ಸತ್ಯವನ್ನು ಎತ್ತಿ ತೋರುವ ಛಾಯಾಚಿತ್ರ : ರಾಜಶೇಖರ

KannadaprabhaNewsNetwork |  
Published : Aug 28, 2026, 01:30 AM IST
ಫೋಟೊ:೨೭ಕೆಪಿಸೊರಬ-೦೨ : ಸೊರಬ ಪಟ್ಟಣದ ಶ್ರೀ ರಂಗ ಕನ್ವೆನ್ಷನ್ ಹಾಲ್ ನಲ್ಲಿ ತಾಲೂಕು ಛಾಯಾಚಿತ್ರಗ್ರಾಹಕ ಸಂಘದಿAದ ಹಮ್ಮಿಕೊಂಡ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮವನ್ನು ತಾಲೂಕು ದೀವರ ಸಂಘದ ಅಧ್ಯಕ್ಷ ಓ.ಬಿ. ರಾಜಶೇಖರಪ್ಪ ಕೆರೆಕೊಪ್ಪ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಮಾಜದಲ್ಲಿ ಸತ್ಯವನ್ನು ಎತ್ತಿ ತೋರುವಲ್ಲಿ ಹಾಗೂ ನ್ಯಾಯಾಲಯಗಳಲ್ಲಿ ನ್ಯಾಯ ವಿತರಣೆಯ ಸಂದರ್ಭದಲ್ಲಿಯೂ ಛಾಯಾಚಿತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ದೀವರ ಸಾಂಸ್ಕೃತಿಕ ಅಧ್ಯಯನ ಸಂಸ್ಥೆ ತಾಲೂಕು ಅಧ್ಯಕ್ಷ ಓ.ಬಿ. ರಾಜಶೇಖರಪ್ಪ ಕೆರೆಕೊಪ್ಪ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಸೊರಬ

ಸಮಾಜದಲ್ಲಿ ಸತ್ಯವನ್ನು ಎತ್ತಿ ತೋರುವಲ್ಲಿ ಹಾಗೂ ನ್ಯಾಯಾಲಯಗಳಲ್ಲಿ ನ್ಯಾಯ ವಿತರಣೆಯ ಸಂದರ್ಭದಲ್ಲಿಯೂ ಛಾಯಾಚಿತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ದೀವರ ಸಾಂಸ್ಕೃತಿಕ ಅಧ್ಯಯನ ಸಂಸ್ಥೆ ತಾಲೂಕು ಅಧ್ಯಕ್ಷ ಓ.ಬಿ. ರಾಜಶೇಖರಪ್ಪ ಕೆರೆಕೊಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ರಂಗ ಕನ್ವೆನ್ಷನ್ ಹಾಲ್ ನಲ್ಲಿ ಬುಧವಾರ ಸಂಜೆ ತಾಲೂಕು ಛಾಯಾಚಿತ್ರಗ್ರಾಹಕ ಸಂಘದಿಂದ ಹಮ್ಮಿಕೊಂಡ 187ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಪ್ಪು-ಬಿಳುಪಿನಿಂದ ಆರಂಭವಾದ ಛಾಯಚಿತ್ರ ವರ್ಣಮಯವಾಗಿ, ಪ್ರಸ್ತುತ ಡಿಜಿಟಲ್‌ಮಯವಾಗಿದೆ. ಛಾಯಚಿತ್ರದ ಮೂಲಕವೇ ಅನೇಕರು ಬದುಕನ್ನು ಕಟ್ಟಿಕೊಂಡಿದ್ದಾರೆ. ಸಂಘದ ಸದಸ್ಯರು ರಾಜಕೀಯೇತರವಾಗಿ ಸಂಘವನ್ನು ಮೇಲೆತ್ತುವ ಕಾರ್ಯ ಮಾಡಬೇಕಿದೆ. ಜತೆಗೆ, ಛಾಯಾಚಿತ್ರಗ್ರಾಹಕರನ್ನು ಸಮಾಜ ಗೌರವಯುತವಾಗಿ ಕಾಣಬೇಕು. ಛಾಯಾಗ್ರಾಹಕರ ಪ್ರಮುಖ ಬೇಡಿಕೆಯಾದ ಛಾಯಾಚಿತ್ರ ಸಭಾಭವನ ನಿರ್ಮಾಣದ ಕುರಿತು ಸಚಿವ ಎಸ್. ಮಧುಬಂಗಾರಪ್ಪ ಅವರ ಗಮನಕ್ಕೆ ತರಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಸಂಘದ ಸಂಸ್ಥಾಪಕ ಅಧ್ಯಕ್ಷ ಲೋಕೇಶ್ ಪ್ರಸ್ತಾವನೆಗೈದು, ತಾಲೂಕಿನಲ್ಲಿ ನೂರಕ್ಕೂ ಅಧಿಕ ಛಾಯಾಚಿತ್ರಗ್ರಾಹಕರು ಛಾಯಚಿತ್ರದ ಮೂಲಕವೇ ಜೀವನ ಸಾಗಿಸುತ್ತಿದ್ದಾರೆ. ತಾಲೂಕಿನಲ್ಲಿ 2012 ರಲ್ಲಿ ಆರಂಭವಾದ ಸಂಘವು ಸದಾ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಛಾಯಾಚಿತ್ರ ಭವನ ನಿರ್ಮಾಣ ಮಾಡಬೇಕು ಎಂಬುದು ಬಹುದಿನದ ಬೇಡಿಕೆ. ಈ ಬಗ್ಗೆ ಮನವಿ ಸಲ್ಲಿಸಿ, ನಿವೇಶನವನ್ನು ಸಹ ಗುರುತಿಸಲಾಗಿತ್ತು. ಆದರೆ, ಅದು ನನೆಗುದಿಗೆ ಬಿದ್ದಿದೆ. ಶೀಘ್ರದಲ್ಲಿ ಸಚಿವರನ್ನು ಭೇಟಿಯಾಗಿ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಸಂಘದ ಅಧ್ಯಕ್ಷ ಈಶ್ವಪ್ಪ ಬಿ. ಕೆರೆಕೊಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಛಾಯಾಚಿತ್ರಗ್ರಾಹಕರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಜತೆಗೆ ಮೊಬೈಲ್ ಹಾವಳಿಯಿಂದ ಸಮರ್ಪಕವಾಗಿಯೂ ಕೆಲಸ ದೊರೆಯುತ್ತಿಲ್ಲ. ಅನೇಕ ಛಾಯಾಚಿತ್ರಗ್ರಾಹಕರು ಸ್ವಂತ ಸೂರು ಇಲ್ಲದೇ, ಸ್ಪರ್ಧಾತ್ಮಕ ಯುಗದಲ್ಲಿ ಬದುಕು ಸಾಗಿಸುವುದೇ ದುಸ್ತರವಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರ್ಕಾರ ಗಮನ ಹರಿಸಿ, ನಿವೇಶನಗಳನ್ನು ಹಂಚಿಕೆ ಮಾಡಿದರೆ ಅನುಕೂಲವಾಗುತ್ತದೆ ಎಂದರು.

ಹಿರಿಯ ಛಾಯಾಚಿತ್ರಗ್ರಾಹಕರಾದ ಎಂ.ಕೆ. ಬಸಪ್ಪ ಕೊಡಕಣಿ, ಪ್ರಕಾಶ್ ಗೌಡ ಜಡೆ, ದಿವಾಕರ ಆನವಟ್ಟಿ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಬಾಬು ಮೈಸೂರು ಅವರಿಂದ ಒಂದು ದಿನದ ಛಾಯಾಗ್ರಹಣ ಕಾರ್ಯಾಗಾರ ನಡೆಯಿತು.

ದಂತ ವೈದ್ಯ ಡಾ.ಅಮೋಘ ವರ್ಷ, ಸಂಘದ ಜಿಲ್ಲಾಧ್ಯಕ್ಷ ಕೆ.ಟಿ. ಶ್ರೀನಿವಾಸ್, ತಾಲೂಕು ಗೌರವಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಮುಖ್ಯಶಿಕ್ಷಕ ಹಾಲೇಶ್ ನವುಲೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಜಿ.ಎಂ. ತೋಟಪ್ಪ, ಷಣ್ಮುಖ ಸಾಗರ, ಮೋಹನ ಶಿವಮೊಗ್ಗ, ಪಾರುಸ್ವಾಮಿ ಶಿಕಾರಿಪುರ, ಶಿರೀಷ ಸಿದ್ದಾಪುರ, ಶಿವಕುಮಾರ ಶಿರಾಳಕೊಪ್ಪ, ಹಸೆ ಚಿತ್ತಾರ ಕಲಾವಿದ ಎಚ್. ವಿಶ್ವನಾಥ ಹೆಚ್ಚೆ, ದಯಾನಂದ್, ರಾಜೀವ್, ಅಣ್ಣಪ್ಪ, ತ್ಯಾಗರಾಜ್, ಪ್ರಶಾಂತ, ಶರತ್, ಗಿರೀಶ್, ಸಂತೋಷ್ ಸೇರಿದಂತೆ ಇತರರಿದ್ದರು. ರೂಪಾ ಮಧುಕೇಶ್ವರ ಪ್ರಾರ್ಥಿಸಿದರು. ಪ್ರಸನ್ನ ಸ್ವಾಗತಿಸಿದರು. ಕುಸುಮಾ ಇಂಡುವಳ್ಳಿ ವಂದಿಸಿದರು. ಮೋಹನ್ ಸುರಭಿ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತ್ಯಾವರೆಕೊಪ್ಪಕ್ಕೆ ತೋಳ ಬಂದ್ವು ತೋಳ
ಮಕ್ಕಳ ರಕ್ಷಣೆಗಾಗಿ ನದಿಗೆ ಹಾರಿದ ಮಹಿಳೆ