ಕೊಪ್ಪಳ ನಗರಸಭೆ ಆಡಳಿತದಿಂದ ಹೊಸ ಪ್ರಯೋಗ
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳನಗರಸಭೆಗೆ ಸುತ್ತಾಡಿ ಸುತ್ತಾಡಿ ಸಾರ್ವಜನಿಕರಿಗೆ ಸುಸ್ತಾಗಿ ಹೋಗುತ್ತಿತ್ತು. ದಾಖಲೆ ಪಡೆಯಲು, ಟ್ಯಾಕ್ಸ್ ಪಾವತಿಸಲು ಸೇರಿದಂತೆ ಎಲ್ಲದಕ್ಕೂ ಯಾತನೆ ಅನುಭವಿಸುವುದು ಸಾಮಾನ್ಯವಾಗಿತ್ತು. ಆದರೆ, ಈಗ ಆಡಳಿತದಲ್ಲಿ ಕ್ಷೀಪ್ರ ಬದಲಾವಣೆ ಆಗಿದ್ದು, ನಗರಸಭೆಯ ಆಡಳಿತವೇ ನಾಗರೀಕರ ಮನೆ ಬಾಗಿಲಿಗೆ ಹೋಗುತ್ತಿದೆ. ಅಷ್ಟೇ ಅಲ್ಲ, ಅಂದೇ ಫಾರ್ಮ್ ನಂ. 3(ಇ ಸ್ವತ್ತು) ಪ್ರಮಾಣಪತ್ರ ಸಹ ನೀಡಲಾಗುತ್ತದೆ.
ಮೊದಲ ದಿನ ಯಶಸ್ವಿ:
ಮೂರು ವಾರ್ಡ್‌ಗಳ ನಾಗರಿಕರು ಅಲ್ಲಿಯೇ ತಮ್ಮ ಶುಲ್ಕ ಪಾವತಿ ಮಾಡಿ, ಫಾರ್ಮ್ ನಂ. 3 ಪಡೆಯುವುದು, ಇತರ ಅನುಮತಿ ಪಡೆದರೂ ಇದು ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
1ರಿಂದ 3ನೇ ವಾರ್ಡ್‌ಗಳ ಶಿಬಿರ ಸೋಮವಾರ ಶಿರಸಪ್ಪಯ್ಯನಮಠದ ಹತ್ತಿರ ನಡೆಯಿತು. 4ರಿಂದ 12 ವಾರ್ಡ್‌ಗಳ ಶಿಬಿರ ಸಾಲರಜಂಗ್ ಮಾರುಕಟ್ಟೆಯ ಬಳಿ ನ. 26ರಂದು, 5ರಿಂದ 9 ವಾರ್ಡ್‌ಗಳ ಶಿಬಿರ ಗಡಿಯಾರಕಂಬದ ಹತ್ತಿರ ನ. 27ರಂದು, 10ರಿಂದ 16 ವಾರ್ಡ್‌ಗಳ ಶಿಬಿರ ಪ್ಯಾಟಿ ಈಶ್ವರ ದೇವಸ್ಥಾನದ ಬಳಿ ನ.28ರಂದು, 17ರಿಂದ 20 ವಾರ್ಡ್‌ಗಳ ಶಿಬಿರ ಬಹಾರ್ ಪೇಟೆ ಶಾಲೆಯ ಹತ್ತಿರ ನ. 29ರಂದು, 21 ರಿಂದ 23 ವಾರ್ಡ್‌ಗಳ ಶಿಬಿರ ಮೈನಳ್ಳಿ ಗೌಡರ ಮನೆಯ ಹತ್ತಿರ ನ. 30ರಂದು, 24ರಿಂದ 26 ವಾರ್ಡ್‌ಗಳ ಶಿಬಿರ ಕಿನ್ನಾಳ ರಸ್ತೆಯ ಐಬಿ ಎದುರುಗಡೆ ಡಿ. 2 ರಂದು, 27ರಿಂದ 29 ವಾರ್ಡ್‌ಗಳ ಶಿಬಿರ ಬಸವೇಶ್ವರ ವೃತ್ತದ ಹತ್ತಿರ ಡಿ. 3ರಂದು, 30 ಮತ್ತು 31 ವಾರ್ಡ್‌ಗಳ ಶಿಬಿರ ಈಶ್ವರ ಪಾರ್ಕ್ ಹತ್ತಿರ ಡಿ. 4ರಂದು ಹಮ್ಮಿಕೊಳ್ಳಲಾಗಿದೆ.
ನೋಂದಾಯಿತಿ ಖರೀದಿ ಪತ್ರ, ಹಕ್ಕು ಪತ್ರ, ಖಾತಾ ನೋಂದಣಿ, ಬದಲಾವಣೆ ಪ್ರತಿ, ತೆರಿಗೆ ಪಾವತಿ ಪ್ರತಿ, ಮತದಾರರ ಗುರುತಿನ ಚೀಟಿ, ಭಾವಚಿತ್ರ, ಎನ್ ಎ ಪ್ರತಿ, ಕಟ್ಟಡ ಪರವಾನಿಗೆ ಸೇರಿದಂತೆ ಮೊದಲಾದ ದಾಖಲೆಗಳನ್ನು ಜೊತೆಯಲ್ಲಿ ತರಬೇಕು.