ಕನ್ನಡಪ್ರಭ ವಾರ್ತೆ ಭದ್ರಾವತಿ
ಅವರು ನಗರದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಸಂಸ್ಥಾಪಕರ ದಿನ ಮತ್ತು ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ, ‘ಮೈಸೂರು ಸುತ್ತೂರು ಮಹಾ ಸಂಸ್ಥಾನದ ಪರಮಪೂಜ್ಯ ಲಿಂಗೈಕ್ಯ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ವ್ಯಕ್ತಿತ್ವ ಮತ್ತು ಕೊಡುಗೆಗಳು’ಎಂಬ ವಿಷಯ ಕುರಿತು ಮಾತನಾಡಿದರು.
ಶಿಕ್ಷಣ ಎಂಬುದು ಕೇವಲ ಉದ್ಯೋಗ, ವ್ಯವಹಾರ ಆಧಾರಿತ ಎಂಬುದಕ್ಕೆ ಮಾತ್ರ ಸೀಮಿತವಾಗದೆ, ನೈತಿಕ ಕೌಶಲ್ಯಭರಿತ ಸ್ವತಃ ಅಭಿವೃದ್ಧಿಯನ್ನು ಶಿಕ್ಷಣ ನೀಡುವುದರ ಮೂಲಕ ಎಲ್ಲರ ಸರ್ವತೋಮುಖ ಅಭಿವೃದ್ಧಿ ಆಗಬೇಕು. ಮಾನವೀಯತೆಯನ್ನು ಭೋದಿಸದ ಶಿಕ್ಷಣ ನಮಗೆ ಅಗತ್ಯವಿಲ್ಲ ಎಂಬ ಮಹತ್ತರವಾದ ಉದ್ದೇಶದೊಂದಿಗೆ ಸರ್ಕಾರದ ವತಿಯಿಂದ ಸಾಧ್ಯವಾಗದ ಅನೇಕ ಕಾರ್ಯಗಳನ್ನು ತಮ್ಮ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ದಕ್ಷಿಣ ಕರ್ನಾಟಕದಲ್ಲಿ ಸಾಮಾಜಿಕ ಕ್ರಾಂತಿ ಯನ್ನುಂಟು ಮಾಡುವ ಮೂಲಕ ಮಾದರಿ ಮಠವನ್ನಾಗಿಸಿದರು ಎಂದರು.ಗೆಲುವು ಎಲ್ಲರಿಗೂ ಸಿಗುವುದಿಲ್ಲ. ಆದರೆ ಗೆಲ್ಲುವ ಸಾಮರ್ಥ್ಯ ಎಲ್ಲರಿಗೂ ಸಿಗುತ್ತದೆ. ಇದಕ್ಕೆ ದೃಢ ನಿಶ್ಚಯ, ಪ್ರಾಮಾಣಿಕತೆ, ನಿಷ್ಠೆಗಳು ಬಹು ಮುಖ್ಯವಾಗಿ ಬೇಕಾಗುತ್ತದೆ. ಇಂತಹ ಸಂಗತಿಗಳೊಂದಿಗೆ ತಾವು ಕಂಡ ಕನಸನ್ನು ನನಸು ಮಾಡುವವರೇ ನಿಜವಾದ ಕ್ರಾಂತಿಕಾರಿಗಳು ಎಂದು ಆ ರೀತಿ ಬದುಕಿ ಸಮಾಜಕ್ಕೆ ಬೆಳಕಾಗಿ ಮಾರ್ಗದರ್ಶಕರಾದರು ಎಂದರು.
ಕದಳಿ ವೇದಿಕೆ ಸದಸ್ಯರಿಂದ ವಚನ ಗಾಯನ ನಡೆಯಿತು. ವಿ.ರಾಜಶೇಖರಪ್ಪ ಸ್ವಾಗತಿಸಿ, ನಂದಿನಿ ಮಲ್ಲಿಕಾರ್ಜುನ್ ಕಾರ್ಯಕ್ರಮ ನಿರೂಪಿಸಿ, ಕತ್ತಲಗೆರೆ ತಿಮ್ಮಪ್ಪ ವಂದಿಸಿದರು.