ಜಯಂತಿಗಳಿಂದ ರಾಜ್ಯೋತ್ಸವ ವೈಭವಕ್ಕೆ ಹಿನ್ನಡೆ

KannadaprabhaNewsNetwork |  
Published : Nov 02, 2024, 01:42 AM IST
೧ಕೆಎಲ್‌ಆರ್-೧೧ಕೋಲಾರದಲ್ಲಿ ನಡೆದ ರಾಜ್ಯೋತ್ಸವದಲ್ಲಿ ಸ್ಥಬ್ದ ಚಿತ್ರಗಳ ಪಲ್ಲಕ್ಕಿಗಳ ಚಿತ್ರಣ. | Kannada Prabha

ಸಾರಾಂಶ

ರಾಜ್ಯೋತ್ಸವದಲ್ಲಿ ಸಂಘ ಸಂಸ್ಥೆಗಳಿಂದ ಸ್ತಬ್ಧ ಚಿತ್ರಗಳ ಪಲ್ಲಕ್ಕಿಗಳು ಕಡಿಮೆಯಾಗಲು ಸರ್ಕಾರವು ಜಾರಿಗೆ ತಂದಿರುವ ಸಮುದಾಯಗಳ ಜಯಂತಿಗಳಿಂದಾಗಿ ರಾಜ್ಯೋತ್ಸವದಲ್ಲಿ ಭಾಗವಹಿಸುವಿಕೆ ಹಾಗೂ ಗೌರವ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಜಯಂತಿಗಳು ಆಚರಿಸಬೇಕು ಜೂತೆಗೆ ಕನ್ನಡದ ಬಗ್ಗೆಯು ಅಭಿಮಾನ ಉಳಿಸಿಕೊಳ್ಳಬೇಕು.

ಎಂಎಲ್ಸಿ ಇಂಚರ ಗೋವಿಂದರಾಜು ವಿಷಾದ । ಕನ್ನಡದ ಬಗ್ಗೆ ಅಭಿಮಾನ ಇರಬೇಕು । ಅಂಬಾರಿಯಲ್ಲಿ ಕೋಲಾರಮ್ಮ ಮೆರವಣಿಗೆ

ರಾಜ್ಯೋತ್ಸವ ಸೊಗಡು ಇಲ್ಲ, ಜನರು ಪಾಲ್ಗೊಳ್ಳುತ್ತಿಲ್ಲ, ಕನ್ನಡ ನಾಮಫಲಕ ಕಡ್ಡಾಯ, ಎಂಎಲ್ಸಿ ಇಂಚರ ಗೋವಿಂದರಾಜ, ಕೋಲಾರ

ಕನ್ನಡ ರಾಜ್ಯೋತ್ಸವದಲ್ಲಿ ಸಂಘ ಸಂಸ್ಥೆಗಳಿಂದ ಸ್ತಬ್ಧ ಚಿತ್ರಗಳ ಪಲ್ಲಕ್ಕಿಗಳು ಕಡಿಮೆಯಾಗಲು ಸರ್ಕಾರವು ಜಾರಿಗೆ ತಂದಿರುವ ಸಮುದಾಯಗಳ ಜಯಂತಿಗಳಿಂದಾಗಿ ರಾಜ್ಯೋತ್ಸವದಲ್ಲಿ ಭಾಗವಹಿಸುವಿಕೆ ಹಾಗೂ ಗೌರವ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಜಯಂತಿಗಳು ಆಚರಿಸಬೇಕು ಜೂತೆಗೆ ಕನ್ನಡದ ಬಗ್ಗೆಯು ಅಭಿಮಾನ ಉಳಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೋಲಾರಸುವರ್ಣ ಕರ್ನಾಟಕ ರಾಜ್ಯೋತ್ಸವದ ಜೊತೆಗೆ ದೀಪಾವಳಿ ಹಬ್ಬವು ಇರುವುದರಿಂದ ವೈಭವದ ರಾಜ್ಯೋತ್ಸವ ಸೊಗಡು ಕಾಣುತ್ತಿಲ್ಲ. ಜಿಲ್ಲಾ ಕೇಂದ್ರದಲ್ಲಿ ಈ ಹಿಂದೆ ಜಿಲ್ಲೆಯಾದಾದ್ಯಂತ ಗ್ರಾಮೀಣ ಪ್ರದೇಶಗಳಿಂದ ಸ್ತಬ್ಧ ಚಿತ್ರಗಳ ಪಲ್ಲಕ್ಕಿಗಳು ೨೪೨ ಬಂದಿದ್ದು ಐಸಿಹಾಸಿಕ ದಾಖಲೆಯಾಗಿದೆ. ಮಹಾತ್ಮಗಾಂಧಿ ರಸ್ತೆಯ ಎರಡು ಬದಿಗಳಲ್ಲಿ ಕಿಕ್ಕಿರಿದ ಜನಸ್ತೋಮ ಕಂಡು ಬರುತ್ತಿತ್ತು ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ನೆನಪಿಸಿಕೊಂಡರು.ನಗರದ ೬೯ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ಕನ್ನಡ ರಾಜ್ಯೋತ್ಸವದಲ್ಲಿ ಸಂಘ ಸಂಸ್ಥೆಗಳಿಂದ ಸ್ತಬ್ಧ ಚಿತ್ರಗಳ ಪಲ್ಲಕ್ಕಿಗಳು ಕಡಿಮೆಯಾಗಲು ಸರ್ಕಾರವು ಜಾರಿಗೆ ತಂದಿರುವ ಸಮುದಾಯಗಳ ಜಯಂತಿಗಳಿಂದಾಗಿ ರಾಜ್ಯೋತ್ಸವದಲ್ಲಿ ಭಾಗವಹಿಸುವಿಕೆ ಹಾಗೂ ಗೌರವ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಜಯಂತಿಗಳು ಆಚರಿಸಬೇಕು ಜೂತೆಗೆ ಕನ್ನಡದ ಬಗ್ಗೆಯು ಅಭಿಮಾನ ಉಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಕನ್ನಡ ನಾಮಫಲಕ ಕಡ್ಡಾಯ

ಈ ಹಿಂದೆ ಕನ್ನಡದ ಬಗ್ಗೆ ಅಭಿಮಾನ ಹೆಚ್ಚಾಗಿತ್ತು, ಕೋಲಾರವು ಗಡಿಭಾಗವಾಗಿರುವುದರಿಂದ ಕನ್ನಡದ ಬಗ್ಗೆ ಹೋರಾಟಗಳು ಅನಿವಾರ್ಯವಾಗಿತ್ತು, ಇದಕ್ಕೆ ಚಲನ ಚಿತ್ರಗಳು ಪ್ರೇರಣೆಯಾಗಿದ್ದವು. ನಂತರದಲ್ಲಿ ಕನ್ನಡ ರಾಜ್ಯೋತ್ಸವದ ನವೆಂಬರ್ ಮಾಹೆಯಲ್ಲಿ ಎಲ್ಲಾ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳು ಪ್ರದರ್ಶಿಸುವುದು ಕಡ್ಡಾಯವಾಗಿತ್ತು, ಅಂಗಡಿ ಮುಂಗಟ್ಟುಗಳ ಫಲಕಗಳು ಶೇ.೫೫ರಷ್ಟು ಕನ್ನಡ ಭಾಷೆಯಲ್ಲಿರಬೇಕೆಂಬ ಸರ್ಕಾರದ ಆದೇಶವು ಸ್ವಾಗತಾರ್ಹವಾಗಿದ್ದು ಅಭಿನಂದಿಸುತ್ತೇನೆ ಎಂದರು.ಸುವರ್ಣ ಕರ್ನಾಟಕ ಸಂದರ್ಭದಲ್ಲಿ ನವೆಂಬರ್ ಮಾತ್ರವಲ್ಲ ವರ್ಷವಿಡಿ ಕನ್ನಡ ಕಾರ್ಯಕ್ರಮಗಳು ನಡೆಸುವಂತಾಗಬೇಕು, ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು ಎಂದು ಸಲಹೆ ನೀಡಿದರು. ಪೂರ್ವಸಿದ್ಧತೆ ಅಗತ್ಯ:

ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ಯಾವುದೇ ಕಾರ್ಯಕ್ರಮಕ್ಕೆ ಪೂರ್ವ ಸಿದ್ದತೆ ಅಗತ್ಯತೆ ಇರುತ್ತದೆ. ಜನಪ್ರತಿನಿಧಿಗಳನ್ನು ಒಳಗೊಂಡಂತೆ ಕಾರ್ಯಕ್ರಮಗಳ ಜವಾಬ್ದಾರಿ ಸಂಘ. ಸಂಸ್ಥೆಗಳು ಅಧಿಕಾರಿಗಳಿಗೆ ಮಾತ್ರವೇ ವಹಿಸಿದೆ ಜನಪ್ರತಿನಿಧಿಗಳನ್ನು ಪರಿಗಣಿಸಬೇಕು. ಈ ಹಿಂದೆ ಕೆ.ಎಸ್.ಆರ್.ಟಿ.ಸಿ, ಅರಣ್ಯ ಇಲಾಖೆ, ಕೋಚಿಮುಲ್. ಮುಂತಾದ ಕಡೆಯಿಂದ ಅದ್ಬುತವಾದ ಸ್ಥಬ್ದ ಚಿತ್ರಗಳನ್ನು ರಾಜ್ಯೋತ್ಸವದ ಕೆಲವು ದಿನಗಳ ಮುನ್ನವೇ ಸಿದ್ದತೆ ನಡೆಸಲಾಗುತ್ತಿದ್ದನ್ನು ಸ್ಮರಿಸಿದರು. ಬಂಗಾರಪೇಟೆಯಲ್ಲಿ ೧೨೫ನೇ ತಿಂಗಳಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಿರಂತರವಾಗಿ ಮುಂದುವರೆಸಿ ಕೊಂಡು ಬರಲಾಗುತ್ತಿತ್ತು. ಕಳೆದ ತಿಂಗಳಿಂದ ಕೆಲವು ಸಮಸ್ಯೆಗಳು ಉಂಟಾಗಿದ್ದು ಅದನ್ನು ಜಿಲ್ಲಾ ಸಚಿವರು, ಜನಪ್ರತಿನಿಧಿಗಳು ಹಾಗೂ ಜಲ್ಲಾಧಿಕಾರಿ ಗಮನಹರಿಸಿ ಬಗೆಹರಿಸಬೇಕು ಎಂದು ತಿಳಿಸಿದರು.

ಅಂಬಾರಿಯಲ್ಲಿ ಕೋಲಾರಮ್ಮ ಮೆರವಣಿಗೆಕಾರ್ಯಕ್ರಮಕ್ಕೂ ಮುನ್ನ ಗಾಂಧಿವನದಲ್ಲಿ ರಾಷ್ಟ್ರೀಯ ಧ್ವಜಾ ಹಾಗೂ ಕನ್ನಡದ ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವರು ನೆರವೇರಿಸಿ ಶ್ರೀ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಗಜರಾಜ ಕೋಲಾರಮ್ಮ ದೇವಿಯನ್ನು ಹೊತ್ತ ಅಂಬಾರಿಯು ವೇದಿಕೆ ಬಳಿ ಆಗಮಿಸಿ ಸಚಿವರು ಹಾಗೂ ಜನಪ್ರತಿನಿಧಿಗಳಿಂದ ಪುಷ್ಪ ನಮನ ಸ್ವೀಕರಿಸಿದ ನಂತರ ಸ್ಥಬ್ದ ಚಿತ್ರಗಳಿಗೆ ಸಚಿವರು ಚಾಲನೆ ನೀಡಿದರು.ಜಿಲ್ಲಾಧಿಕಾರಿ ಅಕ್ರಂ ಪಾಷ, ಎಡಿಸಿ ಮಂಗಳ, ಎಸ್‌ಪಿ ನಿಖಿಲ್.ಬಿ, ಎಸಿ ಡಾ.ಮೈತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ತಹಸೀಲ್ದಾರ್ ನಯನ, ಕುಡಾ ಅಧ್ಯಕ್ಷ ಮಹ್ಮದ್ ಹನೀಫ್, ಹಾಲು ಒಕ್ಕೂಟದ ನಿರ್ದೇಶಕ ಷರೀಫ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀ ದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಜೆಡಿಎಸ್ ಮುಖಂಡ ಸಿ.ಎಂ.ಆರ್.ಶ್ರೀನಾಥ್ ಇದ್ದರು.

೧ಕೆಎಲ್‌ಆರ್-೧೧...ಕೋಲಾರದಲ್ಲಿ ನಡೆದ ರಾಜ್ಯೋತ್ಸವದಲ್ಲಿ ಸಾಗುತ್ತಿರುವ ಸ್ತಬ್ಧಚಿತ್ರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!