ಪ್ರಾಣಿ ಪ್ರೇಮಿಗಳನ್ನು ಬೆಚ್ಚಿ ಬೀಳಿಸಿದ ಕೃಷ್ಣಮೃಗಗಳ ಸರಣಿ ಸಾವು

KannadaprabhaNewsNetwork |  
Published : Nov 17, 2025, 03:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಳ ನಿಗೂಢ ಸಾವಿನ ಸರಣಿ ಮುಂದುವರೆದಿದ್ದು, ಭಾನುವಾರ ಮತ್ತೊಂದು ಕೃಷ್ಣಮೃಗ ಮೃತಪಟ್ಟಿದ್ದು, ಕೃಷ್ಣಮೃಗಗಳ ಸಾವಿನ ಸಂಖ್ಯೆ 29ಕ್ಕೇರಿದ್ದು,ಕೃಷ್ಣಮೃಗಗಳ ಸರಣಿ ನಿಗೂಢ ಸಾವು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ.

ಅಳವಿನಂಚಿನಲ್ಲಿರುವ ಪ್ರಾಣಿಗಳ ಸಾವಿಗೆ ಆತಂಕ । ಮೃಗಾಲಯಕ್ಕೆ ವೈದ್ಯರ ತಂಡ ಭೇಟಿ । ಗಳಲೆ ರೋಗದಿಂದ ಸಾವು ಶಂಕೆಶ್ರೀಶೈಲ ಮಠದಕನ್ನಡಪ್ರಭ ವಾರ್ತೆ ಬೆಳಗಾವಿತಾಲೂಕಿನ ಭೂತರಾಮನಹಟ್ಟಿಯ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಳ ನಿಗೂಢ ಸಾವಿನ ಸರಣಿ ಮುಂದುವರೆದಿದ್ದು, ಭಾನುವಾರ ಮತ್ತೊಂದು ಕೃಷ್ಣಮೃಗ ಮೃತಪಟ್ಟಿದ್ದು, ಕೃಷ್ಣಮೃಗಗಳ ಸಾವಿನ ಸಂಖ್ಯೆ 29ಕ್ಕೇರಿದ್ದು,ಕೃಷ್ಣಮೃಗಗಳ ಸರಣಿ ನಿಗೂಢ ಸಾವು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ.ಗಳಲೆ ರೋಗದಿಂದ ಕೃಷ್ಣ ಮೃಗಗಳು ಸಾವನ್ನಪ್ಪಿರುವ ಬಗ್ಗೆ ತಜ್ಞ ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಸಾವಿಗೆ ನಿಖರ ಕಾರಣ ಏನೆಂಬುದು ವರದಿ ಬಂದ ಬಳಿಕವೇ ನಿಖರವಾಗಿ ಗೊತ್ತಾಗಲಿದೆ ವೈದ್ಯ ಡಾ.ಚಂದ್ರಶೇಖರ ತಿಳಿಸಿದ್ದಾರೆ.ಪ್ರಾಣಿ ಪ್ರೇಮಿಗಳ ಆಕ್ರೋಶ:ಸರಣಿ ಸಾವಿಗೆ ಹೊಣೆಯಾರು ಎಂಬುದು ವನ್ಯಜೀವಿ ಪ್ರೇಮಿಗಳ ಪ್ರಶ್ನೆ. ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಈ ವನ್ಯಜೀವಿಗಳ ಸಾವಿಗೆ ಕಾರಣವಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ವನ್ಯಜೀವಿ ಪ್ರೇಮಿಗಳು ಆಗ್ರಹಿಸಿದ್ದಾರೆ. ಸಾಮೂಹಿಕ ಸಾವಿಗೆ ಏನು ಕಾರಣ? ಯಾವ ರೋಗಕ್ಕೆ ತುತ್ತಾಗಿವೆ ಎಂಬುದನ್ನು ಅರಿಯದೇ ಕೇವಲ ಪ್ರಾಥಮಿಕ ಚಿಕಿತ್ಸೆಯನ್ನಷ್ಟೇ ನೀಡಲಾಗಿದೆಯೇ ಎಂಬ ಅನುಮಾನವೂ ಕಾಡುತ್ತಿದೆ. ಮೊದಲೇ ಕೃಷ್ಣಮೃಗ ಅಳಿವಿನಂಚಿನಲ್ಲಿರುವ ಪ್ರಾಣಿ. ಇವುಗಳ ಸಂರಕ್ಷಣೆ ಮಾಡುವುದು ಅರಣ್ಯ ಇಲಾಖೆಯ ಜವಾಬ್ದಾರಿ. ದೇಶದ ಯಾವುದೇ ಮೃಗಾಯಲದಲ್ಲೂ ಇಷ್ಟೊಂದು ಸಂಖ್ಯೆಯಲ್ಲಿ ಕೃಷ್ಣಮೃಗಗಳು ಮೃತಪಟ್ಟ ಉದಾಹರಣೆ ಇಲ್ಲ. ಆದರೆ, ಬೆಳಗಾವಿಯ ಮೃಗಾಲಯದಲ್ಲಿದ್ದ 38 ಕೃಷ್ಣ ಮೃಗಗಳ ಪೈಕಿ ಈಗ 29 ಕೃಷ್ಣಮೃಗಗಳು ಸಾಮೂಹಿಕ ಮರಣ ಹೊಂದಿರುವುದು ಪ್ರಾಣಿ ಪ್ರೇಮಿಗಳ ಆಘಾತ ವ್ಯಕ್ತಪಡಿಸಿದ್ದಾರೆ.ನ.13ರಂದು 8 ಕೃಷ್ಣಮೃಗಗಳು ಸಾವಿಗೀಡಾಗಿದ್ದವು. ಎರಡು ದಿನಗಳ ಬಳಿಕ 20 ಕೃಷ್ಣ ಮೃಗಗಳ ಸಾವಿಗೀಡಾಗೀಡಾಗಿರುವ ನಮಗೂ ಆಘಾತ ತರಿಸಿದೆ. 8 ಕೃಷ್ಣ ಮೃಗಗಳು ಏಕಾಏಕಿಯಾಗಿ ಮೃತಪಟ್ಟ ವೇಳೆಯೇ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಬ್ಯಾಕ್ಟಿರಿಯಾ ಸೋಂಕಿನಿಂದ ಸಾವಿಗೀಡಾಗಿರುವ ಶಂಕೆ ಇದೆ. ಹವಾಮಾನ ಬದಲಾವಣೆಯಿಂದಲೂ ಆರೋಗ್ಯದಲ್ಲಿ ಏರುಪೇರಾಗಿರುವ ಸಾಧ್ಯತೆಯಿದೆ. ಉಳಿದಿರುವ ಕೃಷ್ಣಮೃಗಗಳು ಆರೋಗ್ಯದಿಂದಿದ್ದು,ಪ್ರತ್ಯೇಕವಾಗಿ ಕ್ವಾರಂಟೇನ್‌ ಮಾಡಿ,ತೀವ್ರ ನಿಗಾ ಇರಿಸಲಾಗಿದೆ. ಕೃಷ್ಣಮೃಗಗಳಿಗೆ ತಗುಲಿದ ಬ್ಯಾಕ್ಟಿರಿಯಾ ವೈರಸ್‌ ಇತರೆ ಯಾವುದೇ ಪ್ರಾಣಿಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಜ್ಞ ವೈದ್ಯರು ಹೇಳಿದ್ದಾರೆ.ಕೃಷ್ಣಮೃಗಗಳ ಸಾವಿನ ಸರಣಿ ಮುಂದುವರೆದಿರುವ ನಡುವೆಯೇ ಭಾನುವಾರ ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿತ್ತು.ಸಿಬ್ಬಂದಿ ನಿರ್ಲಕ್ಷ್ಯ ಆರೋಪ:15 ಹೆಕ್ಟೇರ್ ಪ್ರದೇಶದಲ್ಲಿರುವ ಕಿರು ಮೃಗಾಲಯದಲ್ಲಿ ಹುಲಿ, ಸಿಂಹ, ಜಿಂಕೆ, ಮೊಸಳೆ ಸೇರಿದಂತೆ ವಿವಿಧ ಪ್ರಭೇದದ ಪಕ್ಷಿಗಳು ಸೇರಿ ಒಟ್ಟು 205 ಬಗೆಯ ಪ್ರಾಣಿ, ಪಕ್ಷಿಗಳಿವೆ. ಇಲ್ಲಿಗೆ ಆಗಮಿಸುವ ವನ್ಯಜೀವಿ ಪ್ರೇಮಿಗಳು ತಮ್ಮ ಜೊತೆಗೆ ಊಟ, ಉಪಹಾರ ತಂದಿರುತ್ತಾರೆ. ತಿಂದ ಬಳಿಕ ಉಳಿದ ಆಹಾರವನ್ನು ಪ್ರಾಣಿಗಳಿಗೆ ನೀಡುವುದು ಸಾಮಾನ್ಯ. ಈ ರೀತಿ ಆಹಾರ ಹಾಕುವುದು ಪ್ರಾಣಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಪ್ರಾಣಿ -ಪಕ್ಷಿಗಳಿಗೆ ಜನರು ಆಹಾರ ಹಾಕುವುದಕ್ಕೆ ಕಡಿವಾಣ ಹಾಕಬೇಕಿದೆ. ಜನರು ಪ್ರಾಣಿಗಳಿಗೆ ಆಹಾರ ಹಾಕುತ್ತಿರುವುದನ್ನು ಕಂಡು ಕಾಣದಂತೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿರುವುದು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.ಕೋಟ್‌.....ಗಳಲೆ ರೋಗದಿಂದ ಕೃಷ್ಣಮೃಗಗಳು ಮೃತಪಟ್ಟಿರುವ ಶಂಕೆಯಿದೆ. ಘಟನೆಯಲ್ಲಿ ಸಿಬ್ಬಂದಿ ನಿರ್ಲಕ್ಷ್ಯಕಂಡು ಬಂದಿಲ್ಲ. 8 ಕೃಷ್ಣ ಮೃಗಗಳು ಮೃತಪಟ್ಟ ವೇಳೆಯೇ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಆದರೂ, ಸಿಬ್ಬಂದಿ ತಪ್ಪು ಕಂಡು ಬಂದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.- ಡಾ.ಸುನೀಲ ಪನ್ವಾರ್‌, ಕರ್ನಾಟಕ ಮೃಗಾಲಯಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ

PREV

Recommended Stories

45 ನಿಮಿಷದಲ್ಲಿ 12 ಮುದ್ದೆ ತಿಂದು ಟಗರು ಗೆದ್ದ!
ಅಬ್ಬಕ್ಕ ರಾಣಿಯ ರಾಷ್ಟ್ರಾಭಿಮಾನ ಮಕ್ಕಳಿಗೆ ಮಾದರಿಯಾಗಲಿ: ಶಾಸಕ ಕಾಮತ್‌