- ನಾಗರಾಜ್ ಮೆರ‍್ವಾಡೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಅಭಿಪ್ರಾಯ - - - ಕನ್ನಡಪ್ರಭ ವಾರ್ತೆ ಹರಿಹರ
ಸಮಾಜಮುಖಿ ವ್ಯಕ್ತಿ ಮರಣದ ನಂತರವೂ ಜನಮಾನಸದಲ್ಲಿ ಜೀವಂತವಾಗಿ ಇರುತ್ತಾರೆಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.ನಗರದ ದೇವಸ್ಥಾನ ರಸ್ತೆಯಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ (ಎಸ್‌ಎಸ್‌ಕೆ)ದಿಂದ ಸಮಾಜದ ಅಧ್ಯಕ್ಷರಾಗಿದ್ದ, ನಾಗರಾಜ್ ಎನ್. ಮೆರ‍್ವಾಡೆ ಅವರ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಗರಸಭಾ ಸದಸ್ಯ, ಕರ್ನಾಟಕ ರಕ್ಷಣಾ ವೇದಿಕೆ, ಎಸ್‌ಎಸ್‌ಕೆ ಸಮಾಜ ಮುಖಂಡರಾಗಿ ನಾಗರಾಜ್ ಅವರು ಮಾಡಿದ ಸೇವೆ ಸ್ಮರಣೀಯವಾಗಿವೆ. ನದಿ ಒಣಗಿ ನಗರದಲ್ಲಿ ನೀರಿನ ಅಭಾವ ಉಂಟಾದಾಗ ಸಹೋದರರೊಂದಿಗೆ ಸೇರಿ ಟ್ಯಾಂಕರ್‌ಗಳ ಮೂಲಕ ನಾಗರೀಕರಿಗೆ ಉಚಿತ ನೀರು ಸರಬರಾಜು ಮಾಡಿದ್ದು ಜನತೆ ಮರೆಯಲ್ಲ. ಅವರ ಸಾವು ಸಮಾಜ ಹಾಗೂ ನಗರದ ಜನತೆಗೆ ನಷ್ಟ ಉಂಟುಮಾಡಿದೆ ಎಂದರು.ಸಾನಿಧ್ಯವಹಿಸಿದ್ದ ಅವರಗೊಳ್ಳ ಮಠದ ಓಂಕಾರ ಶಿವಾಚಾರ್ಯ ಶ್ರೀ ಮಾತನಾಡಿ, ಸಾಮಾಜಿಕ ಚಟುವಟಿಕೆಗಳ ಜೊತೆಗೆ ಅಧ್ಯಾತ್ಮಿಕ ಕ್ಷೇತ್ರದಲ್ಲೂ ನಾಗರಾಜ್ ಅವರ ಸೇವೆ ಸ್ಮರಣೀಯವಾಗಿದೆ. ವಿದ್ಯಾನಗರದಲ್ಲಿ ಐರಣಿ ಹೊಳೆ ಮಠದ ಶಾಖಾ ಮಠ, ದೇವಸ್ಥಾನ, ಸಮುದಾಯ ಭವನ, ಶಾಲೆ ನಿರ್ಮಾಣದಲ್ಲಿ ಅವರು ಸಾಕಷ್ಟು ಶ್ರಮಿಸಿದ್ದರು. ಎಲ್ಲ ಸಮುದಾಯದವರ ಪ್ರೀತಿ ಗಳಿಸಿದ್ದ ನಾಗರಾಜ್ ಅವರ ಅಕಾಲಿಕ ಸಾವು ಆಘಾತ ಮೂಡಿಸಿದೆ ಎಂದು ಹೇಳಿದರು.
ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಶ್ರೀ, ತಪೋವನ ಸಂಸ್ಥೆ ಮುಖ್ಯಸ್ಥ ಶಶಿಕುಮಾರ್, ವರ್ತಕ ಕೃಷ್ಣಸಾ ಭೂತೆ, ಬಿಜೆಪಿ ಮುಖಂಡ ತುಳಜಪ್ಪ ಭೂತೆ, ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ಮೋಹನ ಕಿರೋಜಿ, ಅಂಬಾಸಾ ಮೆರ‍್ವಾಡೆ, ಶಾಂತಾಬಾಯಿ ಮೆರ‍್ವಾಡೆ, ಗಣೇಶ ಮೆರ‍್ವಾಡೆ, ಮೈಸೂರು ದತ್ತುಸಾ ರಾಜೊಳ್ಳಿ, ಮೈಲಾರ ನಿಂಗಸಾ, ಪರಶುರಾಮ್ ಕಾಟ್ವೆ, ಅಶೋಕ ಭೂತೆ, ಕೃಷ್ಣ ಪಿ. ರಾಜೊಳ್ಳಿ, ಮೋತಿಲಾಲ್ ಕಿರೋಜಿ, ಶ್ರೀಕಾಂತ್ ಮೆರ‍್ವಾಡೆ, ರಾಜು ಪೂಜಾರಿ, ಶ್ರೀಪಾದ ಇದ್ದರು.- - - -೭ಎಚ್‌ಆರ್‌ಆರ್೨:
ಹರಿಹರದಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ (ಎಸ್‌ಎಸ್‌ಕೆ)ದಿಂದ ಸಮಾಜದ ಅಧ್ಯಕ್ಷರಾಗಿದ್ದ, ನಾಗರಾಜ್ ಎನ್. ಮೆರ‍್ವಾಡೆ ಅವರ ಶ್ರದ್ಧಾಂಜಲಿ, ನುಡಿನಮನ ಕಾರ್ಯಕ್ರಮದಲ್ಲಿ ಬಿ.ಪಿ.ಹರೀಶ್ ಮಾತನಾಡಿದರು.