್‌ ಪೀರ್ ತಂಡದ ಮೌಲ್ಯಮಾಪನದಲ್ಲಿ ಸಿಜಿಪಿಎ 3.12 ಅಂಕ ಪಡೆಯುವದರ ಮೂಲಕ ಇದೆ ಮೊದಲ ಬಾರಿಗೆ ‘ಎ’ ಗ್ರೇಡ್‌ ಮಾನ್ಯತೆ ಪಡೆದಿರುವುದು ಖುಷಿ ತಂದಿದೆ. ತನ್ಮೂಲಕ ಉತ್ತಮ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಮಲ್ಲಣ್ಣ ಜಿಗಬಡ್ಡಿ ಹೇಳಿದರು.

ಗುರುವಾರ ಸುದ್ದಿಗಾರರಿಗೆ ಮಾತನಾಡಿದ ಅವರು, ರಾಜಸ್ಥಾನದ ಉದಯಪುರ ಮೋಹನಲಾಲ ಸುಖಾಧ್ಯಯ ವಿಶ್ವವಿದ್ಯಾಲಯದ ಕುಲಪತಿ ಡಾ.ಸುನಿತಾ ಮಿಶ್ರಾ ಅಧ್ಯಕ್ಷತೆಯಲ್ಲಿ ಗುಜರಾತದ ಮಹಾರಾಜಾ ಕೃಷ್ಣ ಕುಮಾರಸ್ವಾಮಿಜಿ ಭಾವನ ನಗರ ವಿಶ್ವವಿದ್ಯಾಲಯದ ಪ್ರೊ.ಡಾ.ಕಿಶೋರ ಮಹೇಂದ್ರ ಜೋಶಿ, ಮಹಾರಾಷ್ಟ್ರದ ಅಮರಾವತಿಯ ಸಂತ ಗಾಡಗೆ ಬಾಬಾ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಮಹೇಂದ್ರ ಢೋರೆ ಇಬ್ಬರು ಸದಸ್ಯರೊಳಗೊಂಡ ನ್ಯಾಕ್ ಪೀರ್ ತಂಡವು ಅ.21 ಮತ್ತು 22ರಂದು ಕಾಲೇಜಿಗೆ ಭೇಟಿ ನೀಡಿ, ವಿವಿಧ ವಿಭಾಗಗಳನ್ನು, ಶೈಕ್ಷಣಿಕ, ಸಾಂಸ್ಕೃತಿಕ, ಆಡಳಿತಾತ್ಮಕ ಚಟುವಟಿಕೆಗಳನ್ನು, ಏಳು ಕ್ರಿಟೇರಿಯಾಗಳನ್ನು ಪರಿಶೀಲಿಸಿತ್ತು.

ವಿದ್ಯಾರ್ಥಿಗಳ, ಪಾಲಕರ, ಹಳೆಯ ವಿದ್ಯಾರ್ಥಿಗಳ ಹಾಗೂ ಬೋಧಕ-ಬೋಧಕೇತರರೊಂದಿಗೆ ಸಮಾಲೋಚನೆ ನಡೆಸಿ, ಬಳಿಕ ವರದಿ ಸಿದ್ಧಪಡಿಸಿ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ವರದಿ ನೀಡಿದ ನಂತರ ಮುಧೋಳ ಕಂಠಿ ಕಾಲೇಜಿಗೆ ಉತ್ತಮ ಗ್ರೇಡ್ ದೊರೆಯುವ ಎಲ್ಲ ಅರ್ಹತೆ ಹೊಂದಿದೆ ಎಂದು ನ್ಯಾಕ್ ಪೀರ್ ಟೀಮ್ ಅಧ್ಯಕ್ಷೆ ಡಾ.ಸುನಿತಾ ಮೀಶ್ರಾ ಹೇಳಿದ್ದರು. ಅದರಂತೆ ಇಂದು ನಮ್ಮ ಮಹಾವಿದ್ಯಾಲಯಕ್ಕೆ ಎ ಗ್ರೇಡ್ ಮಾನ್ಯತೆ ದೊರೆತಿದೆ. ರಾಷ್ಟ್ರೀಯ ಮೌಲ್ಯಂಕನ ಮತ್ತು ಮಾನ್ಯತಾ ಪರಿಷತ್‌ನ 4ನೇ ಆವೃತ್ತಿಯಲ್ಲಿ ಈ ಶ್ರೇಣಿ ದೊರೆತಿದೆ. ಇದು ಮುಂದಿನ 5 ವರ್ಷದ ಅವಧಿವರೆಗೆ ಮಾನ್ಯವಾಗಿರುತ್ತದೆ ಎಂದರು.

ಮುಧೋಳ ಕಂಠಿ ಕಾಲೇಜಿಗೆ ‘ಎ’ ಗ್ರೇಡ್‌ ಮಾನ್ಯತೆ ಬಂದಿರುವದಕ್ಕೆ ಬಿವ್ಹಿವ್ಹಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಎನ್.ಅಥಣಿ, ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಸಂಸ್ಥೆ ಉನ್ನತ ಶಿಕ್ಷಣ ಗುಣಮಟ್ಟ ಭರವಸೆ ಮುಖ್ಯ ಸಲಹೆಗಾರರಾದ ಡಾ.ಮೀನಾ ಚಂದಾವರಕರ, ಸಂಘದ ಆಡಳಿತಾಧಿಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಕಾಲೇಜುಗಳ ಪದನಿಮಿತ್ತ ಕಾರ್ಯದರ್ಶಿ ಡಾ.ಎಸ್.ಎಮ್.ಗಾಂವಕರ, ನಿವೃತ್ತ ಪ್ರಾಚಾರ್ಯ ಪ್ರೊ.ಬಿ.ಆರ್.ಪಾಟೀಲ, ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಂ.ವ್ಹಿ. ಜಿಗಬಡ್ಡಿ, ಐಕ್ಯೂಎಸಿ ಸಂಯೋಜಕಿ ಪ್ರೊ.ಎಸ್. ಎಸ್.ಬಿರಾದಾರ ಹಾಗೂ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಸಂತಸ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ ರೆಡ್ ಕ್ರಾಸ್‌ನಿಂದ ವಿಶ್ವ ಮಾನವ ಹಕ್ಕು ದಿನಾಚರಣೆ
26ರಿಂದ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ