ಮಹದಾಯಿ ಜಾರಿಗೆ ಒತ್ತಾಯಿಸಿ ಕರವೇ ಅಧ್ಯಕ್ಷರಿಗೆ ಮನವಿ

KannadaprabhaNewsNetwork |  
Published : Dec 12, 2024, 12:32 AM IST
(9ಎನ್.ಆರ್.ಡಿ3 ಕರವೇ ಕಾರ್ಯಕರ್ತರು ಮಹದಾಯಿ ಯೋಜನೆ ಜಾರಿಗೆ ಸರ್ಕಾರದ ಮೇಲೆ  ಒತ್ತಡ ಹಾಕಬೇಕೆಂದು ಕರವೇ ಅಧ್ಯಕ್ಷರಗೆ ಮನವಿ ನೀಡುತ್ತಿದ್ದಾರೆ.)    | Kannada Prabha

ಸಾರಾಂಶ

ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಮಾಡಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಕರವೇ ತಾಲೂಕು ಕರವೇ ರಾಜ್ಯಾಧ್ಯಕ್ಷ ಟಿ. ನಾರಾಯಣಗೌಡ ಅವರಿಗೆ ನರಗುಂದ ಕರವೇ ಕಾರ್ಯಕರ್ತರು ನರಗುಂದದಲ್ಲಿ ಮನವಿ ಸಲ್ಲಿಸಿದರು.

ನರಗುಂದ: ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಮಾಡಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಕರವೇ ತಾಲೂಕು ಕರವೇ ರಾಜ್ಯಾಧ್ಯಕ್ಷ ಟಿ. ನಾರಾಯಣಗೌಡ್ರಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಹುಬ್ಬಳ್ಳಿಯಿಂದ ಬಾಗಲಕೋಟೆಗೆ ಕರವೇ ರಾಜ್ಯಾಧ್ಯಕ್ಷ ಟಿ. ನಾರಾಯಣಗೌಡ್ರ ಇತ್ತೀಚೆಗೆ ತೆರಳುವಾಗ ತಾಲೂಕು ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಕನ್ನಡಪರ ಸಂಘಟನೆ ಮುಖಂಡ ರಾಘವೇಂದ್ರ ಗುಜಮಾಗಡಿ, ಉತ್ತರ ಕರ್ನಾಟಕ ಭಾಗದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತ ಸಮುದಾಯದ ಬಹುದಿನದ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಮಾಡಬೇಕು ಎಂದು ಕಳೆದ 10 ವರ್ಷದಿಂದ ಬಂಡಾಯದ ನೆಲದ ರೈತರು ನಿರಂತರ ಹೋರಾಟ ಮಾಡಿದರೂ ಆಳುವ ಸರ್ಕಾರ ಯೋಜನೆ ಜಾರಿ ಮಾಡದೇ ಅನ್ಯಾಯ ಮಾಡುತ್ತಿದೆ. ಆದರಿಂದ ಕರವೇ ರಾಜ್ಯಾಧ್ಯಕ್ಷ ಟಿ. ನಾರಾಯಣಗೌಡ್ರ ಈ ಬೆಳಗಾವಿ ಅಧಿವೇಶದಲ್ಲಿ ಯೋಜನೆ ಬಗ್ಗೆ ಚರ್ಚಿಸಲು ಉಭಯ ಸರ್ಕಾರಗಳ ಮೇಲೆ ಒತ್ತಡ ಹಾಕಬೇಕು ಎಂದು ಮನವಿ ಮಾಡಿದರು.

ಕರವೇ ರಾಜ್ಯಾಧ್ಯಕ್ಷ ಟಿ. ನಾರಾಯಣಗೌಡ್ರ ಮನವಿ ಸ್ವೀಕರಿಸಿ, ಈ ಭಾಗದ ರೈತರ ಬಹುದಿನ ಬೇಡಿಕೆ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಮಾಡಬೇಕೆಂದು ಈ ಹಿಂದೆ ನಾವು ರಾಜ್ಯ ಬಂದ ಕರೆ ನೀಡಿ ಹೋರಾಟ ಮಾಡಿದ್ದೇವೆ. ಆದರೆ ಸರ್ಕಾರಗಳು ಈ ಯೋಜನೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಯೋಜನೆ ಜಾರಿ ಮಾಡುತ್ತಿಲ್ಲ ಎಂದರು.

ಕರವೇ ತಾಲೂಕಾಧ್ಯಕ್ಷ ನಬಿಸಾಬ್‌ ಕಿಲ್ಲೇದಾರ, ಸದಸ್ಯರಾದ ಮಾಲಾ ಪಾಟೀಲ, ಮಾದೇವ ಆಸೆದಾರ, ವಿಜಯ ಬಡಿಗೇರ, ಮುತ್ತು ಸುರಕೋಡ, ಇದ್ಮಾಯಿಲ ಹಜರತನ್ನವರ, ಸಲೀಂ ಕರಮನಿ, ಹನುಮಂತ ಬಳ್ಳಿ, ರಜಾಕ ಬಳಿಗಾರ, ಯಶವಂತ ಚಲವಾದಿ, ಮುಲ್ಲಾ, ಪಠಾಣ ಇದ್ದರು.

PREV

Recommended Stories

ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ
ಧರ್ಮಸ್ಥಳ ಕಾಡಲ್ಲಿ ಅಸ್ಥಿಪಂಜರ: ಇದು ದೂರುದಾರ ತೋರಿಸಿದ್ದಲ್ಲ