ತಾಲೂಕಿಗೊಂದು ಸೂಪರ್‌ ಮಾರ್ಕೆಟ್‌ ಸೇವೆ

KannadaprabhaNewsNetwork |  
Published : Jun 15, 2024, 01:11 AM IST
(ಪೋಟೊ 14 ಬಿಕೆಟಿ3, ಎನ್ ಆರ್ ಎಲ್ ಎಮ್ ಯೋಜನೆಯಡಿ ಸೌಲಭ್ಯ ಪಡೆದುಕೊಂಡ ಮಹಿಳಾ ಸ್ವ-ಸಹಾಯ ಸಂಘಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿದರ್ ಕುರೇರ್) | Kannada Prabha

ಸಾರಾಂಶ

ಪ್ರತಿ ತಾಲೂಕಿನಲ್ಲಿ ಮಾರುಕಟ್ಟೆ ಇರುವಂತಹ ಸ್ಥಳದಲ್ಲಿ ಸುಜಜ್ಜಿತವಾದ ಕಟ್ಟಡವನ್ನು ಗುರುತಿಸುವ ಮೂಲಕ ಸೂಪರ್ ಮಾರುಕಟ್ಟೆ ಸೇವೆ ವ್ಯವಸ್ಥೆ ಜನತೆಗೆ ಸಿಗುವಂತೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರತಿ ತಾಲೂಕಿನಲ್ಲಿ ಮಾರುಕಟ್ಟೆ ಇರುವಂತಹ ಸ್ಥಳದಲ್ಲಿ ಸುಜಜ್ಜಿತವಾದ ಕಟ್ಟಡವನ್ನು ಗುರುತಿಸುವ ಮೂಲಕ ಸೂಪರ್ ಮಾರುಕಟ್ಟೆ ಸೇವೆ ವ್ಯವಸ್ಥೆ ಜನತೆಗೆ ಸಿಗುವಂತೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಸೂಚಿಸಿದರು.

ನಗರದ ಜಿಪಂ ಹಳೆ ಸಭಾಂಗಣದಲ್ಲಿ ಎನ್ಆರ್‌ಎಲ್‌ಎಂ ಯೋಜನೆಯಡಿ ಸೌಲಭ್ಯ ಪಡೆದುಕೊಂಡ ಮಹಿಳಾ ಸ್ವ-ಸಹಾಯ ಸಂಘಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ತಾಲೂಕಿಗೆ ಒಂದರಂತೆ ಸೂಪರ್ ಮಾರುಕಟ್ಟೆ, ಮೊಬೈಲ್ ಕ್ಯಾಂಟಿನ್ ಮತ್ತು ಅಕ್ಕಪಕ್ಕ ಕೆಫೆ ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ಮಹಿಳಾ ಸ್ವ-ಸಹಾಯ ಸಂಘಗಳು ಒಂದು ವಾರದೊಳಗೆ 3 ಪ್ರಸ್ತಾವನೆಗಳನ್ನು ಸಲ್ಲಿಸಿದಲ್ಲಿ ಸೂಪರ್‌ ಮಾರುಕಟ್ಟೆ, ಮೊಬೈಲ್‌ ಕ್ಯಾಂಟೀನ್‌ ತೆರೆಯಲು ಸ್ಥಳ ಮತ್ತು ಕಟ್ಟಡವನ್ನು ಪರಿಶೀಲನೆ ನಡೆಸಿ ಅನುಮತಿ ನೀಡಲಾಗುವುದು. ಈ ಕಾರ್ಯಕ್ರಮಕ್ಕಾಗಿ ಈಗಾಗಲೇ ಸಾಕಷ್ಟು ಪ್ರಚಾರವನ್ನು ನೀಡಲಾಗಿದೆ. ಜೂನ್‌ ಮಾಹೆಯ ಅಂತ್ಯದೊಳಗೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸೂಪರ್ ಮಾರುಕಟ್ಟೆ, ಕ್ಯಾಂಟಿನ್‌ಗಳನ್ನು ಪ್ರಾರಂಭಿಸುವ ಮೂಲಕ ಮಹಿಳೆಯರು ತಮ್ಮದೇ ಆದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮಹಿಳೆಯರಿಗೆ ಡಿಎಲ್‌ ವ್ಯವಸ್ಥೆ:

ಕಳೆದ ವಾರದಲ್ಲಿ 177 ಜನ ಎಸ್‌ಎಚ್‌ಜಿ ಮಹಿಳೆಯರಿಗೆ ವಾಹನ ಚಾಲನೆ ತರಬೇತಿ ನೀಡಲಾಗಿದ್ದು, ತರಬೇತಿ ಪಡೆದ ಎಲ್ಲರಿಗೂ ಡ್ರೈವಿಂಗ್‌ ಲೈಸೆನ್ಸ್‌ ನೀಡುವ ವ್ಯವಸ್ಥೆಯಾಗಬೇಕು. ಮತ್ತು ತಕ್ಷಣ ಕಸ ಸಂಗ್ರಹ ವಿಲೇವಾರಿ ವಾಹನಗಳನ್ನು ನೀಡಿದಲ್ಲಿ ತರಬೇತಿಗೆ ಸದುಪಯೋಗವಾಗುತ್ತದೆ. ಬೇರೆ ಜಿಲ್ಲೆಗಳಲ್ಲಿ ಪ್ರತಿಶತ ಈ ಕಾರ್ಯಕ್ರಮ ಕಾರ್ಯರೂಪಕ್ಕೆ ಬಂದಿದ್ದು, ನಮ್ಮ ಜಿಲ್ಲೆಯಲ್ಲಿಯೇ ಅರ್ಧದಷ್ಟು ಮಾತ್ರ ವಾಹನಗಳ ವಿತರಣೆಯಾಗಿರುತ್ತದೆ. ಇದಕ್ಕೆ ಸಂಬಂಧಪಟ್ಟ ಪಂಚಾಯುತಿ ಅಭಿವೃದ್ಧಿ ಅಧಿಕಾರಿಗಳು ಗಮನ ಹರಿಸಿ ಕೆಲಸ ಮಾಡುವಂತೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಎನ್ಆರ್‌ಎಲ್ಎಂ ಯೋಜನೆಯ ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕರಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಎನ್.ವೈ.ಬಸರಿಗಿಡದ, ಸಹಾಯಕ ಯೋಜನಾ ನಿರ್ದೇಶಕ ಭೀಮಪ್ಪ ತಳವಾರ ಹಾಗೂ ವಿವಿಧ ಸ್ವ-ಸಹಾಯ ಸಂಘಗಳ ಪದಾಧಿಕಾರಿಗಳು ಇದ್ದರು.

ಪ್ರತಿ ತಾಲೂಕಿಗೆ ಒಂದರಂತೆ ಸೂಪರ್ ಮಾರುಕಟ್ಟೆ, ಮೊಬೈಲ್ ಕ್ಯಾಂಟಿನ್ ಮತ್ತು ಅಕ್ಕಪಕ್ಕ ಕೆಫೆ ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ಮಹಿಳಾ ಸ್ವ-ಸಹಾಯ ಸಂಘಗಳು ಒಂದು ವಾರದೊಳಗೆ 3 ಪ್ರಸ್ತಾವನೆಗಳನ್ನು ಸಲ್ಲಿಸಿದಲ್ಲಿ ಸೂಪರ್‌ ಮಾರುಕಟ್ಟೆ, ಮೊಬೈಲ್‌ ಕ್ಯಾಂಟೀನ್‌ ತೆರೆಯಲು ಸ್ಥಳ ಮತ್ತು ಕಟ್ಟಡವನ್ನು ಪರಿಶೀಲನೆ ನಡೆಸಿ ಅನುಮತಿ ನೀಡಲಾಗುವುದು.

- ಶಶಿಧರ ಕುರೇರ, ಜಿಪಂ ಸಿಇಒ.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ