ರಾಣಿಬೆನ್ನೂರು ಕಾ ರಾಜಾ ಗಣೇಶನಿಗೆ ಅದ್ಧೂರಿ ವಿದಾಯ

KannadaprabhaNewsNetwork |  
Published : Oct 16, 2023, 01:45 AM IST
ಫೋಟೊ ಶೀರ್ಷಿಕೆ: 15ಆರ್‌ಎನ್‌ಆರ್2ರಾಣಿಬೆನ್ನೂರಿನಲ್ಲಿ ವಂದೇ ಮಾತರಂ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾದ ರಾಣಿಬೆನ್ನೂರು ಕಾ ರಾಜಾ ಗಣಪತಿಯ ಶೋಭಾಯಾತ್ರೆ ಅದ್ಧೂರಿಯಾಗಿ ಜರುಗಿತು. ಫೋಟೊ ಶೀರ್ಷಿಕೆ: 15ಆರ್‌ಎನ್‌ಆರ್2ಎರಾಣಿಬೆನ್ನೂರಿನಲ್ಲಿ ಜರುಗಿದ ವಂದೇ ಮಾತರಂ ಸಮಿತಿಯ ರಾಣಿಬೆನ್ನೂರು ಕಾ ರಾಜಾ ಗಣಪತಿಯ ಶೋಭಾಯಾತ್ರೆಗೆ ಕಳೆಗಟ್ಟಿದ ಕಲಾ ತಂಡಗಳು  | Kannada Prabha

ಸಾರಾಂಶ

ಇಲ್ಲಿನ ವಂದೇ ಮಾತರಂ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ರಾಣಿಬೆನ್ನೂರು ಕಾ ರಾಜಾ ಗಣಪತಿಯ (ಅಯೋಧ್ಯಾ ಪ್ರತಿರೂಪ ಮಾದರಿ) ಶೋಭಾಯಾತ್ರೆ ಭಾನುವಾರ ನಗರದಲ್ಲಿ ಅದ್ಧೂರಿಯಾಗಿ ಜರುಗಿತು.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಇಲ್ಲಿನ ವಂದೇ ಮಾತರಂ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ರಾಣಿಬೆನ್ನೂರು ಕಾ ರಾಜಾ ಗಣಪತಿಯ (ಅಯೋಧ್ಯಾ ಪ್ರತಿರೂಪ ಮಾದರಿ) ಶೋಭಾಯಾತ್ರೆ ಭಾನುವಾರ ನಗರದಲ್ಲಿ ಅದ್ಧೂರಿಯಾಗಿ ಜರುಗಿತು.

ನಗರದ ನಗರಸಭಾ ಕ್ರೀಡಾಂಗಣದ ಬಳಿ ಮಧ್ಯಾಹ್ನ 1ಕ್ಕೆ ಮಾಜಿ ಸಚಿವ ರೇಣುಕಾಚಾರ್ಯ ಶೋಭಾಯಾತ್ರೆಗೆ ಚಾಲನೆ ನೀಡಿದರು. ನಂತರ ಇಲ್ಲಿಂದ ಹೊರಟ ಶೋಭಾಯಾತ್ರೆಯು ಹಳೇ ಪಿ.ಬಿ. ರಸ್ತೆ, ಸಾಲೇಶ್ವರ ದೇವಸ್ಥಾನ, ಸಿದ್ದೇಶ್ವರ ದೇವಸ್ಥಾನ, ಕುರುಬಗೇರಿ ಕ್ರಾಸ್, ದುರ್ಗಾ ಸರ್ಕಲ್, ಎಂ.ಜಿ. ರಸ್ತೆ, ಚತುರ್ಮುಖಿ ದೇವಸ್ಥಾನ, ದೊಡ್ಡಪೇಟೆ ರಸ್ತೆ, ಸುಭಾಸ ಚೌಕ್, ಬಸವೇಶ್ವರ ದೇವಸ್ಥಾನ, ರೊಡ್ಡನವರ ಓಣಿ, ಕುಂಬಾರ ಓಣಿ, ಓಂ ಸರ್ಕಲ್, ರಂಗನಾಥ ನಗರ, ಸಂಗಮ್ ಸರ್ಕಲ್, ಪೋಸ್ಟ್ ಸರ್ಕಲ್, ಮೆಡ್ಲೇರಿ ಕ್ರಾಸ್, ಬಸ್ ನಿಲ್ದಾಣ ಮಾರ್ಗವಾಗಿ ಹರಿಹರ ರಸ್ತೆಯಲ್ಲಿ ಎನ್.ವಿ. ಹೊಟೇಲ್‌ವರೆಗೆ ಸಾಗಿ ಕೊನೆಗೊಂಡಿತು. ಅಲ್ಲಿಂದ ಮೂರ್ತಿಯನ್ನು ಹರಿಹರದ ತುಂಗಭದ್ರಾ ನದಿಗೆ ತೆಗೆದುಕೊಂಡು ಹೋಗಿ ವಿಸರ್ಜಿಸಲಾಯಿತು.

ಕೇರಳದ ವಿಶೇಷ ಕಲಾ ತಂಡಗಳು, ಸ್ಥಳೀಯ ಡೊಳ್ಳು ಕುಣಿತ, ಸಮಾಳ, ಹಲಗೆಮೇಳ, ನಂದಿಕಂಬ, ಭಜನೆ, ಜಾಂಜ್, ಅಣುಕು ಗೊಂಬೆಗಳು, ಹುಲಿ ಕುಣಿತ, ಪೂಜಾ ಕುಣಿತ, ಛಂಡಿ, ಮದ್ದಳೆ, ದೊಡ್ಡ ಹಲಗೆ, ಲೇಜಿಮ್, ಯಕ್ಷಗಾನ, ವೀರಗಾಸೆ ಹಾಗೂ ಮಹಿಳೆಯರು ಮತ್ತು ಪುರುಷರ ನೃತ್ಯಕ್ಕಾಗಿ ಆಯೋಜಿಸಲಾಗಿದ್ದ ಡಿಜೆ ಸಂಗೀತ ಶೋಭಾಯಾತ್ರೆಯ ವಿಶೇಷ ಆಕರ್ಷಣೆಯಾಗಿದ್ದವು. ಇದಲ್ಲದೆ ರಾಮ, ಲಕ್ಷ್ಮಣ, ಸೀತೆ, ಹನುಮಂತ ಒಳಗೊಂಡ ರಾಮಾಯಣದ ಮೂರ್ತಿಗಳು ಎಲ್ಲರ ಗಮನ ಸೆಳೆದವು. ದಾರಿಯುದ್ದಕ್ಕೂ ಯುವ ಜನಾಂಗ ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದರು.

ಬೆಂಗಳೂರಿನ ಮೀಡಿಯಾ ಮಾಸ್ಟರ್ ಮುಖ್ಯಸ್ಥ ಎಂ.ಎಸ್. ರಾಘವೇಂದ್ರ, ವಂದೇ ಮಾತರಂ ಸ್ವಯಂ ಸಂಘದ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ, ನಗರಸಭೆ ಸದಸ್ಯರಾದ ಹನುಮಂತಪ್ಪ ಹೆದ್ದೇರಿ, ಹುಚ್ಚಪ್ಪ ಮೆಡ್ಲೇರಿ, ಶೇಖಪ್ಪ ಹೊಸಗೌಡ್ರ, ನಾಗರಾಜ ಅಡ್ಮನಿ, ಮಾಜಿ ಸದಸ್ಯ ರಾಘವೇಂದ್ರ ಚಿನ್ನಿಕಟ್ಟಿ, ವೀರೇಶ ಹೆದ್ದೇರಿ, ಸಚಿನ್ ಬ್ಯಾಡಗಿ, ಮಂಜುನಾಥ ಬುರಡಿಕಟ್ಟಿ, ಶಿವಕುಮಾರ ಗೌಡಶಿವಣ್ಣನವರ, ಅಜಯ್ ಮಠದ, ನಾಗರಾಜ ತಳವಾರ, ವಿನಯಗೌಡ ಬಾಳನಗೌಡ, ಅನಿಲ ದಾವಣಗೆರೆ, ಜಗದೀಶ ಗೌಡಶಿವಣ್ಣನವರ ಸೇರಿದಂತೆ ಸಹಸ್ರಾರು ಜನರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ