ರಾಜ್ಯದಲ್ಲಿಯೇ ಮಾದರಿ ಆಸ್ಪತ್ರೆ

KannadaprabhaNewsNetwork | Published : Jul 3, 2025 12:32 AM
ಜಜಜಜಜ | Kannada Prabha

ಶಾಸಕರ ವಿಶೇಷ ಮತುವರ್ಜಿ ಹಾಗೂ ಅಧಿಕಾರಿಗಳ ಹೆಚ್ಚಿನ ಕಾಳಜಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಖಾಸಗಿ ಆಸ್ಪತ್ರೆಗಳು ನೀಡುವ ಅತ್ಯುತ್ತಮ ಸೇವೆ ಹಾಗೂ ಸೌಲಭ್ಯಗಳನ್ನು ನೀಡಬಹುದು ಎಂಬುವುದಕ್ಕೆ ಗೋಕಾಕ ತಾಲೂಕು ಸಾರ್ವಜನಿಕ ಆಸ್ಪತ್ರೆ ಸಾಕ್ಷಿಯಾಗಿದ್ದು, ರಾಜ್ಯದಲ್ಲಿಯೇ ಮಾದರಿ ಹೊರಹೊಮ್ಮಿದೆ.

ಭೀಮಶಿ ಭರಮಣ್ಣವರ

ಕನ್ನಡಪ್ರಭ ವಾರ್ತೆ ಗೋಕಾಕ

ಶಾಸಕರ ವಿಶೇಷ ಮತುವರ್ಜಿ ಹಾಗೂ ಅಧಿಕಾರಿಗಳ ಹೆಚ್ಚಿನ ಕಾಳಜಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಖಾಸಗಿ ಆಸ್ಪತ್ರೆಗಳು ನೀಡುವ ಅತ್ಯುತ್ತಮ ಸೇವೆ ಹಾಗೂ ಸೌಲಭ್ಯಗಳನ್ನು ನೀಡಬಹುದು ಎಂಬುವುದಕ್ಕೆ ಗೋಕಾಕ ತಾಲೂಕು ಸಾರ್ವಜನಿಕ ಆಸ್ಪತ್ರೆ ಸಾಕ್ಷಿಯಾಗಿದ್ದು, ರಾಜ್ಯದಲ್ಲಿಯೇ ಮಾದರಿ ಹೊರಹೊಮ್ಮಿದೆ.

ನಗರದಲ್ಲಿ 200 ಹಾಸಿಗೆಗಳ ಸಾರ್ವಜನಿಕ ಆಸತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನುರಿತ ಹೃದಯ ರೋಗ ತಜ್ಞರು, ಎಲುವು ಮತ್ತು ಕೀಲು ತಜ್ಞರು, ಜನರಲ್ ಸರ್ಜನ್, ಆಯುಷ್ಯ ವಿಭಾಗ, ಚಿಕ್ಕಮಕ್ಕಳ ತಜ್ಞರು, ಸ್ತ್ರೀ ರೋಗ ತಜ್ಞರು ಸೇರಿದಂತೆ ಅನುಭವಿ ತಜ್ಞ ವೈದ್ಯರ ತಂಡವನ್ನೊಳಗೊಂಡಂತೆ ಸುಮಾರು 212 ಸಿಬ್ಬಂದಿಯರು ಕ್ಷೇತ್ರ ಜನತೆಯ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ರೋಗಿಗಳಿಗೆ ಗುಣಮಟ್ಟದ ಸೇವೆಯೊಂದಿಗೆ ರೋಗಿಗಳ ತೃಪ್ತಿ, ಆಸ್ಪತ್ರೆಯ ಸ್ವಚ್ಛತೆ ಸೇರಿದಂತೆ ಉತ್ತಮ ಕಾರ್ಯನಿರ್ವಹಣೆಯಲ್ಲಿ ಅತ್ಯುತ್ತಮತೆಯಿಂದ ರಾಷ್ಟ್ರಮಟ್ಟದಲ್ಲಿ ಕೊಡುವ ಕಾಯಕಲ್ಪ ಪ್ರಶಸ್ತಿಯನ್ನು 2018 ರಿಂದ 2020 ರವರೆಗೆ ಸತತ ಬಾರಿ ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿರುವುದು ಜಿಲ್ಲೆಯಲ್ಲಿಯೇ ವಿಶೇಷವಾಗಿರುವುದರೊಂದಿಗೆ ಸರ್ಕಾರಿ ಉತ್ತಮ ಆಸ್ಪತ್ರೆವೆಂಬ ಕೀರ್ತಿಗೆ ಪಾತ್ರವಾಗಿದೆ.

ಲಕ್ಷಕ್ಕೂ ಅಧಿಕ ರೋಗಿಗಳ ಸೇವೆ ಕೋವಿಡ್ ಸಂಕಷ್ಟ ಕಾಲದಿಂದ ಇಲ್ಲಿಯವರೆಗೆ ಒಳ ಹಾಗೂ ಹೊರರೋಗಿಗಳಿಗೆ ಬೇಕಾದ ತುರ್ತು ಚಿಕಿತ್ಸೆ ಹಾಗೂ ಔಷಧಗಳನ್ನು ನೀಡಿ ರೋಗಿಗಳ ಉತ್ತಮ ಆರೈಕೆಯಲ್ಲಿ ಸರ್ಕಾರಿ ಆಸ್ಪತ್ರೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ನಿತ್ಯವೂ ನೂರಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಏಪ್ರಿಲ್ -2020 ರಿಂದ 2021ರ ಮಾರ್ಚ್‌ವರೆಗೆ ಸುಮಾರು 7,998 ಐಜಡಿ ಚಿಡಿಚಿಡಿಜಿಡಿ 1,14,931 ಚಿಟಚಿಜ ರೋಗಿಗಳು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಹಾಗೂ ಔಷಧಗಳನ್ನು ಪಡೆದುಕೊಂಡು ಗುಣಮುಖರಾಗಿರುವುದು ಆಸ್ಪತ್ರೆಯ ಗುಣಮಟ್ಟದ ಸೇವೆಗೆ ಕೈಗನ್ನಡಿಯಾಗಿದೆ. ತಾಲೂಕಿನ ರೋಗಿಗಳಿಗೆ ಗೋಕಾಕಿನ ಸರ್ಕಾರಿ ಆಸ್ಪತ್ರೆಯೇ ಸಂಜೀವಿನಿಯಾಗಿದೆ. ವಿವಿಧ ರೋಗಿಗಳಿಗೆ ಸಂಬಂಧಿಸಿದಂತೆ ಹೃದಯರೋಗ ತಜ್ಞರು, ಎಲುವು ಮತ್ತು ಕೀಲು ತಜ್ಞರು, ಜನರಲ್ ಸರ್ಜನ್, ಆಯುರ್ವೇದಿಕ್ ಆಯುಷ್ಯ ವಿಭಾಗ, ಚಿಕ್ಕಮಕಳ ತಜ್ಞರು, ಸ್ತ್ರೀರೋಗತಜ್ಞರು ಸೇರಿದಂತೆ ನುರಿತ ತೆಲ್ಲ ವೈದ್ಯರು ಹಾಗೂ ಅನುಭವಿ ಸಿಬ್ಬಂದಿಯರ ತಂಡವೇ ಇದ್ದು ಕೇತ್ರದ ಜನತೆಯ ಆರೋಗ್ಯ ಸುಧಾರಣೆಗೆ ಉತ್ತಮ ಸೇವೆ ನೀಡುತ್ತಿರುವುದು ಶ್ಲಾಘನೀಯ. ದಿನಕ್ಕೆ 500ಕ್ಕೂ ಅಧಿಕ ಶಸ್ತ್ರಚಿಕಿತ್ಸೆ ವಿವಿಧ ರೋಗಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಜನರು ಇಲ್ಲಿರುವ ಸವಲತ್ತು ಹಾಗೂ ಪರಿಣಿತ ತಜ್ಞರಿಂದ ಆಸ್ಪತ್ರೆಯನ್ನು ಹುಡುಕಿಕೊಂಡು ಬಂದು ಚಿಕಿತ್ಸೆ ಪಡೆಯುವಂತಾಗಿದೆ. ಕ್ಷೇತ್ರದ ಜನತೆಗೆ ಅತ್ಯವಶ್ಯಕವಾಗಿರುವ ಗರ್ಭಿಣಿಯರ ಹಾಗೂ ಮಗುವಿನ ಕಾಳಜಿಗಾಗಿಯೇ 100 ಹಾಸಿಗೆಯುಳ್ಳ ತಾಯಿ ಮತ್ತು ಮಕ್ಕಳ ಸುಸಜ್ಜಿತ ಆಸ್ಪತ್ರೆಗೆ ಅಗತ್ಯ ನೆರವು ನೀಡಿದ್ದಾರೆ. ಶಾಸಕ ರಮೇಶ ಜಾರಕಿಹೊಳಿ ಅವರ ಕಾಳಜಿಯಿಂದಾಗಿ ಇನ್ನು 6 ತಿಂಗಳಲ್ಲಿ 200 ಹಾಸಿಗೆಗಳಿಗೆ ತಾಯಿ ಮಕ್ಕಳ ಆಸ್ಪತ್ರೆ ಮೇಲ್ದರ್ಜೆಗೇರಿ ಕಾರ್ಯಾರಂಭ ಮಾಡಲಿದೆ. ಈ ಆಸ್ಪತ್ರೆಯಲ್ಲಿ ಪ್ರತಿ ದಿನ 550ರಿಂದ 600ಕ್ಕೂ ಮೇಲ್ಪಟ್ಟ ಹೇರಿಗೆಗಳು ನಡೆಯುತ್ತಿದ್ದು ಗರ್ಭಿಣಿಯರನ್ನು ಮನೆಯಿಂದ ಕರೆದುಕೊಂಡು ಬರುವುದಲ್ಲದೇ ಹೆರಿಗೆಯ ನಂತರವೂ ಮನೆಯವರೆಗೆ ಬಿಟ್ಟು ಬರಲು ಉಚಿತ ಸಾರಿಗೆ ವ್ಯವಸ್ಥೆಯನ್ನು ಆಸ್ಪತ್ರೆ ವತಿಯಿಂದ ಮಾಡಲಾಗಿದೆ. ಅತೀ ಹೆಚ್ಚು ಹೆರಿಗೆಗಳ ತಾಲೂಕು ಆಸ್ಪತ್ರೆ

ದಿನದ 24 ಗಂಟೆಯಲ್ಲಿ ನಿರಂತ ಸೇವೆ ನೀಡಿ ರಾಜ್ಯದಲ್ಲಿಯೇ ಅತೀ ಹೆಚ್ಚು ಹೆರಿಗೆಗಳನ್ನು ನೀಡಿದ ತಾಲೂಕು ಆಸ್ಪತ್ರೆ ಎಂಬ ಹಿರಿಮೆಗೆ ಪಾತ್ರವಾಗಿದೆ. ಹೀಗಾಗಿಯೇ 2019-20ನೇ ಸಾಲಿನಲ್ಲಿ ರಾಷ್ಟ್ರಮಟ್ಟದಿಂದ ಹೆರಿಗೆ ಆಸ್ಪತ್ರೆಯ ಗುಣಮಟ್ಟ ಹೆಚ್ಚಿಸಲು ನೀಡವಂತ ಲಕ್ಷ್ಯ, ಸರ್ಟಿಫೈಡ್ ಹಾಸ್ಪಿಟಲ್ ಅವಾರ್ಡ್‌ನ್ನು ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಗೋಕಾಕ ಆಸ್ಪತ್ರೆ ಲಭಿಸಿರುವುದು ಆಸ್ಪತ್ರೆಯ ಶ್ರೇಷ್ಠತೆ ಹೆಚ್ಚಿಸಿದೆ. 2017-18ನೇ ಸಾಲಿನಿಂದ 2019-20ರವರೆಗೆ ಸತತ 3 ವರ್ಷ ಪಡೆಯುವುದರೊಂದಿಗೆ ಹ್ಯಾಟ್ರಿಕ್ ಸಾಧನೆ ಮಾಡಿದೆ. 2019 ಟೈಮ್ಸ್ ಗ್ರೂಪ್‌ನಿಂದ ಕೊಡಮಾಡುವ ಟೈಮ್ಸ್ ಹೆಲ್ತ್ ಕೇರ್ ಅಚಿವರ್ ಪ್ರಶಸ್ತಿ ಲಭಿಸಿದೆ. ಅಬಾರ್ಕ ಅಡಿಯಲ್ಲಿ ಉತ್ತಮ ಸಾಧನೆ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ-2021ರ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಹಾಗೂ ರಾಜ್ಯದಲ್ಲಿನ ತಾಲೂಕು ಆಸ್ಪತ್ರೆಗಳಲ್ಲಿಯೇ ಮೊದಲ 5 ಸ್ಥಾನದಲ್ಲಿ ಗೋಕಾಕ ಆಸ್ಪತ್ರೆ ಇರುವುದು ಅಪೌಷ್ಠಿಕ ಮಕ್ಕಳ ಪುನಶ್ಚತನ ಕೇಂದ್ರವು ರಾಜ್ಯ ದಲ್ಲಿಯೇ ಮಾದರಿ ಆರೋಗ್ಯ ಕೇಂದ್ರವೆಂಬ ಗೌರವಕ್ಕೆ ಪಾತ್ರವಾಗಿದೆ. ಕುಡಿಯಲು, ಬಳಕೆಗೆ ಬಿಸಿ ನೀರು ಹಾಗೂ ಪೌಷ್ಟಿಕ ಆಹಾರಗಳ ಊಟದ ವ್ಯವಸ್ಥೆ ಮಾಡುವ ಮೂಲಕ ಬಾಣಂತಿಯರ ಆರೈಕೆಯಲ್ಲಿ ತಜ್ಞ ವೈದ್ಯರ ತಂಡವು ವಿಶೇಷ ಕಾಳಜಿ ವಹಿಸಿದೆ. ಸ್ರೀರೋಗ ವಿಭಾಗದಲ್ಲಿ ಸ್ನಾತಕೋತ್ತರ ವ್ಯಾಸಾಂಗ ಕಳೆದ ಮೂರು ವರ್ಷಗಳಿಂದ ಪ್ರಾರಂಭವಾಗಿದ್ದು, ಚಿಕ್ಕಮಕ್ಕಳ ಹಾಗೂ ಅರವಳಿಕೆ ವಿಭಾಗದಲ್ಲಿ ಸ್ನಾತಕೋತ್ತರ ವ್ಯಾಸಾಂಗ ಮುಂದಿನ ವರ್ಷದಿಂದ ಪ್ರಾರಂಭವಾಗಲಿದೆ.

ಗೋಕಾಕ ಸರ್ಕಾರಿ ಆಸ್ಪತ್ರೆಯನ್ನು ರಾಜ್ಯದಲ್ಲಿಯೇ ಮಾದರಿ ಮಾಡಬೇಕೆನ್ನುವ ಕನಸು ಭಾಗಶಃ ನನಸಾಗಿದೆ. ಬರುವ ದಿನಗಳಲ್ಲಿ ತಾಯಿ ಮಕ್ಕಳ ಆಸ್ಪತ್ರೆ ಹಾಗೂ ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೆರಿದ್ದು ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿವೆ.

-ರಮೇಶ ಜಾರಕಿಹೊಳಿ, ಶಾಸಕರು ಗೋಕಾಕ.ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ. ಜಾರಕಿಹೊಳಿ ಸಹೋದರರ ಸಹಕಾರದಿಂದ ಇನ್ನು ಅನೇಕ ಸೌಲಭ್ಯಗಳು ನಮ್ಮ ಆಸ್ಪತ್ರೆಗೆ ಒದಗಿ ಬರಲಿವೆ.

-ಡಾ.ರವೀಂದ್ರ ಅಂಟಿನ,

ತಾಲೂಕು ಮುಖ್ಯ ವೈದ್ಯಾಧಿಕಾರಿಗಳು.