ಪತ್ರಿಕಾ ವಿತರಕ ಪ್ರಕಾಶ್‌ಗೆ ಹೊಸ ಸೈಕಲ್‌ ಕೊಡುಗೆ

KannadaprabhaNewsNetwork |  
Published : Nov 03, 2023, 12:31 AM IST
ಬೈಸಿಕಲ್ ಹಸ್ತಾಂತರ ಸಂದರ್ಭ | Kannada Prabha

ಸಾರಾಂಶ

ಕಳೆದ ಆರು ದಶಕಗಳಿಂದ ಕುಶಾಲನಗರದಲ್ಲಿ ಪತ್ರಿಕಾ ವಿತರಕರಾಗಿರುವ ವಿ.ಪಿ. ಪ್ರಕಾಶ್ ಅವರ ಸೈಕಲ್ ಇತ್ತೀಚೆಗೆ ಕಳವಾಗಿದ್ದು, ಇದರಿಂದ ಪತ್ರಿಕೆಗಳ ವಿತರಣೆಗೆ ಅನಾನುಕೂಲ ಉಂಟಾಗಿತ್ತು. ಇದನ್ನು ಮನಗಂಡ ಕುಶಾಲನಗರದ ಸಮಾಜಸೇವಕ ಕೆ.ಎಸ್‌. ಶಶಿಕುಮಾರ್ ಗೌಡ, ಕೆ.ಜಿ. ಮನು ಮತ್ತು ಸ್ನೇಹಿತರ ಬಳಗ ಸೇರಿ ಗುರುವಾರ ಬೆಳಗ್ಗೆ ಸೈಕಲ್ ನ್ನು ಪ್ರಕಾಶ್ ಗೆ ಹಸ್ತಾಂತರಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ ಸ್ಥಳೀಯ ಸ್ನೇಹಿತರ ಬಳಗದ ವತಿಯಿಂದ ಹಿರಿಯ ಪತ್ರಿಕಾ ವಿತರಕ ವಿ.ಪಿ. ಪ್ರಕಾಶ್ ಅವರಿಗೆ ನೂತನ ಬೈಸಿಕಲ್ ಕೊಡಗುೆ ನೀಡಲಾಗಿದೆ. ಕಳೆದ ಆರು ದಶಕಗಳಿಂದ ಕುಶಾಲನಗರದಲ್ಲಿ ಪತ್ರಿಕಾ ವಿತರಕರಾಗಿರುವ ವಿ.ಪಿ. ಪ್ರಕಾಶ್ ಅವರ ಸೈಕಲ್ ಇತ್ತೀಚೆಗೆ ಕಳವಾಗಿದ್ದು, ಇದರಿಂದ ಪತ್ರಿಕೆಗಳ ವಿತರಣೆಗೆ ಅನಾನುಕೂಲ ಉಂಟಾಗಿತ್ತು. ಇದನ್ನು ಮನಗಂಡ ಕುಶಾಲನಗರದ ಸಮಾಜಸೇವಕ ಕೆ.ಎಸ್‌. ಶಶಿಕುಮಾರ್ ಗೌಡ, ಕೆ.ಜಿ. ಮನು ಮತ್ತು ಸ್ನೇಹಿತರ ಬಳಗ ಸೇರಿ ಗುರುವಾರ ಬೆಳಗ್ಗೆ ಸೈಕಲ್ ನ್ನು ಪ್ರಕಾಶ್ ಗೆ ಹಸ್ತಾಂತರಿಸಿದರು. ಬಳಗದ ಪ್ರಮುಖರಾದ ಶಿವಾಜಿ, ಎಂ.ಡಿ. ಕೃಷ್ಣಪ್ಪ,ರವಿ, ಕೆ.ಎನ್‌. ದೇವರಾಜ, ಪ್ರಶಾಂತ್, ದಯಾನಂದ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್ ಇದ್ದರು. ಚಿತ್ರದಲ್ಲಿ- ಬೈಸಿಕಲ್ ಹಸ್ತಾಂತರ ಸಂದರ್ಭ

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ