ಸಾರಾಂಶ
ಉತ್ತರಾಖಂಡ ರಾಜ್ಯದ ರುದ್ರಾಪುರದಲ್ಲಿ ಜರುಗಲಿರುವ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನಶಿಪ್‌ಗಾಗಿ ರಾಜ್ಯ ಟ್ರ್ಯಾಕ್ ಸೈಕ್ಲಿಂಗ್ ತಂಡಗಳ ಆಯ್ಕೆ ಪರೀಕ್ಷೆಗಳನ್ನು ನ.10, 11 ರಂದು ಬೆಳಗ್ಗೆ 7 ಗಂಟೆಗೆ ಬೆಳಗಾವಿ ಜಿಲ್ಲೆಯ ಚಂದರಗಿ ಕ್ರೀಡಾ ಶಾಲೆಯ ಸೈಕ್ಲಿಂಗ್ ವೆಲೋಡ್ರೋಮನಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಉತ್ತರಾಖಂಡ ರಾಜ್ಯದ ರುದ್ರಾಪುರದಲ್ಲಿ ಜರುಗಲಿರುವ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನಶಿಪ್‌ಗಾಗಿ ರಾಜ್ಯ ಟ್ರ್ಯಾಕ್ ಸೈಕ್ಲಿಂಗ್ ತಂಡಗಳ ಆಯ್ಕೆ ಪರೀಕ್ಷೆಗಳನ್ನು ನ.10, 11 ರಂದು ಬೆಳಗ್ಗೆ 7 ಗಂಟೆಗೆ ಬೆಳಗಾವಿ ಜಿಲ್ಲೆಯ ಚಂದರಗಿ ಕ್ರೀಡಾ ಶಾಲೆಯ ಸೈಕ್ಲಿಂಗ್ ವೆಲೋಡ್ರೋಮನಲ್ಲಿ ಹಮ್ಮಿಕೊಳ್ಳಲಾಗಿದೆ. 14, 16 ಮತ್ತು 18 ವಯೋಮಾನದೊಳಗಿನ ಬಾಲಕ ಬಾಲಕಿಯರಿಗೆ ಮತ್ತು ಪುರುಷ ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಆಯ್ಕೆ ಟ್ರಯಲ್ಸ್ ತೆಗೆದುಕೊಳ್ಳಲಾಗುವುದು, ಟ್ರ್ಯಾಕ್‌ನಲ್ಲಿ ವೈಯಕ್ತಿಕ ಪರಶ್ಯೂಟ್ ಆಧಾರದ ಮೇಲೆ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ವಯೋಮಾನದಲ್ಲಿ ಭಾಗವಹಿಸಲಿರುವ ಕಿರಿಯ ಸ್ಪರ್ಧಾಳಗಳು ತಮ್ಮ ಜನನ ಪ್ರಮಾಣ ಪತ್ರ ಕಡ್ಡಾಯವಾಗಿ ತರಬೇಕು. ಟ್ರ್ಯಾಕ್ ಸೆಲೆಕ್ಷನ್‌ನಲ್ಲಿ ಟ್ರ್ಯಾಕ್ ಸೈಕ್ಲಿಂಗ್ ಮತ್ತು ಹೆಲ್ಮೇಟ್ ಕಡ್ಡಾಯವಾಗಿರುತ್ತದೆ. ಮಾಹಿತಿಗಾಗಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆರ್.ಎಚ್.ಪೂಜಾರಿ ಮೊ.9945949600 ಗೆ ಸಂಪರ್ಕಿಸಬಹುದು ಎಂದು ಪ್ರಧಾನ ಕಾರ್ಯದರ್ಶಿ ಆರ್.ಎಚ್. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))