ಕನ್ನಡಪ್ರಭ ವಾರ್ತೆ ಪಾವಗಡ
ಜಯಂತ್ಯುತ್ಸವದ ಹಿನ್ನೆಲೆಯಲ್ಲಿ ತಾಲೂಕು ಆಡಳಿತದ ವತಿಯಿಂದ ಬುಧವಾದ ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಮ್ಮ ವಚನ ಸಂದೇಶದ ಮೂಲಕ ಸಮಾನತೆ ಕಟ್ಟಿಕೊಟ್ಟ ಕೀರ್ತಿ ಬಸವಣ್ಣ ಅವರಿಗೆ ಸಲ್ಲಬೇಕು. ಅವರ ತತ್ವ ಸಿದ್ಧಾಂತ ಮಾದರಿಯಾಗಿದ್ದು ತಮ್ಮ ಅನುಯಾಯಿಗಳ ಮೂಲಕ ಸಹ ಮನೆಮನೆಗಳಿಗೆ ತೆರಳಿ ಸಮಾನತೆ ಹಾಗೂ ಬದುಕಿನ ಸೂತ್ರಗಳ ಕುರಿತು ಜಾಗೃತಿ ಮೂಡಿಸಿ ಬೆಳಕಾಗಿದ್ದಾರೆ. ಅವರನ್ನು ಪ್ರತಿಯೊಬ್ಬರು ಸ್ಮರಿಸಬೇಕು. ಅವರ ವಚನ ಸಾಹಿತ್ಯ ಕುರಿತು ಅರ್ಥೈಸಿಕೊಳ್ಳುವ ಮೂಲಕ ಜೀವನದಲ್ಲಿ ಮುನ್ನಡೆಯುವಂತೆ ಕರೆ ನೀಡಿದರು.
ಈ ವೇಳೆ ಗ್ರೇಡ್ 2 ತಹಸೀಲ್ದಾರ್ ಚಂದ್ರಶೇಖರ್, ಕಂದಾಯ ಇಲಾಖೆಯ ತನಿಖಾಧಿಕಾರಿ ರಾಜಗೋಪಾಲ್, ಗ್ರಾಮಲೆಕ್ಕಾಧಿಕಾರಿಗಳಾದ ರಾಜೇಶ್,ರವಿಕುಮಾರ್, ಗ್ರಾಮ ಆಡಳಿತ ಅಧಿಕಾರಿಗಳಾದ ಈರಣ್ಣ ಗೋರ್ನಾಳ್, ಸಿಬ್ಬಂದಿ ಪದ್ಮಾ, ಬಲರಾಂ, ಅಸ್ಲಾಂ, ಲಿಂಗಾಯತ ಸಮಾಜದ ಮುಖಂಡರಾದ ಕಾರ್ತಿಕ್ ರಾಜನ್, ಪ್ರೆಸ್ ನಾಗಭೂಷಣ್, ಶ್ರೇಯಸ್, ಎಚ್. ಕೃಷ್ಣಮೂರ್ತಿ,ವಕೀಲರಾದ ಆರ್. ಹನುಮಂತರಾಯಪ್ಪ, ಎಂ.ಜಿ. ಮಂಜುನಾಥ್, ರೈತ ಸಂಘದ ಗೋಪಾಲ್ ಹಾಗೂ ತಾಲೂಕು ಕಚೇರಿಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.