ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಆಹಾರ ಸುರಕ್ಷಿತ ಅಧಿಕಾರಿಗಳು ಬೇಕರಿಯಲ್ಲಿನ ತಿಂಡಿ ಮತ್ತು ತಂಪು ಪಾನೀಯಗಳ ತಯಾರಿಸಿರುವ ದಿನಾಂಕ ಮತ್ತು ಅವಧಿ ಮೀರುವ ದಿನಾಂಕಗಳನ್ನು ಪರಿಶೀಲನೆ ನಡೆಸಿ ಸ್ಥಳ ದಲ್ಲೆ ನೋಟೀಸ್ ನೀಡಿದರು. ಅಂಗಡಿಯ ಮಾಲೀಕರು ಗ್ರಾಹಕರಿಗೆ ಉತ್ತಮವಾದ ತಂಪು ಪಾನೀಯ ಮತ್ತು ಶುದ್ಧವಾದ ಆಹಾರ ಪದಾರ್ಥಗಳನ್ನು ನೀಡಬೇಕು, ಎಲ್ಲ ತಿಂಡಿ ಪದಾರ್ಥಗಳ ಮೇಲೆ ತಯಾರಿಸಿರುವ ದಿನಾಂಕ ಮತ್ತು ಅವಧಿ ಮೀರುವ ದಿನಾಂಕಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಅವಧಿ ಮೀರಿರುವ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಗ್ರಾಹಕರಿಗೆ ನೀಡಬಾರದು ಹಾಗೂ ಎಲ್ಲ ಹೋಟೆಲ್ ಮತ್ತು ಬೇಕರಿ ಮಾಲೀಕರು ಕಡ್ಡಾಯವಾಗಿ ಆಹಾರ ಪರವಾನಿಗೆ ಪಡೆಯಬೇಕು, ಇಲ್ಲದಿದ್ದರೆ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಸ್ಥಳದಲ್ಲೇ ಸೂಚಿಸಿದರು. ಕೋಟ್ಪಾ ಕಾಯ್ದೆ ಅಡಿಯಲ್ಲಿ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದವರಿಗೆ ದಂಡ ವಿಧಿಸಿದರು, ಯಾವುದೇ ಕಾರಣಕ್ಕೂ ತಂಬಾಕು ನಿಷೇಧ ಪ್ರದೇಶದಲ್ಲಿ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡಬಾರದು ಎಂದು ತಿಳಿಸಿದರು.
ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಾದ ರವಿರಾಜ್, ಪ್ರತಾಪ್ ಇದ್ದರು.