
ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಸಮೀಪದ ಚಿಕ್ಕಹೆಸರೂರು-ಪಾಮನಕೆಲ್ಲೂರಿ ನಲ್ಲಿರುವ ಧರೆಗೆ ದೊಡ್ಡವರು ಕೊಡೇಕಲ್ಲ ಬಸವಣ್ಣ ಶಾಖಾಮಠ, ಅಮರಜ್ಞಾನ ಪೀಠದ ಸಂಗಮನಾಥನ ಅರವಿನ ಮಂಟದಲ್ಲಿ ಅಮರ ಕಲ್ಯಾಣ ಶರಣೋತ್ಸವ ಸಮಾವೇಶದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಅವರು, 12ನೇ ಶತಮಾನದ ಚಳವಳಿ ವಚನಾ ಸಾಹಿತ್ಯದ ಮೂಲಕ ಹೋರಾಟ ಮಾಡಿದ ಬಸವಣ್ಣನವರು ಸಮಾನತೆ ಸಮಾಜ ಸಾರಲು ಅಹರ್ನಿಶಿ ಶ್ರಮಿಸಿದರು. ಆದರೆ ಬಸವಣ್ಣ ಬಯಸಿದ ಸಮಾಜದ ರಚನೆ ಸಾಧ್ಯ ವಾಗಲಿಲ್ಲ. 12ನೇ ಶರಣ ಚಳವಳಿಗೆ ಮರು ಶಕ್ತಿ ನೀಡಿದ 15ನೇ ಶತಮಾನ ಕಾಲಜ್ಞಾನಿ ಕೊಡೇಕಲ್ಲು ಬಸವಣ್ಣ ತಮ್ಮ ಕ್ರಾಂತಿಕಾರಿ ವಚನಗಳೊಂದಿಗೆ ಸಾಹಿತ್ಯ ಮತ್ತು ಶಸ್ತçದ ಮೂಲಕ ಸಮಾಜದಲ್ಲಿ ಸಮಾನತೆ ಸಾರಲು ಹೋರಾಡಿದರು. ಇದರ ಜೊತೆಗೆ ಮಂಟೆಸ್ವಾಮಿ ಮೂಲಕ ಕತ್ತಲೆ ನಾಡು ಮೈಸೂರು ಭಾಗಕ್ಕೆ ಪರಂ ಜ್ಯೋತಿಯಾಗಿ ಬೆಳಗಿದರು. ಕಾಲಜ್ಞಾನಿ ಕೋಡೆಕಲ್ಲು ಬಸವಣ್ಣನವರು ತತ್ವ ಸಿದ್ದಾಂತಗಳ ಅಳವಿಡಿಸಿಕೊಂಡ ಮೈಸೂರು ನಾಡು ಇಂದು ಜಗಪ್ರಸಿದ್ಧ ನಾಡಾ ಯಿತು. ಬಸವಣ್ಣನ ನಾಡಿನಲ್ಲಿ ಅವರ ತತ್ವಾದರ್ಶನಗಳನ್ನು ಪಾಲನೆ ಮಾಡದೇ ಎಡವಿದ್ದರಿಂದ ನಾವು ಇನ್ನೂ ಸಮಾಜದಲ್ಲಿ ಅಸಮಾನತೆ ಕಾಣುತ್ತಿದ್ದೇವೆ ಎಂದು ವಿಷಾಧ ವ್ಯಕ್ತಪಡಿಸಿದರು.
ಧ್ವಜಾರೋಹಣ : ಧರೆಗೆ ದೊಡ್ಡವರು ಕೋಡೆಕಲ್ಲ ಶಾಖಾ ಮಠ ಅಮರಜ್ಞಾನಪೀಠದಲ್ಲಿ ಶರಣ ಸೈನಿಕರಿಂದ ಶರಣರು ಬೆಳಗ್ಗೆ ಧ್ವಜಾರೋಹಣ ಮಾಡಿದರು.ವಚನ ಹೊತ್ತಿಗೆ ಮೆರವಣಿಗೆ ಅಮರಜ್ಞಾನ ಪೀಠದಿಂದ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಅಮರ ಕಲ್ಯಾಣ ಶರಣೋತ್ಸವ ಸಮಾರಂಭಕ್ಕೆ ಮುಂಚೆ ಪಾಮನಕೆಲ್ಲೂರು ಆದಿ ಬಸವೇಶ್ವರ ದೇವಸ್ಥಾನದಿಂದ ಮಹಿಳೆಯರ ಮಸ್ತಕದ ಮೇಲೆ ವಚನ ಹೊತ್ತಿಗೆ ಪುಸ್ತಕಗಳ ಮೆರವಣಿಗೆ ನಾಡಿನ ಗಮನ ಸೆಳೆಯಿತು. ಇದ ವೇಳೆ ಧರೆಗೆ ದೊಡ್ಡವರು ಕೋಡೆ ಕಲ್ಲು ಬಸವಣ್ಣ ಅಮರಜ್ಞಾನಪೀಠದ ಮಹಾದ್ವಾರ ಹಾಗೂ ನಾಮಫಲಕ ಅನಾವರಣ ಮಾಡಲಾಯಿತು. ಇದೇ ವೇಳೆ ಡೋಳ್ಳು, ಭಾಜಾ-ಭಜಂತ್ರಿ, ಚೌಡಕಿ ಮೇಳದ ತಂಡಗಳ ಮೆರವಣಿಗೆ ನೆರೆದ ಜನರ ಗಮನ ಸೆಳೆಯಿತು.