ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ರಾಗಿಮುದ್ದನಹಳ್ಳಿಯ ಮಹದೇವು ಅವರು ತಮ್ಮ ತೋಟದ ಮನೆಯಲ್ಲಿ ಕಟ್ಟಿ ಹಾಕಿದ್ದ 5 ಕುರಿಗಳು ಮತ್ತು 3 ಮೇಕೆಗಳ ಮೇಲೆ ದಾಳಿ ನಡೆಸಿದ್ದ ಚಿರತೆ ಕತ್ತು ಮತ್ತು ಹೊಟ್ಟೆಯ ಭಾಗವನ್ನು ಸೀಳಿ ಕುರಿ, ಮೇಕೆಗಳನ್ನು ಕೊಂದು ಹಾಕಿ ಪರಾರಿಯಾಗಿತ್ತು. ಗ್ರಾಮಸ್ಥರಿಂದ ವಿಷಯ ತಿಳಿದ ಅರಣ್ಯಾಧಿಕಾರಿಗಳು ಚಿರತೆಯ ಚಲನ ವಲನಗಳನ್ನು ಆಧರಿಸಿ ಚಿರತೆದಾಳಿಯಿಂದ ಬಲಿಯಾಗಿದ್ದ ಕುರಿ ಕಳೆಬರಹವನ್ನು ಬೋನಿನಲ್ಲಿ ಇರಿಸಿ ಚಿರತೆ ಸೆರೆಗೆ ಬಲೆ ಬೀಸಿದ್ದರು. ಸತ್ತ ಪ್ರಾಣಿಗಳನ್ನು ತಿನ್ನಲು ಆಗಮಿಸಿದ್ದ ಚಿರತೆ ಬೋನಿಗೆ ಬಿದ್ದು ಸೆರೆಯಾಗಿದೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಜಗದೀಶ್‌ಗೌಡ, ಲವಕುಮಾರ್, ಸಿಬ್ಬಂದಿ ಹುಲ್ಕೆರೆ ಕರೀಗೌಡ, ಅಶೋಕ್ ಇತರರು ಚಿರತೆ ಸೆರೆ ಭಾಗವಹಿಸಿದ್ದರು.ಸಾಲಬಾಧೆ: ನೇಣು ಬಿಗಿದು ರೈತ ಆತ್ಮಹತ್ಯೆ
ಸಾಲಭಾದೆಯಿಂದ ರೈತ ನೇಣು ಬಿಗಿದು ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಟ್ಟಣಕ್ಕೆ ಸಮೀಪದ ತಮ್ಮಡಹಳ್ಳಿಯಲ್ಲಿ ಗುರುವಾರ ಮುಂಜಾನೆ ಜರುಗಿದೆ.
ಜೊತೆಗೆ ಕೆಲ ದಿನಗಳ ಹಿಂದಷ್ಟೇ ಸಾಲ ಮಾಡಿ ತಂದಿದ್ದ ಸಾವಿರಾರು ರು.ಬೆಲೆ ಬಾಳುವ ಎರಡು ಹಸುಗಳು ಅನಾರೋಗ್ಯದಿಂದ ಮೃತ ಪಟ್ಟಿದ್ದವು ಎನ್ನಲಾಗಿದೆ. ಬೋರ್ ಹಾಕಿಸಲು, ಹಸುಗಳ ಖರೀದಿಗೆ ಹಾಗೂ ವ್ಯವಸಾಯಕ್ಕೆ ಸುಮಾರು 8 ಲಕ್ಷದ ವರೆಗೂ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.