ಬಾಳೆಹೊನ್ನೂರು: ಸಮೀಪದ ಖಾಂಡ್ಯ ಹೋಬಳಿ ಯುವಕನೊಬ್ಬ ಹಸೆಮಣೆ ಏರುವ ಮುನ್ನ ಮತಗಟ್ಟೆಯಲ್ಲಿ ಮತ ಚಲಾಯಿಸಿ ಗಮನ ಸೆಳೆದಿದ್ದಾನೆ.ಶಿರಗೋಳದ ಯುವಕ ನಿತೀಶ್ ಅವರ ವಿವಾಹ ಮೂಡಿಗೆರೆ ತಾಲೂಕಿನ ಬಿಳಗಲಿಯ ವಧು ಪ್ರಮೀಳಾ ಎಂಬುವರೊಂದಿಗೆ ಶುಕ್ರವಾರ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ನಿಶ್ಚಯವಾಗಿದ್ದು, ಮದುವೆ ಮಂಟಪಕ್ಕೆ ತೆರಳುವ ಮುನ್ನ ವರ ನಿತೀಶ್ ಖಾಂಡ್ಯ ಹೋಬಳಿಯ ಶಿರಗೋಳದ ಸರ್ಕಾರಿ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 113ರಲ್ಲಿ ಕುಟುಂಬದವ ರೊಂದಿಗೆ ಬಂದು ಮತ ಚಲಾಯಿಸಿ ಮಾದರಿಯಾದರು. ಮತ ಚಲಾವಣೆ ಬಳಿಕ ಬೆರಳಿಗೆ ಹಚ್ಚಿದ್ದ ಶಾಯಿ ಪ್ರದರ್ಶಿಸಿ ಸಂತಸ ವ್ಯಕ್ತಪಡಿಸಿದರು.೨೬ಬಿಹೆಚ್‌ಆರ್ ೫: