ಚಿಕ್ಕಮಗಳೂರು: ಜಿಲ್ಲೆಯ ಇತಿಹಾಸದಲ್ಲೇ ಅತ್ಯಂತ ಅಪರೂಪದ ಘಟನೆಯೊಂದು ನಡೆದಿದ್ದು, ದೇವರಿಗೆ ಬಲಿ ಕೊಡಲು ತಂದಿದ್ದ ಕುರಿಯೊಂದು ಏಕಕಾಲಕ್ಕೆ ಆರು ಮರಿಗಳಿಗೆ ಜನ್ಮ ನೀಡುವ ಮೂಲಕ ರೈತನ ಪಾಲಿಗೆ ವರವಾಗಿ ಪರಿಣಮಿಸಿದೆ.ಚಿಕ್ಕಮಗಳೂರು ನಗರದ ಹೊರವಲಯದ ಚಂದ್ರಕಟ್ಟೆ ನಿವಾಸಿ, ಯುವ ರೈತ ಸಂತೋಷ್ ಇತ್ತೀಚೆಗೆ ನಡೆದ ದೇವಸ್ಥಾನದ ಜಾತ್ರೆ ಸಂದರ್ಭದಲ್ಲಿ ದೇವರಿಗೆ ಬಲಿ ನೀಡಲು ಮಾರುಕಟ್ಟೆಯಿಂದ ಎರಡು ಕುರಿಗಳನ್ನು ತಂದಿದ್ದರು.ಇದರಲ್ಲಿ ಒಂದು ಕುರಿಯನ್ನು ಜಾತ್ರೆ ದಿನದಂದು ಕಡಿಯಲಾಗಿತ್ತು. ಆದರೆ, ಮತ್ತೊಂದು ಕುರಿ ಗರ್ಭಿಣಿಯಾಗಿರಬಹುದು ಎಂಬ ಸಂಶಯದಿಂದ ಸಂತೋಷ್ ಅದನ್ನು ಕಡಿಯದೆ ಹಾಗೆಯೇ ಉಳಿಸಿದ್ದರು.ಒಂದೇ ಬಾರಿಗೆ ಆರು ಮರಿಗಳ ಜನನ:ರೈತನ ಈ ನಿರ್ಧಾರ ಇಂದು ದೊಡ್ಡ ಮಟ್ಟದ ಫಲ ನೀಡಿದೆ. ಇಂದು ಬೆಳಿಗ್ಗೆ ಆ ಕುರಿ ಬರೋಬ್ಬರಿ 6 ಮರಿಗಳಿಗೆ ಜನ್ಮ ನೀಡಿದ್ದು ಅದರಲ್ಲಿ 4 ಹೆಣ್ಣು ಹಾಗೂ 2 ಗಂಡು ಮರಿಗಳು. ಸಾಮಾನ್ಯವಾಗಿ ಕುರಿಗಳು ಒಂದೆರಡು ಮರಿ ಹಾಕುತ್ತವೆ. ಆದರೆ ಏಕಕಾಲಕ್ಕೆ ಆರು ಮರಿಗಳನ್ನು ಹಾಕಿರುವುದು ಅಚ್ಚರಿಗೆ ಕಾರಣವಾಗಿದೆ. ತಾಯಿ ಕುರಿ ಸೇರಿದಂತೆ ಎಲ್ಲಾ ಆರು ಮರಿಗಳು ಸಂಪೂರ್ಣ ಆರೋಗ್ಯವಾಗಿವೆ ಎಂದು ತಿಳಿದುಬಂದಿದೆ.
-
8ಸಿಕಎಂ40 ಕುರಿಯೊಂದು ಆರು ಮರಿಗಳಿಗೆ ಜನ್ಮ ನೀಡಿದೆ..