ಪ್ರಜಾಪ್ರಭುತ್ವದ ಉಳಿವಿಗಾಗಿ ರಾಷ್ಟ್ರೀಯ ಪಕ್ಷಗಳು ಭ್ರಷ್ಟ ಮುಕ್ತ ಭಾರತ ಸೃಷ್ಟಿ ಮಾಡಲು ಯುವಕರಲ್ಲಿ ಭ್ರಷ್ಟತೆಗೆ ಬಹಿಷ್ಕಾರ ಹಾಕಿಸುವ ಮುಖಾಂತರ ಭ್ರಷ್ಟರನ್ನು ತ್ಯಜಿಸಬೇಕು ಎಂದು ಎಎಪಿ ಮಾಧ್ಯಮ ಪ್ರತಿನಿಧಿ ಡಾ.ಕೆ.ಸುಂದರೇಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಪ್ರಜಾಪ್ರಭುತ್ವದ ಉಳಿವಿಗಾಗಿ ರಾಷ್ಟ್ರೀಯ ಪಕ್ಷಗಳು ಭ್ರಷ್ಟ ಮುಕ್ತ ಭಾರತ ಸೃಷ್ಟಿ ಮಾಡಲು ಯುವಕರಲ್ಲಿ ಭ್ರಷ್ಟತೆಗೆ ಬಹಿಷ್ಕಾರ ಹಾಕಿಸುವ ಮುಖಾಂತರ ಭ್ರಷ್ಟರನ್ನು ತ್ಯಜಿಸಬೇಕು ಎಂದು ಎಎಪಿ ಮಾಧ್ಯಮ ಪ್ರತಿನಿಧಿ ಡಾ.ಕೆ.ಸುಂದರೇಗೌಡ ಹೇಳಿದರು. ತಾಲೂಕಿನ ಸಿಂದಿಗೆರೆ ಗ್ರಾಮದಲ್ಲಿ ಭ್ರಷ್ಟಮುಕ್ತ ಭಾರತ ನಿರ್ಮಾಣ ಕುರಿತು ಎಎಪಿಯಿಂದ ಏರ್ಪಡಿಸಿದ್ದ ಬೀದಿ ನಾಟಕ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಭ್ರಷ್ಟರ ಆಸ್ತಿಯನ್ನು ಸರ್ಕಾರ ಕಾನೂನಿನ ತಿದ್ದುಪಡಿ ಮುಖಾಂತರ ಮುಟ್ಟುಗೋಲು ಹಾಕಿ ಸಾರ್ವಜನಿಕರ ನಿಜವಾದ ಬೆಳವಣಿಗೆಗೆ ಮತ್ತು ಅವರ ಮೂಲಭೂತ ಹಕ್ಕುಗಳಿಗಾಗಿ ವಿನಿಯೋಗಿಸುವ ಮುಖಾಂತರ ಪ್ರಜಾಪ್ರಭುತ್ವದ ಅಡಿಪಾಯ ಮಲಿನತೆಯಿಂದ ದೂರವಿಡಬೇಕು ಎಂದರು. ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಾದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗವನ್ನು ಪುನಶ್ಚೇತನಗೊಳಿಸುವ ಮಹತ್ಕಾರ್ಯವನ್ನು ಮತದಾರನು ನೋಟಿಗಾಗಿ ವೋಟನ್ನು ಮಾರದೆ ದೇಶದಲ್ಲಿ ಬಲಿಷ್ಟವಾಗಿ ಪ್ರಜಾಪ್ರಭುತ್ವ ನಿರ್ಮಾಣ ಮಾಡಬೇಕು ಎಂದರು.ಇದೇ ವೇಳೆ ಪುಲಿಕೇಶಿ ನಾಟ್ಯ ವೃಂದದವರು ಭ್ರಷ್ಟಚಾರ ಮುಕ್ತ ಕುರಿತು ನಾಟಕ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಎಎಪಿ ಮುಖಂಡರಾದ ಲಿಂಗಾರಾಧ್ಯ, ವಿಲಿಯಂ ಪೆರೇರ, ರವಿಕುಮಾರ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಪೋಟೋ ಫೈಲ್ ನೇಮ್ 21 ಕೆಸಿಕೆಎಂ 3ಚಿಕ್ಕಮಗಳೂರು ತಾಲ್ಲೂಕಿನ ಸಿಂದಿಗೆರೆ ಗ್ರಾಮದಲ್ಲಿ ಭ್ರಷ್ಟಮುಕ್ತ ಭಾರತ ನಿರ್ಮಾಣ ಕುರಿತು ಎಎಪಿ ವತಿಯಿಂದ ಏರ್ಪಡಿಸಿದ್ದ ಬೀದಿ ನಾಟಕ ಕಾರ್ಯಕ್ರಮಕ್ಕೆ ಡಾ. ಸುಂದರೇಗೌಡ ಅವರು ಬುಧವಾರ ಚಾಲನೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.