ಬಿಸಿಲ ನಾಡಲ್ಲಿ ಬೆಳೆಯುತ್ತಿರುವ ಡ್ರ್ಯಾಗನ್‌ ಫ್ರೂಟ್‌ ಇಲ್ಲಿನ ರೈತರಿಗೆ ವರ : ಯಶೋಗಾಥೆ

KannadaprabhaNewsNetwork |  
Published : Aug 26, 2024, 01:35 AM ISTUpdated : Aug 26, 2024, 12:56 PM IST
Dragon Fruit

ಸಾರಾಂಶ

ಬಿಸಿಲ ನಾಡಲ್ಲಿ ಬೆಳೆಯುತ್ತಿರುವ ಡ್ರ್ಯಾಗನ್‌ ಫ್ರೂಟ್‌ ಇಲ್ಲಿನ ರೈತರಿಗೆ ವರವಾಗಿ ಪರಿಣಮಿಸಿದೆ. ನೀರು ಕಡಿಮೆ ಪ್ರಮಾಣವಿದ್ದರೂ ಬೆಳೆ ಬೆಳೆಯುತ್ತದೆ ಎಂಬ ಕಾರಣಕ್ಕೆ ತಾಲೂಕಿನ ನಂದರ್ಗಾ ಗ್ರಾಮದ ರೈತ. ಗುರುಪಾದ ವಿಠ್ಠಲ ದೊಡ್ಡಮನಿ ಡ್ರ್ಯಾಗನ್‌ ಫ್ರೂಟ್‌ ಬೆಳೆದು ಯಶಸ್ವಿಯಾಗಿದ್ದಾರೆ.

ಬಿಂದುಮಾಧವ ಮಣ್ಣೂರ

ಶಿವಲಿಂಗೇಶ್ವರ ಎಸ್ ಜೆ

 ಅಫಜಲ್ಪುರ /ಕರಜಗಿ :  ಬಿಸಿಲ ನಾಡಲ್ಲಿ ಬೆಳೆಯುತ್ತಿರುವ ಡ್ರ್ಯಾಗನ್‌ ಫ್ರೂಟ್‌ ಇಲ್ಲಿನ ರೈತರಿಗೆ ವರವಾಗಿ ಪರಿಣಮಿಸಿದೆ. ನೀರು ಕಡಿಮೆ ಪ್ರಮಾಣವಿದ್ದರೂ ಬೆಳೆ ಬೆಳೆಯುತ್ತದೆ ಎಂಬ ಕಾರಣಕ್ಕೆ ತಾಲೂಕಿನ ನಂದರ್ಗಾ ಗ್ರಾಮದ ರೈತ. ಗುರುಪಾದ ವಿಠ್ಠಲ ದೊಡ್ಡಮನಿ ಡ್ರ್ಯಾಗನ್‌ ಫ್ರೂಟ್‌ ಬೆಳೆದು ಯಶಸ್ವಿಯಾಗಿದ್ದಾರೆ.

ಇವರು ಜೆಸ್ಕಾಂ ಇಲಾಖೆಯಲ್ಲಿ 21 ವರ್ಷಗಳಿಂದ ಗ್ರಾಮ ವಿದ್ಯುತ್ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಐದು ಎಕರೆ ಭೂಮಿಯಲ್ಲಿ ಅರ್ಧ, ಎಕರೆಯಲ್ಲಿ ಸಿಎನ್ ಪಿಂಕ್ ತಿಳಿ ಹಾಗೂ ಜಂಬೋ 4 ಲೈನ್ ತಳಿಯ 35 ರುಪಾಯಿಗೆ ಒಂದರಂತೆ ಒಟ್ಟು 800 ಸಸಿಗಳನ್ನು (ಅಗಿಗಳನ್ನು) ತಿಕೋಟಾದಿಂದ ತಂದು ನಾಟಿ ಮಾಡಿದ್ದಾರೆ. ಇದ್ದ ಅಲ್ಪ ಸ್ವಲ್ಪ ಕೊಳವೆ ಬಾವಿ ನೀರು ಬಳಸಿಕೊಂಡು ಗಿಡಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ.ಇದ್ದ ಅಲ್ಪ ಸ್ವಲ್ಪ ಬೋರ್‌ ನೀರನ್ನು ಬಳಸಿಕೊಂಡು ಡ್ರ್ಯಾಗನ್‌ ಫ್ರೂಟ್‌ ಬೆಳೆದಿದ್ದಾರೆ.ಕೊಳವೆ ಬಾವಿ ಕೊರೆಯಿಸುವ ಮೊದಲು ಗ್ರಾಮದಿಂದ ಹೆಗಲ ಮೇಲೆ ಕೊಡಗಳನ್ನು ಹೊತ್ತು ತಂದು ದ್ವಿಚಕ್ರ ವಾಹನದ ಮೇಲೆ ನೀರು ಹೊತ್ತು ತಂದು ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿ ಗಿಡಗಳನ್ನು ಬದುಕಿಸಿದ್ದಾರೆ. 8 - 10 ದಿನಗಳಿಗೊಮ್ಮೆ ನೀರುಣಿಸಿದರೆ ಸಾಕು, ತಿಪ್ಪೆ ಗೊಬ್ಬರ ಹಾಗೂ ಜೀವಾಮೃತ ನೀಡುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಬಳಕೆಯೂ ಕಡಿಮೆ ಗಿಡಗಳು ಹಚ್ಚ ಹಸಿರಾಗಿ ಬೆಳೆಯುತ್ತಿವೆ. ಆರಂಭದಲ್ಲಿಯೇ ಫಲ ಕೊಡಲು ಆರಂಭಿಸಿದ್ದು, ಉತ್ತಮ ಫಸಲು ಬಂದಿದೆ. ಸುಮಾರು ಮೂರುವರೆ ಕ್ವಿಂಟಲ್ ಹಣ್ಣು ಬೆಳೆದಿದ್ದಾರೆ.ಒಟ್ಟು 2 ಲಕ್ಷ ರುಪಾಯಿ ಖರ್ಚು ಮಾಡಿದ್ದಾರೆ

ಕೆಜಿ ಹಣ್ಣಿಗೆ 130 ರಿಂದ 150 ಬೆಲೆ:

ಮಾರುಕಟ್ಟೆಯಲ್ಲಿ ಡ್ರ್ಯಾಗನ್ ಫ್ರೂಟ್‌ಗೆ ಬೇಡಿಕೆ ಇರುವುದರಿಂದ ಇವರು ಕಲಬುರಗಿ ಹಾಗೂ ಸೋಲಾಪುರ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡಿದ್ದಾರೆ.ಆರಂಭದಲ್ಲಿಯೇ ಒಂದುವರೆ ವರ್ಷದ ನಂತರ ಫಲ ಕೊಡಲು ಆರಂಭಿಸಿದ್ದು, ಉತ್ತಮ ಫಸಲು ಬಂದಿದೆ. ಮೊದಲ ಸಲ ಒಂದು ಕ್ವಿಂಟಲ್ ಬಂದಿದ್ದು ಕ್ವಿಂಟಲ್ ಗೆ 9500 ರುಪಾಯಿ ಎರಡನೇ ಬಾರಿ 2.50 ಕ್ವಿಂಟಲ್ ಬಂದಿದ್ದು 27000 ರುಪಾಯಿ ಬಂದಿದೆ. ಕೆಜಿ ಹಣ್ಣಿಗೆ 120 ರಿಂದ 150 ಬೆಲೆ ಇದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಡ್ರ್ಯಾಗನ್‌ ಫ್ರೂಟ್‌ ಮಾರಾಟ ಮಾಡುತ್ತಾರೆ. ಡ್ರ್ಯಾಗನ್‌ ಫ್ರೂಟ್‌ ಕಳ್ಳಿ ಜಾತಿಗೆ ಸೇರಿದ ಸಸ್ಯ ಹೆಚ್ಚು ನೀರು ಬೇಡದ, ರೋಗ ಬಾಧೆ ಕಾಡದ ಬೆಳೆಯಾಗಿದ್ದು, ಹಣ್ಣುಗಳು ಹುಳಿ ಮತ್ತು ಸಿಹಿ ಮಿಶ್ರಿತವಾಗಿರುತ್ತದೆ. ಈ ಹಣ್ಣನ್ನು ಬಳಸುವುದರಿಂದ ಅಧಿಕ ಪೋಷಕಾಂಶಗಳು ಸಿಗುತ್ತವೆ. ಇದನ್ನು ಹೆಚ್ಚಾಗಿ ಔಷಧ ತಯಾರಿಕೆಗೆ ಬಳಸಲಾಗುತ್ತದೆ ಎಂದು ರೈತ ಗುರುಪಾದ ದೊಡ್ಡಮನಿ ತಿಳಿಸಿದರು.

ಹೊಲದಲ್ಲಿ ಕಲ್ಲು ಅಥವಾ ಸಿಮೆಂಟ್‌ ಕಂಬಗಳನ್ನು ಹಾಕಿ ಕಳ್ಳಿ ಜಾತಿಯ ಈ ಸಸ್ಯವನ್ನು ಅಂಟಿಸುತ್ತಾರೆ. ಕಂಬದ ಜತೆಗೆ ಬೆಳೆದು ನಿಲ್ಲುವ ಸಸ್ಯ ಕೆಲ ದಿನಗಳ ನಂತರ ದ್ವಿಚಕ್ರ ವಾಹನಗಳ ಟೈರ್‌ಗಳನ್ನು ಹಾಕಿ ಇಳುವರಿ ಹೆಚ್ಚು ಬರುವಂತೆ ಮಾಡುತ್ತಾರೆ ಎನ್ನುತ್ತಾರೆ

ಅದೇನೇ ಇರಲಿ, ನಂದರ್ಗಾ ಗ್ರಾಮದ ಗುರುಪಾದ ದೊಡ್ಡಮನಿ ಅವರ ತೋಟದಲ್ಲಿ ಬೆಳೆದಿರುವ ಡ್ರ್ಯಾಗನ್‌ ಫ್ರೂಟ್‌ ಇದೀಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌