ಶಿಕ್ಷಕರೇ ಕಣ್ಣಿಗೆ ಕಾಣುವ ದೇವರು

KannadaprabhaNewsNetwork |  
Published : Dec 28, 2023, 01:46 AM ISTUpdated : Dec 28, 2023, 01:47 AM IST
ಗುರುವಂದನಾ ಕಾರ್ಯಕ್ರಮವನ್ನು ಗುರು ಸಿದ್ದವೀರ ಶಿವಯೋಗಿ ಶಿವಾಚಾರ್ಯ ಶ್ರೀಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ನರಗುಂದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ 1993-94ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ, ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ನರಗುಂದ: ಗುರುಕುಲದಂತೆ ಇರುವ ಕನ್ನಡ ಶಾಲೆಗಳು ವಿದ್ಯಾರ್ಥಿಗಳಿಗೆ ಸಾರ್ಥಕ ಬದುಕು ನೀಡಿವೆ ಎಂದು ಪುಣ್ಯಾರಣ್ಯ ಪತ್ರೀವನ ಮಠದ ಡಾ. ಗುರು ಸಿದ್ದವೀರ ಶಿವಯೋಗಿ ಶಿವಾಚಾರ್ಯ ಶ್ರೀಗಳು ಹೇಳಿದರು.ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ 1993-94ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಬಳಗದಿಂದ ಶನಿವಾರ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ 30 ವರ್ಷಗಳ ಆನಂತರದ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಂಥ ವಿದ್ಯಾರ್ಥಿಯೇ ಇರಲಿ, ತಾರತಮ್ಯ ಮಾಡದೇ ನಮ್ಮನ್ನೆಲ್ಲ ವಿಶಿಷ್ಟವಾದ ಮೂರ್ತಿಗಳನ್ನಾಗಿ ಮಾಡಿದ ಗುರುಗಳು ಕಣ್ಮುಂದೆ ಕಾಣುವ ನಡೆದಾಡುವ ದೇವರಾಗಿದ್ದಾರೆ ಎಂದು ಹೇಳಿದರು.ನಾವೆಷ್ಟೇ ಎತ್ತರಕ್ಕೆ ಬೆಳೆದರೂ ಗುರುವಿಗೆ ನಮಿಸುವುದು ನಿಜವಾದ ಧರ್ಮವಾಗಿದೆ. ಸಮಾಜದಲ್ಲಿ ಒಬ್ಬ ವ್ಯಕ್ತಿಗೆ ಗೌರವ ಬರಲು ತಂದೆ, ತಾಯಿ, ಗುರು ಆಗಿದ್ದಾರೆ ಎಂದು ಹೇಳಿದರು.ಸ್ನೇಹಿತರು ಯಾವುದೇ ಮೂಲೆಯಲ್ಲಿರಲಿ, ಪರಸ್ಪರ ಭೇಟಿಯಾಗುತ್ತಾ ಇರಬೇಕು. ಬಾಂಧವ್ಯ ಎನ್ನುವುದು ಜೀವನದಲ್ಲಿ ಬಹಳ ಮುಖ್ಯ. ಆ ಬಾಂಧವ್ಯ ಉಳಿಸಿಕೊಂಡು ಹೋಗಬೇಕು ಎಂದು ಹೇಳಿದರು.1993-94ನೇ ಸಾಲಿನ ವಿದ್ಯಾರ್ಥಿ ಬಳಗದ ವತಿಯಿಂದ ಅಗಲಿದ ಗುರುಗಳು ಹಾಗೂ ಸ್ನೇಹಿತರ ಬಳಗದ ಕಿರುಚಿತ್ರ ಭಿತ್ತರಿಸಲಾಯಿತು. ಮತ್ತು ಅವರೆಲ್ಲರಿಗೂ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ತಾವು ಕಲಿತಿರುವ ಶಾಲೆಗೆ ಡಯಾಸ್ ಅನ್ನು ಕೊಡುಗೆಯಾಗಿ ನೀಡಿದರು.ಶಿಕ್ಷಕರಾದ ಆರ್.ಜಿ. ದೇಶಪಾಂಡೆ, ಜೆ.ಡಿ. ಪಾಟೀಲ, ಎಂ.ಆರ್. ಕಾಳೆ, ಎನ್.ಆರ್. ಕಾರಜೋಳ, ಎ.ಆರ್. ಸಜ್ಜನ, ಬಿ.ಎಂ. ದಡ್ಡಿ, ಎಂ.ಎಸ್. ಬಂಗಾರಿಮಠ, ಆರ್.ಕೆ. ಆನೇಗುಂದಿ, ಆರ್.ಎಲ್. ಮಲಗಾಂವಿ, ಆರ್.ಎಲ್. ವಾಸನದ, ಎಂ.ಎಸ್. ಯಾವಗಲ್ಲ, ಆನೇಗುಂದಿ, ಎಸ್.ಎಂ. ಬಸನಗೌಡ್ರ, ಡಿ.ಎ. ಬತಗುಣಕಿ, ಬಿ. ವೈ. ಭಜಂತ್ರಿ, ಎಸ್.ಐ. ಲೈನ್ ಮುಂತಾದ ಗುರುವೃಂದದವರನ್ನು ಗೌರವಿಸಲಾಯಿತು.ಸಂಜು ಸಾಠೆ, ವಿಜಯಕುಮಾರ ಸಜ್ಜನ, ಚಿಕ್ಕಯ್ಯ ಹಿರೇಮಠ, ರಾಘವೇಂದ್ರ ಮುಧೋಳೆ, ಶ್ರೀಧರ ಮುಧೋಳೆ, ಪ್ರಕಾಶ ನಂದಿ, ಬಸವರಾಜ ಕೋಳೂರಮಠ, ಧರಣೇಂದ್ರ ರೋಖಡೆ, ಶ್ರೀವಲ್ಲಬ ಆನೇಗುಂದಿ, ಗೌರಿಶಂಕರ ಬೋನಗೇರಿ, ಪುಂಡಲೀಕ ಶಿಂಧೆ, ಅರ್ಜುನ ಬೋಯಿಟೆ, ರಾಜು ಮುಳಿಕ, ಶೇಖರಗೌಡ ಸಿದ್ದಾಪುರ, ಮಾರುತಿ ಯಾದವ, ಸುರೇಶ ಪಟ್ಟೇದ, ಇಮಾಮ ನವದಿ ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ