ಕನ್ನಡಪ್ರಭ ವಾರ್ತೆ ಮಂಡ್ಯ
ಇಲ್ಲಿನ ವಿದ್ಯಾನಗರದಲ್ಲಿ ಮಂಡ್ಯ ಚಿತ್ರಕಲಾವಿದರ ಬಳಗ, ರೈನ್‌ಬೋ ಕ್ರಿಯೇಷನ್ಸ್, ಡಾ.ಈ.ಸಿ.ನಿಂಗರಾಜ್‌ಗೌಡ ಸ್ನೇಹ ಬಳಗದ ಆಶ್ರಯದಲ್ಲಿ ಪಹಲ್ಗಾಂನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಭಾರತೀಯ ನಾಗರಿಕರಿಗೆ ಚಿತ್ರನಮನ ಸಲ್ಲಿಸಿ ಮಾತನಾಡಿದರು.
ದಾಳಿಕೋರರು ಪ್ರವಾಸಿಗರನ್ನ ಧರ್ಮದ ಆಧಾರದ ಮೇಲೆ ಪ್ರತ್ಯೇಕಿಸಿ ಪುರುಷರನ್ನು ಗುರಿಯಾಗಿಸಿಕೊಂಡು ಹತ್ಯೆಗೈದಿದ್ದಾರೆ. ಇಸ್ಲಾಂನ ಕಲ್ಮಾ ಉಚ್ಛರಿಸಲು ವಿಫಲರಾದವರಿಗೆ ಗುಂಡಿಕ್ಕಿದ್ದಾರೆ. ದಾಳಿಯಲ್ಲಿ ಲಷ್ಕರ್-ಎ-ತೋಯ್ಬಾ ಉಗ್ರ ಸಂಘಟನೆಯ ಸಂಪರ್ಕವಿರುವುದನ್ನು ಭಾರತೀಯ ತನಿಖಾ ಸಂಸ್ಥೆಗಳು ಪತ್ತೆಹಚ್ಚಿವೆ. ಮೂವರು ಆರೋಪಿಗಳಲ್ಲಿ ಇಬ್ಬರು ಪಾಕಿಸ್ತಾನ ಮೂಲದವರಾಗಿರುವುದು ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿರುವುದನ್ನು ಎತ್ತಿ ತೋರಿಸುತ್ತಿದೆ ಎಂದರು.ಕಾಶ್ಮೀರದಲ್ಲಿ ೩೭೦ನೇ ವಿಧಿಯನ್ನು ತೆಗೆದ ಬಳಿಕ ಶಾಂತಿ ನೆಲೆಸಿತ್ತು. ಲಕ್ಷಾಂತರ ಪ್ರವಾಸಿಗರು ಅಲ್ಲಿಗೆ ಬಂದು ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಕಾಶ್ಮೀರ ಉಗ್ರರ ಉಪಟಳದಿಂದ ದೂರವಾಗಿ ಶಾಂತಿಯ ಧಾಮವಾಗುತ್ತಿರುವುದನ್ನು ಪಾಕಿಸ್ತಾನ ಸಹಿಸದೆ ಈ ಕ್ರೌರ್ಯವನ್ನು ಮೆರೆದಿದೆ. ಇದಕ್ಕೆ ಭಾರತ ಯಾರೂ ನಿರೀಕ್ಷಿಸದ ರೀತಿಯಲ್ಲಿ ದಿಟ್ಟ ಉತ್ತರ ನೀಡಲು ಸಜ್ಜಾಗುತ್ತಿದೆ ಎಂದರು.
ಉಗ್ರರ ಅಮಾನುಷ ದಾಳಿ ನಡೆದಿದ್ದರೂ ಮುಖ್ಯಮಂತ್ರಿಗಳ ಹೇಳಿಕೆ ಹಾಗೂ ವರ್ತನೆ ಸರಿಯಾಗಿಲ್ಲ. ಹಿಂದೆ ಜಿಲ್ಲಾಧಿಕಾರಿಯನ್ನು ವೇದಿಕೆಯಲ್ಲಿ ಅವಮಾನಿಸಿದ್ದರು. ಈಗ ಪೊಲೀಸ್ ಇಲಾಖೆಯನ್ನೇ ಅವಮಾನಿಸಿದ್ದಾರೆ. ದೇಶದ ಭದ್ರತೆ ವಿಷಯ ಬಂದಾಗಲೂ ವಿರೋಧಿ ದೇಶದ ಪರ ಹೇಳಿಕೆ ನೀಡುತ್ತಿದ್ದಾರೆ. ಅವರು ಮುಖ್ಯಮಂತ್ರಿ ಸ್ಥಾನ ತ್ಯಜಿಸಿ ಪಾಕಿಸ್ತಾನದಲ್ಲೋ, ಅಫ್ಘಾನಿಸ್ತಾನದಲ್ಲೋ ವಾಸಿಸಲಿ. ನಮ್ಮ ದೇಶ ಸರ್ವರನ್ನೂ ಅಪ್ಪಿ ಮುದ್ದಾಡುತತ್ತಿವೆ. ದೇಶದ ಭದ್ರತೆ ವಿರುದ್ಧ ಅವರು ಹೇಳಿಕೆ ನೀಡುವುದಾದರೆ ದೇಶದ ಪರ ಹಾಗೂ ದೇಶಾಭಿಮಾನವಿರುವವರು ಅವರ ವಿರುದ್ಧ ಪ್ರತಿಭಟಿಸುವುದರಲ್ಲಿ ತಪ್ಪೇನು ಎಂದರು.
ಕಾಶ್ಮೀರದಲ್ಲಿ ಶಾಂತಿ ನೆಲಸಬೇಕು. ಪಿಒಕೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ವಶಕ್ಕೆ ಪಡೆದುಕೊಳ್ಳಬೇಕು. ಅದಕ್ಕೆ ಈಗ ಒಳ್ಳೆಯ ಸದಾವಕಾಶ ಕೂಡಿಬಂದಿದೆ. ಪಾಕಿಸ್ತಾನಿಯರಿಗೆ ಭಾರತಕ್ಕೆ ಪ್ರವೇಶ ಸಿಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುವುದರೊಂದಿಗೆ ಈ ಬಾರಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಎದಿರೇಟು ನೀಡುವುದರೊಂದಿಗೆ ಮತ್ತೆ ಪಾಕಿಸ್ತಾನ ಭಾರತದ ತಂಟೆಗೆ ಬರದಂತೆ ತಡೆಯುವಂತೆ ಒತ್ತಾಯಿಸಿದರು.