ವಿದ್ಯಾರ್ಥಿ ಜೀವನದಲ್ಲಿ ಸಾಧನೆಗೆ ಗುರಿ ಇರಬೇಕು

KannadaprabhaNewsNetwork |  
Published : Jul 22, 2024, 01:23 AM IST
21ಕೆಬಿಪಿಟಿ.1.ಬಂಗಾರಪೇಟೆ ತಾಲೂಕಿನ ಶನೇಶ್ವರ ಕನ್ನಡ ಶಾಲೆಗೆ ದಾನಿಗಳು ಲೇಖನಿ ಸಾಮಾಗ್ರಿಗಳನ್ನು ವಿತರಿಸಿದರು. | Kannada Prabha

ಸಾರಾಂಶ

ಸರ್ಕಾರಿ ಶಾಲೆಗಳಿಗೆ ನೀಡುವ ಸಮವಸ್ತ್ರ, ಶೂ, ಸಾಕ್ಸ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಶಾಲೆಯ ಮಕ್ಕಳಿಗೆ ಸರ್ಕಾರ ನೀಡದೇ ಇರುವುದು ಶೋಚನೀಯ ಸಂಗತಿ. ಸರ್ಕಾರಿ ಶಾಲೆಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಶಾಲೆಯ ಮಕ್ಕಳಿಗೆ ನೀಡಬೇಕು

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ವಿದ್ಯಾರ್ಥಿಗಳು ಗುರು ಹಿರಿಯರಿಗೆ ಗೌರವ ನೀಡಬೇಕು, ಜೀವನದಲ್ಲಿ ಗುರಿ ಇರಬೇಕು, ಗುರಿ ಇದ್ದಲ್ಲಿ ಎನು ಬೇಕಾದರೂ ಸಾಧಿಸಲು ಸಾದ್ಯ ಎಂದು ಶ್ರೀ ಶನೈಶ್ಚರ ವಿದ್ಯಾಸಂಸ್ಥೆ ಜಂಟಿ ಕಾರ್ಯದರ್ಶಿ ಎ.ಸಿ.ಸತ್ಯಭಾಮ ಹೇಳಿದರು.ತಾಲೂಕಿನ ಶ್ರೀ ಶನೈಶ್ಚರ ಕನ್ನಡ ಹಿರಿಯ ಪ್ರಾಥಮಿಕ ಅನುಧಾನಿತ ಶಾಲೆಯ ಎಲ್ಲಾ ವಿಧ್ಯಾರ್ಥಿಗಳಿಗೆ ದಿ.ಆರ್ಕಾಟ್ ಚಂದ್ರಣ್ಣನವರ ಸ್ಮರಣಾರ್ಥ ೧ ರಿಂದ ೭ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಸಮವಸ್ತ್ರ ವಿತರಿಸಿ ಮಾತನಾಡಿದರು.

ಉಚಿತ ಶಿಕ್ಷಣವೇ ಸಂಸ್ಥೆಯ ಧ್ಯೇಯ

ಉಚಿತ ಶಿಕ್ಷಣ ನೀಡುವುದು ನಮ್ಮ ಸಂಸ್ಥೆಯ ಧ್ಯೇಯವಾಗಿದ್ದು ಈ ನಿಟ್ಟಿನಲ್ಲಿ ದಾನಿಗಳ ಸಹಕಾರದಿಂದ ಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದರು, ಗ್ರಾಮೀಣ ಭಾಗದ ವಿಧ್ಯಾರ್ಥಿಗಳು ಬುದ್ಧಿವಂತರಾಗಬೇಕು, ದೇಶದ ಮಹಾನ್ ವ್ಯೆಕ್ತಿಗಳಾಗಬೇಕೆಂದರು.

ಮುಖ್ಯಶಿಕ್ಷಕ ಎಚ್.ಎಲ್.ಆನಂದ ಮಾತನಾಡಿ ದಾನಿಗಳಾದ ಆರ್ಕಾಟ್ ಚಂದ್ರಣ್ಣ ಹಾಗೂ ಸತ್ಯಭಾಮರವರು ನಮ್ಮ ಶಾಲೆಗೆ ಉಚಿತವಾಗಿ ಶಾಲಾ ಕೊಠಡಿಯನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ, ೨೦೦೬ ರಿಂದ ಪ್ರತಿ ವರ್ಷವೂ ಎಲ್ಲಾ ಮಕ್ಕಳಿಗೆ ಉಚಿತ ಸಮವಸ್ತç ನೀಡುತ್ತಾ ಬಂದಿರುವುದು ಶ್ಲಾಘನೀಯ, ಅಭಿನಂದನಾರ್ಹ ಎಂದರು.ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಆರ್.ಆಶ್ವಥ್ ಮಾತನಾಡಿ ಸರ್ಕಾರಿ ಶಾಲೆಗಳಿಗೆ ನೀಡುವ ಸಮವಸ್ತ್ರ, ಶೂ, ಸಾಕ್ಸ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಶಾಲೆಯ ಮಕ್ಕಳಿಗೆ ಸರ್ಕಾರ ನೀಡದೇ ಇರುವುದು ಶೋಚನೀಯ ಸಂಗತಿ. ಸರ್ಕಾರಗಳು ಮಲತಾಯಿ ಧೋರಣೆ ತೊರೆದು ಸರ್ಕಾರಿ ಶಾಲೆಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಶಾಲೆಯ ಮಕ್ಕಳಿಗೆ ನೀಡಬೇಕೆಂದು ಒತ್ತಾಯಿಸಿದರು.

ವೇದಿಕೆಯಲ್ಲಿ ದಾನಿಗಳಾದ ರಾಘವೇಂದ್ರ ಅಭಿಷೇಕ್‌, ದಿನಿ, ಅರುಶ್, ಅನರ್ಘ್ಯ, ಆಕಾಂಕ್ಷ, ನಾಗೇಶ್, ಶಿಕ್ಷಕ ವೃಂದದವರಾದ ಎಸ್.ಗಿರಿಜಮ್ಮ, ಉಷಾರಾಣಿ, ಚಂದ್ರಕಲ, ಚಂದನ ಹಾಜರಿದ್ದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು