ಬಸವ ಸಂಸ್ಕೃತಿ ಅಭಿಯಾನ ರಥಯಾತ್ರೆಗೆ ಭವ್ಯ ಸ್ವಾಗತ

KannadaprabhaNewsNetwork |  
Published : Sep 10, 2025, 01:03 AM IST
ಬಸವ ಸಂಸ್ಕೃತಿ ಅಭಿಯಾನದ ರಥ ಸಾಗುತ್ತಿದ್ದ ಯಾತ್ರೆಯಲ್ಲಿ ನಾಡಿನ ಅನೇಕ ಶ್ರೀಗಳು ಪಾಲ್ಗೊಂಡಿರುವುದು.  | Kannada Prabha

ಸಾರಾಂಶ

ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಸಮಸ್ತ ಬಸವಪರ ಸಂಘಟನೆಗಳ ಆಶ್ರಯದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನದ ರಥ ಮಂಗಳವಾರ ಬೆಳಗ್ಗೆ ಗದಗ ನಗರಕ್ಕೆ ಆಗಮಿಸಿದಾಗ ಹಲವಾರು ಗಣ್ಯರು ಭವ್ಯವಾದ ಸ್ವಾಗತ ನೀಡಿದರು. ನಂತರ ಶ್ರೀ ಮಠಕ್ಕೆ ತೆರಳಿದ ಷಟಸ್ಥಲ ಧ್ವಜಾರೋಹಣ ನೆರವೇರಿತು.

ಗದಗ:ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಸಮಸ್ತ ಬಸವಪರ ಸಂಘಟನೆಗಳ ಆಶ್ರಯದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನದ ರಥ ಮಂಗಳವಾರ ಬೆಳಗ್ಗೆ ಗದಗ ನಗರಕ್ಕೆ ಆಗಮಿಸಿದಾಗ ಹಲವಾರು ಗಣ್ಯರು ಭವ್ಯವಾದ ಸ್ವಾಗತ ನೀಡಿದರು. ನಂತರ ಶ್ರೀ ಮಠಕ್ಕೆ ತೆರಳಿದ ಷಟಸ್ಥಲ ಧ್ವಜಾರೋಹಣ ನೆರವೇರಿತು.

ಸಂಜೆ ಗದಗ ನಗರದ ಹತ್ತಿಕಾಳ ಕೂಟನಿಂದ ಪುನಃ ಪ್ರಾರಂಭವಾದ ರಥ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ತೋಂಟದಾರ್ಯ ಮಠಕ್ಕೆ ಆಗಮಿಸಿತು. ಮಾರ್ಗ ಉದ್ದಕ್ಕೂ ರಥಕ್ಕೆ, ಬಸವಣ್ಣನ ಮೂರ್ತಿಗೆ ಪುಷ್ಪವೃಷ್ಟಿ ನಡೆಸಲಾಯಿತು.

ಸ್ವಾಗತ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಡಿ.ಆರ್. ಪಾಟೀಲ, ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭೆ, ಬಸವಧರ್ಮ ಮಹಾಪೀಠ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ, ದಲಿತ ಸಾಹಿತ್ಯ ಪರಿಷತ್ತು, ದಲಿತ ಕಲಾ ಬಳಗ ಅಕ್ಕನ ಬಳಗ, ಸಮಗಾರ ಹರಳಯ್ಯ ಸಮಾಜ, ಡೋಹರ ಕಕ್ಕಯ್ಯ ಸಮಾಜ, ಅಂಬಿಗರ ಚೌಡಯ್ಯ, ಮಾದಾರ ಚನ್ನಯ್ಯ, ಮಡಿವಾಳ ಮಾಚಿದೇವರ ಸಮಾಜ, ಕುಂಬಾರ ಗುಂಡಯ್ಯ ಸಮಾಜ, ಹಡಪದ ಅಪ್ಪಣ್ಣ ಸಮಾಜ, ಒಕ್ಕಲಿಗ ಮುದ್ದಣ್ಣ ಸಮಾಜ, ಕುರುಬ ಗೊಲ್ಲಾಳೇಶ್ವರ ಸಮಾಜ, ಬಸವಯೋಗ ಕೇಂದ್ರ, ಶಿವಯೋಗಿ ಸಿದ್ದರಾಮೇಶ್ವರ ಸಮಾಜ, ಮೇದಾರ ಕೇತಯ್ಯ, ಜೇಡರ ದಾಸಿಮಯ್ಯ ಸಮಾಜ, ಶಂಕರ ದಾಸಿಮಯ್ಯ ಸಮಾಜ, ನೂಲಿಯ ಚಂದಯ್ಯ ಸಮಾಜ, ಹೂಗಾರ ಮಾದಯ್ಯ ಸಮಾಜದ ಬಾಂಧವರು, ಸುಧಾ ಹುಚ್ಚಣ್ಣನವರ, ಆಂಜನೇಯ ಕಟಗಿ, ಶಿವಕುಮಾರ ಪಾಟೀಲ, ಕೆ.ಎಚ್.ಚಟ್ಟಿ, ಎಸ್.ಎಸ್. ಪಟ್ಟಣಶೇಟ್ಟಿ, ಎಸ್‌ ಬಿ. ಅಣ್ಣಿಗೇರಿ, ಕೃಷ್ಣಾ ಪರಾಪೂರ, ಕೆ.ಬಿ.ಪಾಟೀಲ, ಶ್ರೀದೇವಿ ಶೆಟ್ಟರ, ಗೌರಮ್ಮ ಬಡಿಗಣ್ಣನವರ, ಅಂಬರೀಶ್ ಅಂಗಡಿ, ಶಿವಣ್ಣ ಮುಗದ, ಬಾಲಚಂದ್ರ ಭರಮಗೌಡ್ರ ಮುಂಡರಗಿಯ ಆನಂದಗೌಡ ಪಾಟೀಲ, ವೀರಣ್ಣ ತುಪ್ಪದ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾ ತಂಡಗಳು, ಸದಸ್ಯರು ಪಾಲ್ಗೊಂಡಿದ್ದರು. ರಾತ್ರಿ ಶ್ರೀ ಮಠದಲ್ಲಿ ಬೃಹತ್ ಕಾರ್ಯಕ್ರಮ ಹಾಗೂ ನಾಟಕ ಪ್ರದರ್ಶನ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡು ಪೋಲಿಯೊ ಹನಿ ಮಕ್ಕಳಿಗೆ ಜೀವಾಮೃತ: ಶಾಸಕ ಪ್ರಸಾದ್ ಅಬ್ಬಯ್ಯ
₹22267 ಕೋಟಿ ವೆಚ್ಚದಲ್ಲಿ 16.75 ಕಿ.ಮೀ ಸುರಂಗ ರಸ್ತೆ ನಿರ್ಮಿಸಲು ಅದಾನಿ ಗ್ರೂಪ್ ಬಿಡ್‌ ಸಲ್ಲಿಕೆ