ಮಾಗಡಿ: ನೆಲಮಂಗಲ ವಿಧಾನಸಭಾ ಕ್ಷೇತ್ರದಿಂದ ಮಾಗಡಿಗೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಗೆ ತಾಲೂಕಿನ ಗಣ್ಯರು, ಶಾಲಾ ಮಕ್ಕಳು ಅದ್ಧೂರಿ ಸ್ವಾಗತ ಕೋರಿದರು.
ಬಳಿಕ ರಥ ಬೆಂಗಳೂರು ರಸ್ತೆಯ ತಿರುಮಲೆಯ ಪ್ರವೇಶ ದ್ವಾರಕ್ಕೆ ಆಗಮಿಸಿತು. ಜನಪದ ಕಲಾತಂಡಗಳೊಂದಿಗೆ ತಿರುಮಲೆ ರಂಗನಾಥಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ಪೂಜೆ ಸ್ಪೀಕರಿಸಿ ರಥೋತ್ಸವ ನಡೆಯುವ ರಥ ಬೀದಿಯಲ್ಲಿ ಒಂದು ಸುತ್ತು ಹಾಕಿ ಎನ್ಇಎಸ್ ಬಡಾವಣೆ ಮೂಲಕ ಮಾಗಡಿ ಪಟ್ಟಣವನ್ನು ಪ್ರವೇಶಿಸಿತು.
ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ತಹಸೀಲ್ದಾರ್ ಶರತ್ ಕುಮಾರ್, ಕನ್ನಡ ಭಾಷೆ ಪ್ರೇಮ ನಾಡು ಜಲ ವಿಚಾರ ಬಂದಾಗ ಕನ್ನಡಿಗರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಜತೆಗೆ ಕನ್ನಡ ಪ್ರೇಮವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಪೋಷಕರು ಇಂಗ್ಲಿಷ್ ವ್ಯಾಮೋಹದ ಜತೆಗೆ ಕನ್ನಡವನ್ನು ಮಕ್ಕಳಿಗೆ ಕಲಿಸುವ ಕೆಲಸ ಆಗಬೇಕಿದೆ. ಕನ್ನಡಕ್ಕೆ ಹೆಚ್ಚು ಜ್ಞಾನಪೀಠ ಬಂದಿರುವ ಭಾಷೆಯಾಗಿದ್ದು ಕನ್ನಡ ಭಾಷೆಗೆ ಗೌರವ ಕೊಡುವ ಕೆಲಸವನ್ನು ಆಗಬೇಕಿದೆ. ಇಂಗ್ಲಿಷ್ ಜತೆಗೆ ಕನ್ನಡ ಭಾಷೆಗೂ ಮೊದಲ ಆದ್ಯತೆ ನೀಡಬೇಕಿದೆ. ರಥೋತ್ಸವಕ್ಕೆ ಪ್ರತಿಯೊಬ್ಬ ಕನ್ನಡಿಗರು ಗೌರವ ಕೊಡುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.ಹಿರಿಯ ಸಂಶೋಧಕರಾದ ಮುನಿರಾಜಪ್ಪ ಮಾತನಾಡಿ, ಪಂಪ ರನ್ನ, ಕುಮಾರವ್ಯಾಸ ಹಾಗೂ ಅನೇಕ ಕನ್ನಡ ಕವಿ ಕೋಗಿಲೆಗಳು ಬಿಟ್ಟು ಹೋಗಿರುವ ಕನ್ನಡದ ಅಮೂಲ್ಯ ಗ್ರಂಥಗಳನ್ನು ಓದಿ ಕನ್ನಡ ಭಾಷೆಯನ್ನು ಉಳಿಸುವ ಕೆಲಸ ಮಾಡಬೇಕಿದೆ. ಕನ್ನಡಕ್ಕೆ ತನ್ನದೇ ಆದ ಪರಂಪರೆಯನ್ನು ಹೊಂದಿದ್ದು ಕನ್ನಡ ಭಾಷೆಗೆ ಪ್ರತಿಯೊಬ್ಬರೂ ಗೌರವ ಕೊಡಬೇಕು ಎಂದು ಹೇಳಿದರು.
ವಿದ್ವಾಂಸ ನಂಜುಂಡಯ್ಯ ಮಾತನಾಡಿ, ಕನ್ನಡಿಗರಿಗೆ ಉದ್ಯೋಗ ಮತ್ತು ಕನ್ನಡಿಗರಿಗೆ ಭವಿಷ್ಯದಲ್ಲಿ ಸರ್ಕಾರಗಳು ಸೌಲಭ್ಯವನ್ನು ಕೊಡುವ ಕೆಲಸವನ್ನು ಮಾಡಬೇಕು ಎಂದರು.
ನಾಡಪ್ರಭು ಕೆಂಪೇಗೌಡರ ಆಳ್ವಿಕೆಯ ಪ್ರದೇಶದಲ್ಲಿ ಹಂಪಿಯ ರಥ ಸಾಗುತ್ತಿತ್ತು ಶಾಲಾ ವಿದ್ಯಾರ್ಥಿಗಳು ಕನ್ನಡ ಪ್ರೇಮಿಗಳು ರಥವನ್ನು ಗೌರವಹಿತವಾಗಿ ಸ್ವಾಗತಿಸಿ ಮೆರವಣಿಗೆಯಲ್ಲಿ ಪ್ರಾಥಮಿಕ ಶಾಲೆ ಪ್ರೌಢಶಾಲಾ ಅಂಕಾಲೇಜು ವಿದ್ಯಾರ್ಥಿಗಳು ಮತ್ತು ಹೆಗಲ ಮೇಲೆ ಕನ್ನಡ ಶಾಲು ಹಾಕಿಕೊಂಡು ಹೆಜ್ಜೆ ಹಾಕಿದರು. ಚಿಲಿಪಿಲಿ ಬೊಂಬೆ ಪೂಜಾ ಕುಣಿತ, ಡೊಳ್ಳು ಕುಣಿತ ಜೊತೆಗೆ ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ಕರಡಿ ಕುಣಿತ ಮುಂತಾದ ಜಾನಪದ ನೃತ್ಯಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.
ಫೋಟೋ: