ಎ.ಎಸ್‌. ಶ್ರೀಜಾಗೆ ಜಿಲ್ಲಾಮಟ್ಟದ ಬಾಲ ವಿಜ್ಞಾನಿ ಪ್ರಶಸ್ತಿ

KannadaprabhaNewsNetwork |  
Published : Dec 24, 2023, 01:45 AM IST
ಚಿತ್ರ: 23ಎಂಡಿಕೆ3 : ಕೊಡಗರಹಳ್ಳಿ  ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀಜಾ ಗೆ  ಜಿಲ್ಲಾಮಟ್ಟದಬಾಲ ವಿಜ್ಞಾನಿ ಪ್ರಶಸ್ತಿ ವಿತರಿಸಲಾಯಿತು.  | Kannada Prabha

ಸಾರಾಂಶ

ಮಡಿಕೇರಿಯಲ್ಲಿ ಜಿಲ್ಲಾಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಬಾಳ ವಿಜ್ಞಾನಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯಮಟ್ಟದ ವಿಜ್ಞಾನ ಸಮಾವೇಶಕ್ಕೆ ಕೊಡಗು ಜಿಲ್ಲಾಮಟ್ಟದಿಂದ ಎಂಟು ಮಂದಿ ಕಿರಿಯ ವಿಜ್ಞಾನಿಗಳು ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

‘ಯೋಗಕ್ಷೇಮಕ್ಕಾಗಿ ಜೀವಿ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳೋಣ’ ಎಂಬ ಕೇಂದ್ರ ವಿಷಯದಡಿ ಮಡಿಕೇರಿ ನಗರದ ಕೊಡಗು ವಿದ್ಯಾಲಯ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಕೊಡಗು ಜಿಲ್ಲಾಮಟ್ಟದ 31ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಆಯೋಜಿಸಿತ್ತು. ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ( ಎನ್.ಸಿ.ಎಸ್.ಟಿ.ಸಿ.), ಮಡಿಕೇರಿ ನಗರದ ಕೊಡಗು ವಿದ್ಯಾಲಯದಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.‘ಕಲುಷಿತಗೊಳ್ಳುತ್ತಿರುವ ನದಿಯ ತೀರಗಳು’ ಎಂಬ ವಿಷಯದ ಕುರಿತು ಉತ್ತಮವಾಗಿ ವೈಜ್ಞಾನಿಕ ಯೋಜನಾ ಪ್ರಬಂಧ ಮಂಡಿಸಿದ ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ ಸುಂಟಿಕೊಪ್ಪನಾಡು ಪ್ರೌಢಶಾಲೆಯ ವಿದ್ಯಾರ್ಥಿನಿ ಎ.ಎಸ್.ಶ್ರೀಜಾಗೆ ಬಾಲ ವಿಜ್ಞಾನಿ ಪ್ರಶಸ್ತಿ ಲಭಿಸಿದೆ.

ಜನವರಿ ಮೊದಲ ವಾರ ಕೊಪ್ಪಳ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ ವಿಜ್ಞಾನ ಸಮಾವೇಶಕ್ಕೆ ಕೊಡಗು ಜಿಲ್ಲಾಮಟ್ಟದಿಂದ ಎಂಟು ಮಂದಿ ಕಿರಿಯ ವಿಜ್ಞಾನಿಗಳು ಆಯ್ಕೆಯಾಗಿದ್ದಾರೆ. ನಗರ ಕಿರಿಯ ವಿಭಾಗ: ಮಡಿಕೇರಿ ನಗರದ ಕೊಡಗು ವಿದ್ಯಾಲಯದ ಶ್ರೀಯ ಕಿರಣ್ ಮತ್ತು ಶ್ಲೋಕ್ ಅಯ್ಯಪ್ಪ (ಜೇನು ಕೃಷಿಯ ಮಹತ್ವ : ಮಾರ್ಗದರ್ಶಿ ಶಿಕ್ಷಕಿ ಎಂ.ಎಸ್. ಶ್ರುತಿ ), ಇದೇ ಶಾಲೆಯ ಎಂ.ಪಿ.ಯಾಶಿಕ ಶೆಟ್ಟಿ ಮತ್ತು ಯಶ್ ಕಾರಿಯಪ್ಪ ( ಪರಿಸರ ವ್ಯವಸ್ಥೆಯಲ್ಲಿ ಏಡಿಗಳ ಕ್ಷೀಣಿಸುವಿಕೆ : ಮಾರ್ಗದರ್ಶಿ ಶಿಕ್ಷಕಿ : ಟಿ.ಜಯಶ್ರೀ). ಗ್ರಾಮಾಂತರ ಕಿರಿಯ ವಿಭಾಗ: ಕೊಡಗರಹಳ್ಳಿ ಸುಂಟಿಕೊಪ್ಪನಾಡು ಪ್ರೌಢಶಾಲೆಯ ಎ.ಎಸ್. ಶ್ರೀಜಾ ಮತ್ತು ಟಿ.ಎಸ್. ಶೃಜನ್ಯ ( ಕಲುಷಿತಗೊಳ್ಳುತ್ತಿರುವ ನದಿ ತೀರಗಳು : ಮಾರ್ಗದರ್ಶಿ ಶಿಕ್ಷಕಿ : ಎಂ.ಟಿ.ಶೋಭಾದಾಸ್) ಪೊನ್ನಂಪೇಟೆ ಬಳಿಯ ಕಿರಗೂರು ಸರ್ಕಾರಿ ಪ್ರೌಢಶಾಲೆಯ ಎಚ್.ಬಿ. ಶ್ರೇಯಸ್ ಮತ್ತು ವೈ.ಆರ್. ಕೃತಿಕ್ ( ಮಾರಕವಾದ ಪ್ಲಾಸ್ಟಿಕ್ - ಪುನರ್ ಬಳಕೆ ಹಾದಿಯಲ್ಲಿ , ಮಾರ್ಗದರ್ಶಿ ಶಿಕ್ಷಕಿ : ಎಂ.ಎ.ಶ್ರೀಜ)

ಗ್ರಾಮಾಂತರ ಹಿರಿಯ ವಿಭಾಗ : ಸುಂಟಿಕೊಪ್ಪ ಬಳಿಯ ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ ಬಿ.ಆರ್.ಚೇತನ್ ಮತ್ತು ಎ.ಅಫ್ರಿನಾ ( ವನ್ಯಜೀವಿಗಳು ಮತ್ತು ಮಾನವ ಸಂಘರ್ಷ : ಕಾಡಾನೆಗಳ ಸುಳಿಯಲ್ಲಿ ರೈತಾಪಿ ಜನ: ಮಾರ್ಗದರ್ಶಿ ಶಿಕ್ಷಕಿ : ಟಿ.ವಿ.ಶೈಲಾ), ತೊರೆನೂರು ಸರ್ಕಾರಿ ಪ್ರೌಢಶಾಲೆಯ ಟಿ.ಎ.ಪುಷ್ಪ ಮತ್ತು ಎ.ಆರ್.ಪೂರ್ವಿಕ ( ಸೊಳ್ಳೆಗಳ ಚೆಲ್ಲಾಟ - ಜನರಿಗೆ ಪ್ರಾಣ ಸಂಕಟ, ಮಾರ್ಗದರ್ಶಿ ಶಿಕ್ಷಕಿ : ಬಿ.ಪಿ.ಸವಿತ), ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಬೋರಮ್ಮ ಮತ್ತು ಕೆ.ವಿ.ಇಶ್ರತ್ ( ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಿ ಆರೋಗ್ಯ ಕಾಪಾಡಿ :ಮಾರ್ಗದರ್ಶಿ ಶಿಕ್ಷಕಿ : ಬಿ.ಡಿ.ರಮ್ಯ). ನಗರ ಹಿರಿಯ ವಿಭಾಗ : ಮಡಿಕೇರಿ ನಗರದ ಕೊಡಗು ವಿದ್ಯಾಲಯದ ಪಿ.ವಿ.ಲಕ್ಷ್ಯ ಮತ್ತು ಎಂ.ಭವಿಷ್ಯ ( ವನ್ಯಜೀವಿಗಳು ಮತ್ತು ಮಾನವನ ನಡುವಿನ ಸಂಘರ್ಷ - ಬದುಕಿ ಮತ್ತು ನಮ್ಮನ್ನು ಬದುಕಲು ಬಿಡಿ - ಆನೆಗಳ ಜತೆ ಸಹಬಾಳ್ವೆ ಜೀವನಕ್ಕೆ ಕರೆ : ,ಮಾರ್ಗದರ್ಶಿ ಶಿಕ್ಷಕಿ : ಪಿ.ಎಸ್.ಪೊನ್ನಮ್ಮ).

ಪ್ರಶಸ್ತಿ ಪ್ರದಾನ

ಮಡಿಕೇರಿ : ಜಿಲ್ಲಾಮಟ್ಡದ ಬಾಲ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ಕೊಡಗರಹಳ್ಳಿ ಸುಂಟಿಕೊಪ್ಪನಾಡು ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀಜಾಗೆ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ‌ ಪ್ರಾಂಶುಪಾಲ ಡಾ ಎನ್.ಎಸ್.ಸತೀಶ್, ಬಾಲ ವಿಜ್ಞಾನಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಪತ್ರ ವಿತರಿಸಿದ ಪ್ರಾಂಶುಪಾಲ ಡಾ ಎನ್.ಎಸ್.ಸತೀಶ್ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಕುತೂಹಲ ಬೆಳೆಸಿಕೊಂಡು ಪ್ರಶ್ನಿಸುವ ಮನೋಭಾವದೊಂದಿಗೆ ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಮಕ್ಕಳ ವಿಜ್ಞಾನ ಸಮಾವೇಶವು ಉತ್ತಮವಾಗಿ ಸಂಘಟನೆಗೊಂಡು, ಈ ಸಮಾವೇಶದಲ್ಲಿ ಕೊಡಗು ಜಿಲ್ಲೆಯ ಮಕ್ಕಳ ಉತ್ತಮ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಜ್ಞಾನ ಸಮಾವೇಶದ ಸಂಘಟಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ಮಕ್ಕಳಿಗೆ ಈ ವಿಜ್ಞಾನ ಸಮಾವೇಶವು ಭವಿಷ್ಯದ ಬಾಲ ವಿಜ್ಞಾನಿಗಳಾಗಿ ರೂಪುಗೊಳ್ಳಲು ಉತ್ತಮ ವೇದಿಕೆ ಒದಗಿಸುತ್ತದೆ ಎಂದರು.

ಪ್ರಾಂಶುಪಾಲೆ ಕೆ.ಎಸ್.ಸುಮಿತ್ರ, ಬಾಲ ವಿಜ್ಞಾನಿಗಳು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಜಿ.ಶ್ರೀನಾಥ್ , ವಿದ್ಯಾರ್ಥಿಗಳು ವಿಜ್ಞಾನ ಸಮಾವೇಶಕ್ಕೆ ಹೇಗೆ ಉತ್ತಮ ಯೋಜನೆಗಳನ್ನು ತಯಾರಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು. ಭಾರತ್ ಸ್ಕೌಟ್ಸ್ , ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ ಮತ್ತು ನಗರದ ಎ.ಎಲ್.ಜಿ.ಕ್ರೆಸೆಂಟ್ ಶಾಲೆಯ ಕರೆಸ್ಪಾಂಡೆಂಟ್ ಮುನಿರ್ ಅಹ್ಮದ್ವಿ ಜೇತ ತಂಡಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು.

ಸಂಸ್ಥೆಯ ಆಡಳಿತಾಧಿಕಾರಿ ಪಿ. ರವಿ ಮತ್ತು ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ‌ ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ ನವೀನ್ ಗೌಡ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಸಮಾವೇಶದ ಜಿಲ್ಲಾ ಸಂಯೋಜಕ ಜಿ.ಶ್ರೀಹರ್ಷ, ರೋಟರಿ ವುಡ್ಸ್ ಮಾಜಿ ಅಧ್ಯಕ್ಷ ಸಂಪತ್ ಕುಮಾರ್, ವಿಜ್ಞಾನ ಪರಿಷತ್ತಿನ ಪದಾಧಿಕಾರಿ ಎಂ.ಎನ್. ವೆಂಕಟನಾಯಕ್, ಸದಸ್ಯರಾದ ಜಿ. ಶ್ರೀನಾಥ್, ಎಸ್.ಎಚ್. ಈಶ, ಟಿ.ವಿ. ಶೈಲಾ , ಗೈಡ್ಸ್ ಕ್ಯಾಪ್ಟನ್ ಸಿ.ಎಂ. ಸುಲೋಚನಾ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾದಾಪುರ ಸೋಮವಾರಪೇಟೆ ಹೋಬಳಿ ಕೇಂದ್ರದಿಂದ ಬೇರ್ಪಡಿಸಿ
ಸಮಾನತೆ ಸಾರಿದ ಮಡಿವಾಳ ಮಾಚಿದೇವ