ಸಾಮಾಜಿಕ ಭದ್ರತೆಗೆ ಗ್ಯಾರಂಟಿ ಯೋಜನೆ ಸಹಕಾರಿ: ರೆಡ್ಡಿ ಶ್ರೀನಿವಾಸ

KannadaprabhaNewsNetwork | Published : Apr 30, 2024 2:00 AM

ಸಾರಾಂಶ

ಕುಟಂಬಗಳ ಸಾಮಾಜಿಕ ಭದ್ರತೆಗೆ ಗ್ಯಾರಂಟಿ ಯೋಜನೆ ಸಹಕಾರಿಯಾಗಿವೆ.

ಕನ್ನಡಪ್ರಭ ವಾರ್ತೆ ಗಂಗಾವತಿ

ಕುಟುಂಬಗಳ ಸಾಮಾಜಿಕ ಭದ್ರತೆಗೆ ಗ್ಯಾರಂಟಿ ಯೋಜನೆ ಸಹಕಾರಿಯಾಗಿವೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರಡ್ಡಿ ಶ್ರೀನಿವಾಸ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ದಾಖಲೆ ರೀತಿಯಲ್ಲಿ ಕಾಂಗ್ರೆಸ್ 136 ಶಾಸಕರು ಆಯ್ಕೆಯಾಗಲು ಗ್ಯಾರಂಟಿ ಯೋಜನೆಗಳು ಕಾರಣವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಘೋಷಣೆ ಮಾಡಿದ ಐದು ನ್ಯಾಯಗಳು (ಗ್ಯಾರಂಟಿಗಳು) ಕಾಂಗ್ರೆಸ್ ಕೈ ಹಿಡಿಯಲಿದ್ದು, ರಾಜ್ಯದಲ್ಲಿ ಕೊಪ್ಪಳ ಸೇರಿ 18-20 ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆಂದು ಎದು ಹೇಳಿದರು.

ಗೃಹ ಜ್ಯೋತಿಯಡಿ ಜಿಲ್ಲೆಯಲ್ಲಿ 2,80,294 ವಿದ್ಯುತ್ ಬಳಕೆದಾರರಿದ್ದು, 2,59,840 ಕುಟುಂಬಗಳು 200 ಯೂನಿಟ್ ಸೌಲಭ್ಯ ಪಡೆಯುತ್ತಿವೆ. ಈ ಯೋಜನೆಯಡಿ ಜಿಲ್ಲೆಯಲ್ಲಿ ಶೇ.96ರಷ್ಟು ಪ್ರಗತಿ ಸಾಧಿಸಿದೆ. ಇನ್ನು ಶಕ್ತಿ ಯೋಜನೆಯಡಿ ಕೆಕೆಆರ್‌ಟಿಸಿ ವಿಭಾಗದಡಿ ಮಾರ್ಚ್ ಅಂತ್ಯಕ್ಕೆ ಒಟ್ಟು 5 ಕೋಟಿ ಜನರು ಪ್ರಯಾಣಿಸಿದ್ದು, ಇವರಲ್ಲಿ 2,83,56,422 ಮಹಿಳೆಯರು ಪ್ರಯಾಣ ಮಾಡಿ ಶಕ್ತಿ ಯೋಜನೆ ಸೌಲಭ್ಯ ಪಡೆದಿದ್ದಾರೆ. ಇದರಿಂದ ₹91 ಕೋಟಿ ಆದಾಯ ಬಂದಿದೆ. ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 2,82,157 ಮಹಿಳೆಯರು ನೋಂದಾಯಿಸಿ ಪ್ರತಿ ಮಾಸಿಕ ₹2 ಸಾವಿರ ಪಡೆಯುತ್ತಿದ್ದಾರೆ. ಜಿಲ್ಲೆಗೆ ಈ ವರೆಗೂ ₹56 ಕೋಟಿ ಬಂದಿದೆ. ಅನ್ನಭಾಗ್ಯ ಯೋಜನೆಯಡಿ ಒಟ್ಟು 2,10,286 ಪಡಿತರ ಕಾರ್ಡ್‍ದಾರುದ್ದಾರೆ. ₹114 ಕೋಟಿ ಜಿಲ್ಲೆಗೆ ಹಣ ಜಮೆಯಾಗಿದೆ. ಯುವ ನಿಧಿ ಯೋಜನೆಯಡಿ 798 ವಿದ್ಯಾರ್ಥಿಗಳು ನೋಂದಾಯಿಸಿದ್ದು, ಅವರಿಗೆ ಸೌಲಭ್ಯ ದೊರೆಯುತ್ತಿದೆ. ಬಿಜೆಪಿ ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳು ಮಾಹಿತಿ ಕೊಡುತ್ತಿದೆ. ಮೋದಿ ಗ್ಯಾರಂಟಿ ಏನೂ ನಡೆಯಲ್ಲ. ಜನಪರ ಇರುವ ಕಾಂಗ್ರೆಸ್ ಗ್ಯಾರಂಟಿಗಳು ಜನರಿಗೆ ತಲುಪುತ್ತಿದ್ದು, ಬಡವರು, ನಿರ್ಗತಿಕರು ಮತ್ತು ವಯೋವೃದ್ಧರ ಬದುಕಿಗೆ ಆಶಾಕಿರಣಗಳಾವೆ. ಸರ್ಕಾರದ ಯೋಜನೆ ಪಡೆಯುವ ಪ್ರತಿಯೊಬ್ಬ ಫಲಾನುಭವಿಗಳು ಕಾಂಗ್ರೆಸ್‌ಗೆ ಆಶೀರ್ವಾದ ಮಾಡಬೇಕು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕುಟುಂಬದ ಒಬ್ಬ ಮಹಿಳೆಗೆ ಲಕ್ಷ ರೂ. ರೈತರ ಸಾಲ ಮನ್ನಾ, ನಿರುದ್ಯೋಗಿಗಳ ಕೌಶಲ್ಯ ತರಬೇತಿಗೆ ಲಕ್ಷ ರೂ. ನೀಡಲಾಗುತ್ತದೆ ಎಂದರು.

Share this article