ಬಲಿಗೆ ಮೀಸಲಿಟ್ಟ ಕೋಣ ಸರ್ಕಾರಕ್ಕೆ ಹಸ್ತಾಂತರ

KannadaprabhaNewsNetwork |  
Published : Feb 20, 2025, 12:47 AM IST
ಫೋಟೋ19.4 : ಕುಷ್ಟಗಿ ತಾಲೂಕಿನ ಹನುಮಸಾಗರ ಸಮೀಪದ ಕುಂಬಳಾವತಿ ಗ್ರಾಮದಲ್ಲಿ ಶ್ರೀ ದ್ಯಾಮಾಂಭಿಕ ದೇವಿ ಜಾತ್ರೆ ನಿಮಿತ್ತ ದೇವಿಗೆ ಬಲಿ ಕೊಡಲು ಮೀಸಲಿಟ್ಟ ಕೋಣವನ್ನು ಗ್ರಾಮಸ್ಥರು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಬಸವ ಧರ್ಮ ಜ್ಞಾನಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ಮೂಲಕ ಸರ್ಕಾರಕ್ಕೆ ಒಪ್ಪಿಸಿದರು. | Kannada Prabha

ಸಾರಾಂಶ

ದೇವಿಗೆ ಬಲಿ ಕೊಡುವ ಕೋಣವನ್ನು ಹಸ್ತಾಂತರ ಮಾಡಿದ್ದು ಒಳ್ಳೆಯದು. ಯಾವ ದೇವರು ಪ್ರಾಣಿಗಳನ್ನು ಬಲಿ ಬೇಡುವುದಿಲ್ಲ. ಸಾರ್ವಜನಿಕರು ಜಾಗೃತರಾಗಿರಬೇಕು.

ಹನುಮಸಾಗರ:

ಸಮೀಪದ ಕುಂಬಳಾವತಿ ಗ್ರಾಮದ ಶ್ರೀ ದ್ಯಾಮಂಬಿಕಾ ದೇವಿ ಜಾತ್ರೆ ನಿಮಿತ್ತ ದೇವಿಗೆ ಬಲಿ ಕೊಡಲು ಮೀಸಲಿಟ್ಟಿದ್ದ ಕೋಣವನ್ನು ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಬುಧವಾರ ಸಂಜೆ ಸರ್ಕಾರಕ್ಕೆ ಹಸ್ತಾಂತರಿಸಿದರು.

ಈ ವೇಳೆ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಬಸವ ಧರ್ಮ ಜ್ಞಾನಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ಮಾತನಾಡಿ, ದೇವಿಗೆ ಬಲಿ ಕೊಡುವ ಕೋಣವನ್ನು ಹಸ್ತಾಂತರ ಮಾಡಿದ್ದು ಒಳ್ಳೆಯದು. ಯಾವ ದೇವರು ಪ್ರಾಣಿಗಳನ್ನು ಬಲಿ ಬೇಡುವುದಿಲ್ಲ. ಸಾರ್ವಜನಿಕರು ಜಾಗೃತರಾಗಿರಬೇಕು. ಮೌಢ್ಯತೆ ಆಚರಣೆ ಬಿಡಬೇಕು. ದೇವಿಗೆ ಹೂವು, ಹಣ್ಣು, ಕಾಯಿ, ಹೋಳಿಗೆ, ಕಡಬು ನೈವೇದ್ಯ ಅರ್ಪಿಸಬೇಕು. ದೇವರ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ಕೊಡಬಾರದು ಎಂದರು.

ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ. ಜಿಲ್ಲಾಡಳಿತ. ಕುಷ್ಟಗಿ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಕುಂಬಳಾವತಿ ಶ್ರೀದ್ಯಾಮಾಂಭಿಕಾ ದೇವಿಯ ಜಾತ್ರೆಯಲ್ಲಿ ಯಾವುದೇ ಪ್ರಾಣಿಗಳ ಬಲಿಯಾಗದಂತೆ ಮುಂಜಾಗ್ರತವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಈ ವೇಳೆ ಹನುಮಸಾಗರ ಪೊಲೀಸ್‌ ಠಾಣೆಯ ಪಿಎಸ್‌ಐ ಧನಂಜಯ ಹಿರೇಮಠ, ಗ್ರಾಮಸ್ಥರಾದ ಸುಬ್ಬರಾವ್ ಕುಲಕರ್ಣಿ, ಹುಲ್ಲಪ್ಪ ವಡಿಗೇರಿ, ಪ್ರಕಾಶಸಿಂಗ್ ರಜಪೂತ, ಕಳಕಯ್ಯ ಹಿರೇಮಠ, ಪಕ್ಷಪ್ಪ ಹೊಸಮನಿ, ಶರಣಪ್ಪ ಹನಮಸಾಗರ, ಶರಣಪ್ಪ ವಡಿಗೇರಿ, ಹನಮಪ್ಪ ಕಂಡೇಕಾರ, ದ್ಯಾಮಣ್ಣ ಗೋನಾಳ, ಶೇಖಪ್ಪ ಕುಂಟೋಜಿ, ಶಿವಮಲ್ಲಪ್ಪ ಕುಂಟೋಜಿ, ಶರಣಪ್ಪ ಗುಡಿ, ಯಲಗೂರದಪ್ಪ ವಡಿಗೇರಿ, ನಾಗಪ್ಪ ಹೊಸಮನಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!