ಓಕಳಿ ಬಂಡೆಯಲ್ಲಿ ಆಂಜನೇಯ ಭಾವಚಿತ್ರ ಮತ್ತು ಬಸವ ಜಯಂತಿ ನಿಮಿತ್ತ ಜೋಡು ಎತ್ತುಗಳ ಮೆರವಣಿಗೆ ಬುಧವಾರ ಅದ್ಧೂರಿಯಗಿ ನಡೆಯಿತು.
ಡಂಬಳ: ಓಕಳಿ ಬಂಡೆಯಲ್ಲಿ ಆಂಜನೇಯ ಭಾವಚಿತ್ರ ಮತ್ತು ಬಸವ ಜಯಂತಿ ನಿಮಿತ್ತ ಜೋಡು ಎತ್ತುಗಳ ಮೆರವಣಿಗೆ ಬುಧವಾರ ಅದ್ಧೂರಿಯಗಿ ನಡೆಯಿತು.
ಡಂಬಳ ಗ್ರಾಮದ ಯುವಕರ ಆಶ್ರಯದಲ್ಲಿ ನಡೆದ ಮೆರವಣಿಗೆಯಲ್ಲಿ ಗ್ರಾಮದ ರೈತರು ತಮ್ಮ ಜೋಡೆತ್ತುಗಳ ಮೆರವಣಿಗೆ ಮಾಡಿದರು.
ರೈತರು ಎತ್ತು, ಹೋರಿ, ಆಕಳುಗಳಿಗೆ ಸಿಂಗರಿಸಿ, ಕೊರಳಿಗೆ ಹುರಿಗೆಜ್ಜೆ, ಕಿರುಗಂಟೆಗಳ ಸರ ಹಾಕಿ ಸಿಂಗರಿಸಿದ್ದರು. ಗಳೆ, ನೊಗ, ಗಾಡಿ, ಹಗ್ಗ, ಪಲಗ, ದಿಂಡು ಮಂತಾದ ಕೃಷಿ ಸಲಕರಣೆಗಳನ್ನು ಸಜ್ಜುಗೊಳಿಸಿ ಪೂಜೆ ಮಾಡಿದರು.
ರೈತರು ಉತ್ಸಾಹದಿಂದ ಹೊಲ ಗದ್ದೆಗಳಿಗೆ ತೆರಳಿ ನಸುಕಿನ ಜಾವದಲ್ಲಿಯೇ ಎತ್ತು, ಗೋವುಗಳಿಗೆ ಸ್ನಾನ ಮಾಡಿಸಿಕೊಂಡು ಊರ ಹೊರಗಡೆ ಎತ್ತುಗಳಿಗೆ ಮತಾಟಿ, ಮಗಡಾ, ಹಣಿಕಟ್ಟು, ಗೊಂಡ್ಯಾ, ಕೊರಳ ಪಟ್ಟಿ, ಮಿಂಚು ಪಟ್ಟಿ ಸೇರಿದಂತೆ ವಿವಿಧ ವರ್ಣರಂಜಿತ ಹಗ್ಗದ ವಸ್ತುಗಳಿಂದ ಸಿಂಗಾರ ಮಾಡಿ ವಿವಿಧ ವಾಧ್ಯಗಳೋಂದಿಗೆ ಮೆರವಣಿಗೆ ಮಾಡಿಕೊಂಡು ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗ್ರಾಮದ ಆರಾಧ್ಯ ದೇವರಾದ ಆಂಜನಯ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.