ಕನ್ನಡಪ್ರಭ ವಾರ್ತೆ ಮೈಸೂರು
ಅನುದಾನಿತ ಉಪನ್ಯಾಸಕರ ನಿಯೋಜನೆ ಸಮಸ್ಯೆ, ಪಿಂಚಣಿ ಸಮಸ್ಯೆ, ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜುಗಳಿಗೆ ಭರ್ತಿ ಹೊಂದಿರುವ ಉಪನ್ಯಾಸಕರ ಕಾಲಮಿತಿ ವೇತನ ಬಡ್ತಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ತಿನ ಸದಸ್ಯರ ಗಮನ ಸೆಳೆಯಲಾಯಿತು. ಈ ಸಮಸ್ಯೆಗಳಿಗೆ ಸ್ಪಂದಿಸಿದ ಮಾನ್ಯ ವಿಧಾನ ಪರಿಷತ್ ಸದಸ್ಯರು ಸದನದಲ್ಲಿ ಈ ವಿಷಯಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸುವುದಾಗಿ ಭರವಸೆ ನೀಡಿದರು.
ಮೈಸೂರಿನ ವಿವಿಧ ತಾಲೂಕುಗಳಿಂದ ಉಪನ್ಯಾಸಕರ ಪ್ರತಿನಿಧಿಯಾಗಿ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿರುವ ಮುರುಳಿ, ಪೂರ್ಣಿಮ, ನಂದೀಶ್ಕುಮಾರ್, ಡಾ.ಟಿ.ಕೆ. ರವಿ, ಮಹೇಶ್, ರಾಮಕೃಷ್ಣೇಗೌಡ ಅವರು ವಿಧಾನ ಪರಿಷತ್ ಸದಸ್ಯರಾದ ಕೆ ವಿವೇಕಾನಂದ ಅವರನ್ನು ಸನ್ಮಾನಿಸಿದರು.ಮೈಸೂರು ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎಂ.ಎಂ. ಮಹದೇವ, ಖಜಾಂಚಿ ಜಿ.ಬಿ. ಮಹೇಶ್, ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಎಂ.ಸಿ. ಗಿರೀಶ್, ಎಂ. ಮಹೇಶ್, ಪಿ.ಎಲ್. ಶಿವಕುಮಾರ್, ವಿನೇಶ್, ಪ್ರಸನ್ನ, ಆಲೂರು ಬಸವರಾಜು, ಹೇಮಚಂದ್ರ, ಅಶ್ವಿನಿ, ಹೇಮಾವತಿ, ಸುಮಂಗಳ ಹಕ್ಕಿ, ದಕ್ಷಿಣಮೂರ್ತಿ ಹಾಗೂ ಪ್ರಮುಖರು ಇದ್ದರು.