10ನೇ ವರ್ಷವೂ ಅದ್ಧೂರಿ ಗಣೇಶೋತ್ಸವ: ಶ್ರೀನಿವಾಸ್

KannadaprabhaNewsNetwork |  
Published : Aug 26, 2025, 01:03 AM IST
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಿಂದೂ ಏಕತಾ ಗಣೇಶ ಪ್ರತಿಷ್ಠಾಪನೆಯ ಹಂದರಗಂಭದ ಪೂಜೆಯನ್ನು ಸಲ್ಲಿಸಲಾಯಿತು | Kannada Prabha

ಸಾರಾಂಶ

ಕಳೆದ 9 ವರ್ಷಗಳಿಂದ ಪಟ್ಟಣದ 27 ಸಮಾಜ ಬಾಂಧವರು ಒಂದೆಡೆ ಸೇರಿ ಜಾತಿ, ಧರ್ಮ, ಮತ, ಪಂಥಗಳ ಭಿನ್ನತೆ ಇಲ್ಲದೇ ಹಿಂದೂ ಏಕತಾ ಗಣೇಶೋತ್ಸವ ಆಚರಿಸುತ್ತಿದ್ದಾರೆ. ಪ್ರಸ್ತುತ 10ನೇ ವರ್ಷದ ಗಣೇಶೋತ್ಸವ ಅದ್ಧೂರಿಯಾಗಿ ನಡೆಸಲಾಗುವುದು ಎಂದು ಹಿಂದೂ ಏಕತಾ ಗಣಪತಿ ಸೇವಾ ಸಮಿತಿ ಕಾರ್ಯದರ್ಶಿ ಸಿ.ಎಚ್. ಶ್ರೀನಿವಾಸ್ ಹೇಳಿದ್ದಾರೆ.

- ಹಿಂದೂ ಏಕತಾ ಗಣಪತಿ ಪ್ರತಿಷ್ಠಾಪನೆಯ ಹಂದರಗಂಬ ಪೂಜೆ

- - -

ಚನ್ನಗಿರಿ: ಕಳೆದ 9 ವರ್ಷಗಳಿಂದ ಪಟ್ಟಣದ 27 ಸಮಾಜ ಬಾಂಧವರು ಒಂದೆಡೆ ಸೇರಿ ಜಾತಿ, ಧರ್ಮ, ಮತ, ಪಂಥಗಳ ಭಿನ್ನತೆ ಇಲ್ಲದೇ ಹಿಂದೂ ಏಕತಾ ಗಣೇಶೋತ್ಸವ ಆಚರಿಸುತ್ತಿದ್ದಾರೆ. ಪ್ರಸ್ತುತ 10ನೇ ವರ್ಷದ ಗಣೇಶೋತ್ಸವ ಅದ್ಧೂರಿಯಾಗಿ ನಡೆಸಲಾಗುವುದು ಎಂದು ಹಿಂದೂ ಏಕತಾ ಗಣಪತಿ ಸೇವಾ ಸಮಿತಿ ಕಾರ್ಯದರ್ಶಿ ಸಿ.ಎಚ್. ಶ್ರೀನಿವಾಸ್ ಹೇಳಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಿಂದೂ ಏಕತಾ ಗಣೇಶನ ಪ್ರತಿಷ್ಠಾಪನೆಯ ಹಂದರಗಂಬ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 9 ದಿನಗಳ ಕಾಲ ವಿಘ್ನನಿವಾರಕ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುವುದು. ಪ್ರತಿದಿನ ಮೂರು ಸಮಾಜದವರಿಗೆ ಪೂಜೆ ಸಲ್ಲಿಸುವ ಅವಕಾಶ ನೀಡಲಾಗಿದೆ. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಲಾಗುವುದು. ಪಟ್ಟಣದಲ್ಲಿ ಹಿಂದೂ- ಮುಸ್ಲಿಂ, ಜೈನ, ಕ್ರಿಶ್ಚಿಯನ್ ಸೇರಿದಂತೆ ಇನ್ನುಳಿದ ಧರ್ಮದವರಲ್ಲಿ ಸಾಮರಸ್ಯ, ಭಾವೈಕ್ಯತೆ ಮೂಡಿಸುವ ಗಣೇಶೋತ್ಸವ ಇದಾಗಿದೆ ಎಂದರು.

ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಹಂದರಗಂಬಕ್ಕೆ ಪೂಜೆ ಸಲ್ಲಿಸಿ, ಚನ್ನಗಿರಿ ಪಟ್ಟಣದ 27 ಸಮಾಜ ಬಾಂಧವರು ಯಾವುದೇ ತಾರತಮ್ಯಗಳಿಲ್ಲದೇ, ಸರ್ವರಿಗೂ ಸಮಾನ ದ ಅವಕಾಶಗಳನ್ನು ನೀಡುತ್ತ, ಸಾಮರಸ್ಯದಿಂದ ಗಣೇಶನ ಹಬ್ಬ ಆಚರಿಸುತ್ತಿರುವುದು ಸಂತೋಷದ ವಿಷಯ. 10ನೇ ವರ್ಷದ ಗಣೇಶೋತ್ಸವ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸಮಿತಿ ನಿರ್ಧರಿಸಿರುವುದು ಚನ್ನಗಿರಿ ಪಟ್ಟಣದ ನಾಗರೀಕರ ಸಾಮರಸ್ಯ ತೋರುತ್ತದೆ ಎಂದರು.

ಸಮಿತಿ ಪ್ರಮುಖರಾದ ಪಿ.ಆರ್.ಮಂಜುನಾಥ್, ರಜತಾದ್ರಿ ಹಾಲೇಶ್, ಪೆಟ್ರೋಲ್ ಬಂಕ್ ಆನಂದ್, ಕೆ.ಆರ್.ಮಂಜುನಾಥ್, ಕಾಫಿ ಪುಡಿ ಶಿವಾಜಿರಾವ್, ಶಶಿಕುಮಾರ್, ದೀಪಕ್ ಗಾರ್ಘೆ, ಜಿತೇಂದ್ರರಾಜ್, ಮಡಿವಾಳ ಸಮಾಜದ ಮುಖಂಡ ದತ್ತಪ್ಪ, ಜಯಣ್ಣ, ಮಲ್ಲಾನಾಯ್ಕ್, ಮಹಮದ್ ಜಬೀಉಲ್ಲಾ, ಧರಣೇಂದ್ರ, ಹನುಮಂತ್ ಮೊದಲಾದವರು ಹಾಜರಿದ್ದರು.

- - -

-25ಕೆಸಿಎನ್ಜಿ3.ಜೆಪಿಜಿ:

ಚನ್ನಗಿರಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಿಂದೂ ಏಕತಾ ಗಣೇಶ ಪ್ರತಿಷ್ಠಾಪನೆಯ ಹಂದರಗಂಬದ ಪೂಜೆ ಸಲ್ಲಿಸಲಾಯಿತು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ