ಕನ್ನಡಪ್ರಭ ವಾರ್ತೆ ಮುಂಡರಗಿ
ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಮಜ್ಜಿಗೆ ನಾಗಪ್ಪನವರ 75ನೇ ವರ್ಷದ ಜನ್ಮದಿನ ಹಾಗೂ ಕೊಟ್ರಮ್ಮ ಮಾಗಪ್ಪ ಮಜ್ಜಗಿ ದಂಪತಿಗಳ ವಿವಾಹ ಸುವರ್ಣ ಮಹೋತ್ಸವ ಹಾಗೂ ಶ್ರೀಗಳಿಗೆ ತುಲಾಭಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ನಾಗಪ್ಪ ಮಜ್ಜಿಗೆ ಕುಟುಂಬವು ಹಲವಾರು ವರ್ಷಗಳಿಂದ ಸಮಾಜ ಸೇವೆ, ದಾನ-ಧರ್ಮ ಹಾಗೂ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ. ಇಬ್ಬರು ಗುರುಗಳ ಪೂಜೆ, ತುಲಾಭಾರ ನಡೆಸಿ, ಆಶೀರ್ವಾದ ಪಡೆಯಬೇಕೆಂಬ ಇಚ್ಛೆಯಂತೆ ಹಮ್ಮಿಕೊಂಡ ಈ ಸಮಾರಂಭದಲ್ಲಿ, ತಂದೆ-ತಾಯಿಯ ಋಣ ತೀರಿಸಲು ಮಕ್ಕಳು ಹಾಗೂ ಕುಟುಂಬದವರು ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದರು.
ಸೋಗಿ ಪುರವರ್ಗ ಕಟ್ಟೀಮನೆ ಮಠದ ಪಟ್ಟದ ಅಭಿನವ ಸಿದ್ದವೀರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಮಜ್ಜಿಗೆ ನಾಗಪ್ಪ ಅವರು ತಮ್ಮ ಎರಡೂ ಪೀಠಗಳಿಗೆ ನಿರಂತರ ಶ್ರದ್ಧಾ-ಭಕ್ತಿಯ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಇಡೀ ಕುಟುಂಬವೇ ಧಾರ್ಮಿಕ ಸಂಸ್ಕಾರವನ್ನು ಮೈಗೂಡಿಸಿಕೊಂಡು, ಗುರುಗಳ ಕೃಪೆಗೆ ಪಾತ್ರವಾಗಿದೆ ಎಂದರು.ಮಾಜಿ ಸಚಿವ ಎಸ್.ಎಸ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಹಿತಿ ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಾಲಪ್ಪಯ್ಯ ಶಾಸ್ತ್ರಿಗಳು, ಡಾ. ವಿ.ಕೆ. ಸಂಕನಗೌಡರ್, ಎಸ್.ವಿ. ಪಾಟೀಲ, ಭೀಮಸಿಂಗ್ ರಾಠೋಡ, ರಜನಿಕಾಂತ ದೇಸಾಯಿ, ಮಹಾದೇವಪ್ಪ ಗುಡ್ಲಾನೂರ, ಅಂದಪ್ಪ ಕೂಲಿ, ಶಂಕ್ರಪ್ಪ ಹಂಪಸಾಗರ್, ಮದರಸಾಬ್ ಸಿಂಗನಮಲ್ಲಿ, ಲಕ್ಷ್ಮಣ ಕಾಗನೂರ, ಅಭಿನಂದನ್ ಖೋದಾನಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರಭು ಸೊಪ್ಪಿನ ನಿರೂಪಿಸಿ, ವಂದಿಸಿದರು.