ಸಮಾಜ ಸೇವೆಯಿಂದ ಸಾರ್ಥಕ ಜೀವನ ಸಾಧ್ಯ: ಸನ್ನಿ ರಾಜಮನೆ

KannadaprabhaNewsNetwork | Published : Jun 21, 2024 1:08 AM

ಸಾರಾಂಶ

ದುಡಿಮೆ ಮಾಡಿದ ಲಾಭಾಂಶದಲ್ಲಿ ದಾನ ಮಾಡುವ ಪ್ರವೃತ್ತಿಯನ್ನು ಹೊಂದಿದ್ದರೆ ದೇವರು ಹೆಚ್ಚಿನ ಪ್ರತಿಫಲವನ್ನು ನೀಡುತ್ತಾನೆ ಎಂದು ರಾಜಮನೆ ಫೌಂಡೇಷನ್ ಸ್ಥಾಪಕ ತಣಿಗೆರೆಯ ಸನ್ನಿ ಆರ್. ರಾಜಮನೆ ಅಭಿಪ್ರಾಯಪಟ್ಟರು.

- ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳ ವಿತರಣೆ ಸಮಾರಂಭ- - - ಕನ್ನಡಪ್ರಭ ವಾರ್ತೆ, ಚನ್ನಗಿರಿ

ದುಡಿಮೆ ಮಾಡಿದ ಲಾಭಾಂಶದಲ್ಲಿ ದಾನ ಮಾಡುವ ಪ್ರವೃತ್ತಿಯನ್ನು ಹೊಂದಿದ್ದರೆ ದೇವರು ಹೆಚ್ಚಿನ ಪ್ರತಿಫಲವನ್ನು ನೀಡುತ್ತಾನೆ ಎಂದು ರಾಜಮನೆ ಪೌಂಡೇಷನ್ ಸ್ಥಾಪಕ ತಣಿಗೆರೆಯ ಸನ್ನಿ ಆರ್. ರಾಜಮನೆ ಅಭಿಪ್ರಾಯಪಟ್ಟರು.

ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿರುವ ಎಸ್.ಎಸ್.ಜೆ.ವಿ.ಪಿ. (ಕೆ.ಪಿ.ಎಸ್) ಶಾಲೆಯಲ್ಲಿ ಬೆಂಗಳೂರಿನ ರಾಜಮನೆ ಫೌಂಡೇಷನ್ ವತಿಯಿಂದ ಎಲ್.ಕೆ.ಜಿ.ಯಿಂದ ಪಿ.ಯು.ಸಿ.ವರೆಗಿನ 1500 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿ ವರ್ಷ ತಾಲೂಕಿನ ಸರ್ಕಾರಿ ಶಾಲೆಯ 10 ಸಾವಿರ ವಿದ್ಯಾರ್ಥಿಗಳಿಗೆ 50 ಸಾವಿರಕ್ಕೂ ಹೆಚ್ಚು ನೋಟ್ ಬುಕ್ ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಿದ್ದೇನೆ. ರಕ್ತದಾನ, ನೇತ್ರದಾನ ಶಿಬಿರಗಳನ್ನು ಸಹ ಆಯೋಜಿಸುತ್ತಿದ್ದೇನೆ. ದಾನ ಮಾಡುವುದರಲ್ಲಿ ನನಗೆ ತೃಪ್ತಿ ದೊರಕಿದ್ದು, ಜೀವನ ಸಾರ್ಥಕ ಎನಿಸಿದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಮಾತನಾಡಿದರು. ಫೌಂಡೇಷನ್ ವತಿಯಿಂದ ತಾಲೂಕಿನ ಸಂತೆಬೆನ್ನೂರು, ತಣಿಗೆರೆ, ಮಂಗೇನಹಳ್ಳಿ, ಗೆದ್ದಲಹಟ್ಟಿ, ಮೆದಿಕೆರೆ, ಮರಡಿ, ಕಸ್ತೂರಬಾ ನಗರ, ಹಬ್ಬಿಗೆರೆ ಗ್ರಾಮಗಳ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.

ಕ್ಷೇತ್ರ ಸಮನ್ವಯಾಧಿಕಾರಿ ಡಾ. ಎಸ್.ಶಂಕರಪ್ಪ, ಉಪ ಪ್ರಾಚಾರ್ಯ ಜಯಪ್ಪ, ಎಸ್.ಡಿ.ಎಂ.ಸಿ ಅಧ್ಯಕ್ಷ ನಯಾಜ್, ಕೃಷ್ಣಮೂರ್ತಿ, ಸುರೇಶ್ ಗೌಡ, ರುದ್ರೇಶ್, ಸಿ.ಆರ್.ಪಿ. ಕುಸುಮ, ಉಜ್ಜಿನಪ್ಪ, ಎಂ.ಬಿ.ನಾಗರಾಜ್, ಧ್ಯಾಮೇಶ್ ಉಪಸ್ಥಿತರಿದ್ದರು.

- - - -20ಕೆಸಿಎನ್‌ಜಿ2:

ನೋಟ್ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಫೌಂಡೇಷನ್ ಸ್ಥಾಪಕ ತಣಿಗೆರೆಯ ಸನ್ನಿ ಆರ್.ರಾಜಮನೆ ಚಾಲನೆ ನೀಡಿದರು.

Share this article